ಪಾಕಿಸ್ತಾನ ವಿರುದ್ಧದ 1971ರ ಯುದ್ಧದ ಗೆಲುವಿನ 50ನೇ ವರ್ಷಾಚರಣೆ ವಿಜಯ್ ದಿವಸ್ ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಸ್ಮರಿಸದೇ ಇರುವುದು ವಾಗ್ವದಕ್ಕೆ ಕಾರಣವಾಗಿದೆ.
1971 ರಲ್ಲಿ ಇಂದಿರಾ ಗಾಂಧಿ ಪ್ರಧಾನಿ ಆಗಿದ್ದಂತೆ ಆ ಸಂದರ್ಭ. ಯುದ್ಧದಲ್ಲಿ ಭಾರತೀಯ ಸೇನೆ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿತ್ತು. ಪಾಕಿಸ್ತಾನದ ಭಾಗವಾಗಿದ್ದ ಬಾಂಗ್ಲಾದೇಶ ಯುದ್ಧದ ನಂತರ ಪ್ರತ್ಯೇಕ ರಾಷ್ಟ್ರವಾಗಿ ಅಸ್ತಿತ್ವಕ್ಕೆ ಬಂದಿತು.
ವಿಜಯ್ ದಿವಸ್ ಆಚರಣೆಯ ವೇಳೆಯಲ್ಲಿ ಇಂದಿರಾ ಗಾಂಧಿ ಅವರನ್ನು ಸ್ಮರಿಸದ ಕ್ರಮವನ್ನು ಕಾಂಗ್ರೆಸ್ ಪಕ್ಷ ಇದನ್ನು ಖಂಡಿಸಿದೆ. ಕೇಂದ್ರ ಸರ್ಕಾರವು ಸಣ್ಣತನದ ರಾಜಕಾರಣದಲ್ಲಿ ತೊಡಗಿದೆ ಎಂದು ಟೀಕಿಸಿದ್ದಾರೆ.
ಬಾಂಗ್ಲಾದೇಶದ ಮುಕ್ತಿಯಲ್ಲಿ ಇಂದಿರಾಗಾಂಧಿ ಮುಖ್ಯಪಾತ್ರ ವಹಿಸಿದ್ದ ನ್ನು ಸರ್ಕಾರ ಗುರುತಿಸಿರುವುದು ದುರದೃಷ್ಟಕರ ಎಂದು ರಾಜ್ಯಸಭೆಯ ವಿರೋಧ
ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಯುದ್ಧದಲ್ಲಿ ಉನ್ನತ ನಾಯಕತ್ವ ತೋರಿದ್ದ, ಇಂದಿರಾಗಾಂಧಿ ಅವರ ಹೆಸರು ಉಲ್ಲೇಖಿಸದೇ ಕೇಂದ್ರ ಸರ್ಕಾರ ಸಣ್ಣತನದ ರಾಜಕಾರಣ ಮಾಡುತ್ತಿದೆ ಎಂದು ಪಕ್ಷದ ವಕ್ತಾರ ರಣದೀಪ್ ಸುರ್ಜೆವಾಲಾ ಆರೋಪಿಸಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರು, ದೇಶದ ಪ್ರಥಮ, ಏಕೈಕ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ. ಅವರನ್ನು ವಿಜಯ್ ದಿವಸ್ಎಸ್ ವೇಳೆ ಸ್ತ್ರೀ ದ್ವೇಷಿಯಾದ ಬಿಜೆಪಿ ಸರ್ಕಾರ ಮರೆತಿದೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.