Thursday, June 18, 2026
Thursday, June 18, 2026

Madhu Bangarappa ಶಿವಮೊಗ್ಗದಲ್ಲಿ ಬಿಜೆಪಿಗೆ ಸೋಲಿನ ರುಚಿ ತೋರಿಸುವೆ- ಮಧು ಬಂಗಾರಪ್ಪ

Date:

Madhu Bangarappa ಲೋಕಸಭೆ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಗೆಲುವಿನ ಹಂತ ಮೀರಿ ಮುಂದಿದ್ದಾರೆ. ಇದನ್ನರಿತಿರುವÀ ಬಿಜೆಪಿಯವರು ಮೋದಿ ಹೆಸರಲ್ಲಿ ಸುಳ್ಳು ಬಿತ್ತುತ್ತಿದ್ದಾರೆ. ಜನರನ್ನು ವಂಚಿಸುತ್ತಿದ್ದಾರೆ. ಹೇಗಾದರೂ ಗೆಲ್ಲಬೇಕೆಂದು ಹೊರಟಿದ್ದಾರೆ. ಆದರೆ
ಈ ಬಾರಿ ಬಿಜೆಪಿಗೆ ಸೋಲಿನ ರುಚಿ ತೋರಿಸುತ್ತೇವೆ ಎಂದು ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರೂ ಯಾವ ಮಟ್ಟಕ್ಕೆ ಸುಳ್ಳನ್ನು ಹೇಳುತ್ತಾರೆ ಎಂದರೆ ಬಂಗಾರಪ್ಪ ಸಂಸದರಾಗಿ ಗೆದ್ದಿದ್ದು ಬಿಜೆಪಿಯಿಂದ ಎಂದು ಹೇಳುತ್ತಾರೆ. ಕರ್ನಾಟಕದಲ್ಲಿ ಬಿಜೆಪಿಗೆ ಶಕ್ತಿ ಕೊಟ್ಟಿದ್ದು ಬಂಗಾರಪ್ಪ. ಬಂಗಾರಪ್ಪನವರಿAದಲೇ ಕರ್ನಾಟಕದಲ್ಲಿ ಬಿಜೆಪಿಗೆ ನೆಲೆಸಿಕ್ಕಿದ್ದು ಎನ್ನುವುದು ಮೊದಲು ನೆನಪಿರಲಿ. ಅವರ ಬಗ್ಗೆ ಕೀಳು ಮಟ್ಟದಲ್ಲಿ ಮಾತಾಡುವ ಅವಶ್ಯಕತೆ ಇಲ್ಲ. ಬಂಗಾರಪ್ಪ ಆಶೀರ್ವಾದದಿಂದಲೆ ಕೆಲವು ಬಿಜೆಪಿಯ ನಾಯಕರು ಎಲ್ಲಾ ಅಧಿಕಾರವನ್ನು ಅನುಭವಿಸಿದ್ದಾರೆ. ಯಡಿಯೂರಪ್ಪ ಸೋತಾಗ ಅವರನ್ನು ಗೆಲ್ಲಿಸಿದ್ದೇ ಬಂಗಾರಪ್ಪ ಎಂದು ನೆನೆಪಿಸಿದರು.
Madhu Bangarappa ಯಡಿಯೂರಪ್ಪನವರಿಗೆ ಬಂಗಾರಪ್ಪನವರಿಂದ ಬಲ ಬಂದಿದ್ದು. ನಂತರ ಬಿಜೆಪಿಯ ಹೊಲಸು ರಾಜಕಾರಣಕ್ಕೆ ಬೇಸತ್ತು ಪಕ್ಷ ತೊರೆದು ಸಮಾಜವಾದಿ ಪಕ್ಷದಿಂದ ನಿಂತು ಗೆದ್ದಿದ್ದರು ಅ ಚುನಾವಣೆಯಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡುವಂತಾಗಿತ್ತು .ಆಗ ನಿಮಗೆ ಶಕ್ತಿ ಇರಲಿಲ್ಲವೇ ಎಂದು ಪ್ರಶ್ನಿಸಿದ ಮಧು, ರಾಜಕೀಯವಾಗಿ ಯಡಿಯೂರಪ್ಪನವರ ಫ್ಯಾಮಿಲಿ ಬಂಗಾರಪ್ಪನವರ ಋಣದಲ್ಲಿದೆ ಎನ್ನುವುದು ನೆನಪಿರಲಿ ಎಂದು ಛೇಡಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...