Thursday, September 17, 2026
Thursday, September 17, 2026

Shimoga Solanki Traders ಶಿವಮೊಗ್ಗದ ಸೋಲಂಕಿ ಟ್ರೇಡರ್ಸ್ ನಲ್ಲಿ ₹ 2.40.000 ಕಳವು, ದೂರು ದಾಖಲು

Date:

Shimoga Solanki Traders ಶಿವಮೊಗ್ಗದ ಗಾರ್ಡನ್ ಏರಿಯಾದ ಸೋಲಂಕಿ ಟ್ರೇಡರ್ಸ್ ನಲ್ಲಿ ಕಳ್ಳತನವಾಗಿದೆ. ನಾಲ್ಕು ದಿನಗಳ ವ್ಯಾಪಾರದ ಹಣ 2,40,000 ರೂ. ಕಳುವಾಗಿದೆ ಎಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ.
ಗಾರ್ಡನ್ ಏರಿಯಾ 2ನೇ ಕ್ರಾಸ್ ನಲ್ಲಿರುವ ಪಿ,ಡಿ, ಸೋಲಂಕಿ ರವರಿಗೆ ಸೇರಿದ ಸೋಲಂಕಿ ಟ್ರೇಡರ್ಸ್ ನಲ್ಲಿ ಏ.15 ರಿಂದ 19 ರವರೆಗೆ ವ್ಯಾಪಾರದ ಮೊತ್ತವಾದ 2,40,000/- ರೂ ನಗದು ಹಣವನ್ನು ಅಂಗಡಿಯ ಕ್ಯಾಶ್ ಕೌಂಟರ್ ನಲ್ಲಿ ಇಟ್ಟು ಬೀಗ ಹಾಕಿಕೊಂಡು ಹೋಗಲಾಗಿತ್ತು,

ನಿನ್ನೆ ಬೆಳಿಗ್ಗೆ ಬ್ಯಾಂಕ್ ಗೆ ಕಟ್ಟಲು ಗಜೇಂದ್ರ ದೇಸಾಯಿ ಮತ್ತು ಮಾಲೀಕರ ಮಗ ಅಶೋಕ್ ಪಿ ಸೋಲಂಕಿ ರವರು ಹಣಳನ್ನ ಎಣಿಸಿ ಮಾಲೀಕರು ಮನೆಯಲ್ಲಿ ಇಲ್ಲವಾದುದರಿಂದ ಅಂಗಡಿಯಲ್ಲಿಯೇ ಕ್ಯಾಶ್ ಕೌಂಟರ್ನಲ್ಲಿ ಇರಿಸಿ ಬಾಗಿಲು ಹಾಕಿಕೊಂಡು ಹೋಗಿದ್ದರು.

Shimoga Solanki Traders ನಿನ್ನೆ ಬೆಳಿಗ್ಗೆ 9 ಗಂಟೆಗೆ ಗಜೇಂದ್ರ ದೇಸಾಯಿ ಮತ್ತೋರ್ವ ಅಂಗಡಿಯ ನೌಕರ ಮಹೇಂದ್ರ ಕುಮಾರ್ ಸೇನ್ ಇಬ್ಬರು ಅಂಗಡಿಯ ಬೀಗ ತೆಗೆದು ಒಳಗೆ ಹೋದಾಗ ಕ್ಯಾಶ್ ಕೌಂಟರ್ ಬಳಿಯ ಡ್ರಾ ಓಪನ್ ಆಗಿತ್ತು. ಪೈಲ್ ಗಳು ಎಲ್ಲಾ, ಚೆಲ್ಲಾಪಿಲ್ಲಿಯಾಗಿದ್ದವು.

ಕ್ಯಾಶ್ ಕೌಂಟರ್ ನಲ್ಲಿ ಇಟ್ಟಿದ ಹಣ ಇರಲಿಲ್ಲ ಅಂಗಡಿಯ ಮೇಲಾವಣಿಯ ರೂಫಿಂಗ್ ಶೀಟ್ ನ್ನು ಓಪನ್ ಮಾಡಿಕೊಂಡು ಗೋಡಾನ್ ಒಳಗೆ ಇಳಿದು ಗೋಡಾನ್ ನಿಂದ ಅಂಗಡಿಗೆ ಬರುವ ಡೊರ್ ನ್ನು ಮುರಿದು ಕ್ಯಾಶ್ ಕೌಂಟ‌ರ್ ಡ್ರಾವನ್ನು ಆಯುಧದಿಂದ ಮುರಿದು 2,40,000/- ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ಈ ಬಗ್ಗೆ ಗಜೇಂದ್ರ ದೇಸಾಯಿ ದೊಡ್ಡಪೇಟೆ ಠಾಣೆಗೆ‌ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...