ಸಂಸತ್ತಿನಲ್ಲಿ ಬಾಡಿಗೆ ತಾಯಿ ಅಥವಾ ಬದಲಿ ತಾಯಿಯ ಮೂಲಕ ಮಗುವನ್ನು ಪಡೆಯುವ ಕುರಿತಾದ ವಿವಾದಿತ “ಸರೋಗೆಸಿ ವಿಧೇಯಕಕ್ಕೆ” ಅನುಮೋದನೆ ನೀಡಲಾಗಿದೆ.
ಸರೋಗೆಸಿ ವಿಧೇಯಕ ಅನುಮೋದನೆ ದೊರೆತಿರುವುದರಿಂದ ಇನ್ನುಮುಂದೆ ದೇಶದಲ್ಲಿ ಹಣ ನೀಡಿ ಬೇರೆಯವರ ಗರ್ಭದಲ್ಲಿ ತಮ್ಮ ಮಗುವಿನ ಜನ್ಮ ಪಡೆಯುವ ವ್ಯವಹಾರ ಕಾನೂನಾತ್ಮಕವಾಗಿ ಕೈಗೊಳ್ಳಬಹುದಾಗಿದೆ.
ಡಿಸೆಂಬರ್ 14ರಂದು ಹಲವು ತಿದ್ದುಪಡಿಗಳೊಂದಿಗೆ ರಾಜ್ಯಸಭೆಯಲ್ಲಿ ಈ ವಿಧೇಯಕವನ್ನು ಶುಕ್ರವಾರ ಲೋಕಸಭೆಗೆ ವಾಪಸ್ ಕಳುಹಿಸಲಾಗಿತ್ತು.
ಕೆಳಮನೆಯಲ್ಲಿ ಪ್ರತಿಪಕ್ಷಗಳ ಗದ್ದಲದ ನಡುವೆಯೇ ಧ್ವನಿಮತದ ಮೂಲಕ ಸರೋಗೆಸಿ ವಿಧೇಯಕಕ್ಕೆ ಅನುಮತಿ ದೊರೆತಿದೆ.
ಬಾಡಿಗೆ ತಾಯ್ತನವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ‘ರಾಷ್ಟ್ರೀಯ ಸರೋಗೆಸಿ’ ಮತ್ತು ‘ರಾಜ್ಯ ಸರೋಗೆಸಿ ಮಂಡಳಿ’ ಬದಲಾಯಿಸಲು ರಚನೆ, ಸರೋಗೆಸಿ ಪ್ರಕ್ರಿಯೆಯ ನಿಯಂತ್ರಣಕ್ಕೆ ಸೂಕ್ತ ಅಧಿಕಾರಗಳ ನೇಮಕಾತಿ ಸೇರಿದಂತೆ ಹಲವು ನೂತನ ಪ್ರಸ್ತಾವಗಳನ್ನು ಹೊಸ ಕಾಯ್ದೆ ಒಳಗೊಂಡಿದೆ.
ಅಧಿಕೃತವಾಗಿ ಮದುವೆಯಾಗಿ ಐದು ವರ್ಷ ಆಗಿರುವ ಭಾರತೀಯ ದಂಪತಿ ಮಾತ್ರ ‘ಸರೋಗೆಸಿ’ ಗೆ ಅರ್ಹರಾಗಿರುತ್ತಾರೆ. ಆದರೆ ಈ ಪ್ರಕ್ರಿಯೆಯು ಸೇವಾ ಅಥವಾ ನೈತಿಕತೆ ಆಧರಿತವಾಗಿರಬೇಕೆ ಮಗುವನ್ನು ಪಡೆಯಲು ಚಿಕಿತ್ಸೆ ವೆಚ್ಚ ಹೊರತಾಗಿ ಇತರ ಯಾವುದೇ ಹಣಕಾಸು ವ್ಯವಹಾರಗಳನ್ನು ನಡೆಸುವಂತ್ತಿಲ್ಲ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.