Thursday, September 17, 2026
Thursday, September 17, 2026

K.S.Eshwarappa ಪ್ರಭು ಶ್ರೀರಾಮನ ರಕ್ಷಣೆಯಲ್ಲಿ ನಾನು ಎಂಪಿ ಆಗುತ್ತೇನೆ- ಈಶ್ವರಪ್ಪ

Date:

K.S.Eshwarappa ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರಿಲ್ಲ, ಬಿಜೆಪಿಯಲ್ಲಿ ಇದ್ದವರು ನನ್ನ ಜೊತೆ ಬಂದಿದ್ದಾರೆ. ನನ್ನನ್ನು ಗೆಲ್ಲಿಸಲು ಎಲ್ಲಾ ವರ್ಗದ ಜನ ತಿರ್ಮಾನ ಮಾಡಿದ್ದಾರೆ. ಹೀಗಾಗಿ ಗೆದ್ದೆ ಗೆಲ್ಲುತ್ತೇನೆ ಎಂದು ಲೋಕಸಭಾ ಚುನಾವಣೆ ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಬಿಜೆಪಿ ಸೋಲಿಸಬೇಕು. ಹಿಂದೂ ಪರ ಹೋರಾಟ ಮಾಡುತ್ತಿರುವ ಈಶ್ವರಪ್ಪ ಗೆಲ್ಲಿಸಬೇಕು ಎಂದು ಜನ ತೀರ್ಮಾನ ಮಾಡಿದ್ದಾರೆ. ಪ್ರಭು ಶ್ರೀರಾಮನ ರಕ್ಷಣೆಯಲ್ಲಿ ನಾನು ಎಂಪಿ ಆಗುತ್ತೇನೆ ಎಂದರು.

ಮೊದಲು ಈಶ್ವರಪ್ಪ ಸ್ಪರ್ಧೆ ಮಾಡಲ್ಲ ಎಂದರು, ಅಮೇಲೆ ನಾಮಪತ್ರ ಸಲ್ಲಿಸಲ್ಲ ಅಂತ ಅಪಪ್ರಚಾರ ಮಾಡಿದರು. ಈಗ ನಾಮಪತ್ರ ವಾಪಸ್ಸು ಪಡೆಯುತ್ತಾರೆ ಅಂತ ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯಲ್ಲ. ಸ್ಪರ್ಧೆ ಮಾಡೇ ಮಾಡುತ್ತೇನೆ ಎಂದು ಹೇಳಿದರು.

ಕಾಂಗ್ರೆಸ್ ಚೆಂಬು ಅಭಿಯಾನ ಮಾಡುತ್ತಿದೆ. ಮೋದಿಗೆ ಚೆಂಬು ಕೊಡುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ಬೇರೆ ಗತಿ ಇಲ್ಲ. ಅವರೇ ಚೊಂಬೇ ಗತಿ. ಜೂನ್ 4 ರಂದು ಇಡೀ ದೇಶದಲ್ಲಿ ಕಾಂಗ್ರೆಸ್ ಕೈಗೆ ಚೆಂಬು ಸಿಗುತ್ತದೆ ಎಂದರು.

K.S.Eshwarappa ರಾಜ್ಯದಲ್ಲಿ ಮುಸಲ್ಮಾನನೊಬ್ಬ ಹಿಂದೂ ಯುವತಿಯನ್ನು ಹತ್ಯೆ ಮಾಡಿದ್ದಾನೆ. ರಾಜ್ಯ ಸರ್ಕಾರ ಹಿಂದುಗಳ ರಕ್ಷಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಮುಸಲ್ಮಾನರನ್ನು ಮಾತ್ರ ರಾಜ್ಯ ಸರ್ಕಾರ ರಕ್ಷಣೆ ಮಾಡುತ್ತಿದೆ. ಕೊಲೆ ಮಾಡಿದ ಗುಂಡಾನನ್ನು ಗುಂಡು ಹೊಡೆದು ಸಾಯಿಸಬೇಕಿತ್ತು. ಅದನ್ನು ಬಿಟ್ಟು ವೈಯಕ್ತಿಕ ದ್ವೇಷ ಅನ್ನುತ್ತಿದ್ದಾರೆ. ಇದು ಇಡೀ ದೇಶದ ರಾಜ್ಯದ ಹಿಂದುಗಳಿಗೆ ಮಾಡುತ್ತಿರುವ ಅಪಮಾನ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಇದನ್ನು ಅನುಭವಿಸುತ್ತಾರೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...