Tuesday, May 26, 2026
Tuesday, May 26, 2026

‌Sri Rama Navami ವಿಜಯನಗರದ ಶ್ರೀಶಿವಾನಂದ ಶ್ರೀಗಳಿಂದ ಶ್ರೀರಾಮ ಪೂಜೆ

Date:

Sri Rama Navami ಶ್ರೀರಾಮ ನವಮಿಯ ಅಂಗವಾಗಿ ಚಿಂತಾಮಣಿ ಮೂಲ ಮಠದಲ್ಲಿರುವ ರಾಮ ಗುಹೆಗೆ ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು ಭಕ್ತರೊಂದಿಗೆ ತೆರಳಿ “ಶ್ರೀರಾಮಚಂದ್ರ ಪ್ರಭುವಿಗೆ” ಪೂಜೆ ಸಲ್ಲಿಸಿದರು.

ಗುಜರಾತ್ ನಿಂದ ಆಗಮಿಸಿದ್ದ ಪ್ರವಾಸಿಭಕ್ತರು ರಾಮ ಪೂಜೆಯಿಂದ ಸಂತೋಷಗೊಂಡು “ರಾಮ ಭಜನೆ” ಮಾಡಿದರು. ನಂತರ ಶ್ರೀಮಠದ ಪ್ರವೇಶ ದ್ವಾರದಲ್ಲಿರುವ “ಚಿಂತಾಮಣಿ ಮಾರುತಿ”ಗೆ ಶ್ರೀ ಗುರುಗಳು ಪೂಜೆ ಸಲ್ಲಿಸಿದರು.

ಆನೆಗುಂದಿ ಗ್ರಾಮದ ಪಂಚಾಯಿತಿ ಅಧ್ಯಕ್ಷರು ಹಾಗು ಗ್ರಾಮದ ಹಿರಿಯರು “ಶ್ರೀಗುರುಗಳನ್ನು” ಗ್ರಾಮದ “ರಾಮ ಮುಂದಿರ”ಕ್ಕೆ ಚಿತ್ತೈಸುವಂತೆ ಪ್ರಾರ್ಥಿಸಿದರು. ಅದರಂತೆ ಶ್ರೀಗುರುಗಳು ರಾಮ ಮಂದಿರಕ್ಕೆ ತೆರಳಿ ರಾಮಪ್ರಭುವಿಗೆ ಮಂಗಳಾರತಿ ನೆರವೇರಿಸಿ – ನೆರದಿದ್ದ ಭಕ್ತರಿಗೆ ಆಶಿರ್ವಚನ ನೀಡಿದರು.

Sri Rama Navami “ರಾಮನ ಗುಣಗಳ ಬಗ್ಗೆ ಹಾಗು ರಾಮನಾಮದ ಮಹಿಮೆಯ” ಬಗ್ಗೆ ಶ್ರೀಗುರುಗಳಿಂದ ಪ್ರವಚನ ಆಲಿಸಿದ ಆನೆಗುಂದಿಯ ಗ್ರಾಮಸ್ಥರು ಸಂತೋಷದಿಂದ ಗುರುಗಳಿಗೆ ಜೈ ಘೋಷ ಕೂಗಿ ನಮಸ್ಕರಿಸಿದರು.

ಆನೆಗುಂದಿಗ್ರಾಮದ ವೃತ್ತದಲ್ಲಿ ಚಿಂತಾಮಣಿ ಮಠದ ಭಕ್ತರು ಗ್ರಾಮನಿವಾಸಿಗಳಿಗೆ ಪಾನಕ, ಕೋಸಂಬರಿಯನ್ನು ವಿತರಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಬದುಕಿನ ಪುಟದಲ್ಲೊಂದು ಘಟನೆ

ಪ್ರಸಾದ್ ಶ್ರೀವತ್ಸ ,ದಾವಣಗೆರೆ. Klive Special Article ಮನುಷ್ಯನೆಂದ ಮೇಲೆ ಹಲವಾರು ಸರಿ-ತಪ್ಪು...

Rotary Shivamogga ವೈವಿಧ್ಯಮಯ ಕಲಾಪ್ರಕಾರಗಳ ಕಲಿಕೆಯಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿ- ಡಿ.ಕಿಶೋರ್ ಕುಮಾರ್

Rotary Shivamogga ಬಾಲ್ಯದಿಂದಲೇ ಕಲೆ, ಸಾಹಿತ್ಯ, ನೃತ್ಯದ ಬಗ್ಗೆ ಮಕ್ಕಳಲ್ಲಿ ಆಸಕ್ತಿ...

Dinesh Gundu Rao ಎಬೊಲಾ ಸೋಂಕು ಬಾರದಂತೆ ಆರೋಗ್ಯ ಇಲಾಖೆ ಅಗತ್ಯ ಕ್ರಮ.- ದಿನೇಶ್ ಗುಂಡೂರಾವ್

Dinesh Gundu Rao ಎಬೋಲಾ ಸೋಂಕು ಬಾರದಂತೆ ತಡೆಯಲು ಆರೋಗ್ಯ ಇಲಾಖೆಯಿಂದ...