D.K.Shivakumar ನಾವು ಜನರ ಬದುಕಿನ ಮೇಲೆ ಮತ ಕೇಳುತ್ತೇವೆಯೇ ವಿನಾ ಬಿಜೆಪಿಯಂತೆ ಜನರ ಭಾವನೆಯನ್ನು ಕೆರಳಿಸಿ, ಉದ್ರೇಕಿಸಿ ಮತ ಕೇಳುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬದುಕು ಕಟ್ಟಿಕೊಳ್ಳಲು ಜನರು ಕಾಂಗ್ರೆಸ್‌ನ್ನು ಆಡಳಿvಕ್ಕೆ ತಂದಿದ್ದಾರೆ. ಜನರ ನೆರವಿಗೆ ಬಾರದ ಬಿಜೆಪಿಗೆ ಮತಕೇಳಲು ನೈತಿಕತೆ ಇಲ್ಲ. ನಮ್ಮ ಗ್ಯಾರೆಂಟಿಗಳನ್ನ ಜನ ಅನುಭವಿಸುತ್ತಿದ್ದಾರೆ. ಶಕ್ತಿ ಯೋಜನೆ, ಗೃಹಲಕ್ಷ್ಮೀ ಯೋಜನೆ, ಯುವನಿಧಿಯನ್ನು ನೋಡುತ್ತಿದ್ದಾರೆ. ಅದ್ಭುತ ಸ್ಪಂದನೆ ಸಿಕ್ಕಿದೆ. ಅಂತಹ ಯೋಜನೆಯನ್ನು ಮಾಡದೆ ಜನರ ಮನಸ್ಸುಗಳನ್ನು ಒಡೆಯುವುದು ಬಿಟ್ಟರೆ ಬಿಜೆಪಿ ಕೊಡುಗೆ ಏನು ಎಂದು ಪ್ರಶ್ನಿಸಿದರು.
D.K.Shivakumar ಮಹಿಳೆಯರ ಬಗ್ಗೆ ಅವಹೇಳನದ ಮಾತನಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ಬಾಮಿ ವಿರುದ್ಧ ವಾಗ್ದಾಳಿ ನಡೆಸಿದ ಡಿಕೆಶಿ, ಕುಮಾರಸ್ವಾಮಿ ಮಾಜಿ ಪ್ರಧಾನಿ ಮಗ. ನಿಮ್ಮಲ್ಲಿ ಎಂಎಲ್‌ಸಿ ಇದ್ದಾರೆ. ಮಹಿಳಾ ಕಾರ್ಯಕರ್ತರಿದ್ದಾರೆ. ಗ್ಯಾರೆಂಟಿಯಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿ ನಂತರ ತಪ್ಪಾದರೆ ಕ್ಷಮಿಸಿ ಎಂದರೆ ಒಪ್ಪಿಕೊಳ್ಳಲಾಗುತ್ತದೆಯೇ ಎಂದು ಪ್ರಶ್ನಿಸಿದರು.
ಮೊದಲಿಗೆ ಗೃಹಲಕ್ಚ್ಮಿ ಯೋಜನೆಗೆ ಅತ್ತೆ ಸೊಸೆ ಜಗಳ ಆಡುತ್ತಾರೆ ಎಂದರು. ಯಾವುದಾದರೂ ಗಲಾಟೆ ನಡೆಯಿತಾ? ಮಾಜಿ ಸಚಿವ ಆರಗ ಜ್ಞಾನೇಂದ್ರ ಗ್ಯಾರೆಂಟಿಯನ್ನು ೪೨೦ ಎಂದರು. ನಂತರ ನಮ್ಮ ಸಮಾವೇಶದಲ್ಲಿ ಭಾಗವಹಿಸಿದರು.
ಅವರು ಆರಗ ಜ್ಞಾನೇಂದ್ರ ಅಲ್ಲ, ಅರ್ಧ ಜ್ಞಾನೇಂದ್ರ ಎಂದು ಕುಟುಕಿದದಲ್ಲದೆ, ಗ್ಯಾರೆಂಟಿಯ ಲಾಭ ಪಡೆಯುತ್ತಿರುವ ರಾಜ್ಯದ ಉದ್ದಗಲದ ೧ ಕೋಟಿ ೨೦ ಲಕ್ಷದ ಕುಟುಂಬದ ಮಹಿಳೆಯರು ಸ್ವಾಭಿಮಾನದ ಹಿನ್ನಲೆಯಲ್ಲಿ ಹೋರಾಡಬೇಕು. ಬಿಎಸ್ ವೈ, ಅಶೋಕಣ್ಣನಿಗೆ, ಶೋಭಕ್ಕಗೆ ರಾಜ್ಯದ ಜನರು ಉತ್ತರಕೊಡಬೇಕಿದೆ. ಕೇಂದ್ರ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಅನುದಾನದಲ್ಲೂ ತಾರತಮ್ಯ ನೀಡುತ್ತಿಲ್ಲ ಎಂದು ದೂರಿದರು.
೩೪೫೦ ಕೋಟಿ ಹಣ ಕೇಂದ್ರದಿಂದ ಬಿಡುಗಡೆ ಮಾಡುವುದಾಗಿ ಹೇಳಿ ಒಂದು ರೂ.ನೂ ನೀಡಲಿಲ್ಲ. ೧೬ ಜನ ಹಾಲಿ ಎಂಪಿಗೆ ಬಿಜೆಪಿ ಸೀಟ್ ಕೊಡಲಿಲ್ಲ ಏಕೆ? ಬಿಜೆಪಿ ಈಗ ಮೋದಿ ಗ್ಯಾರೆಂಟಿ ಎಂದು ಹೇಳುತ್ತಿದೆ. ನಮ್ಮದು ಹಾಗಲ್ಲ. ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಸಾಮೂಹಿಕ ಗ್ಯಾರೆಂಟಿ ಎಂದರು.
ಅಡಿಕೆ ಸಂಶೋಧನಾ ಕೇಂದ್ರ ಆರಂಭಿಸುವುದಾಗಿ ಹೇಳಿ ಏನು ಆಯಿತು. ಸದಾನಂದ ಗೌಡರು ಡಿಸಿಎಂ ಮತ್ತು ಸಿಎಂ ಅವರನ್ನು ಅಯೋಗ್ಯ ಎಂದು ಬಳಕೆ ಮಾಡಿದ್ದಾರೆ ಆಯ್ತು ಒಪ್ಪಿಕೊಳ್ಳುತ್ತೇವೆ. ನಾವು ಅಯೋಗ್ಯರೆ, ಬರಗಾಲದ ಹಣ ಕೊಡಿಸಲು ನಿಮ್ಮ ಕೊಡುಗೆ ಏನು ಎಂಬುದು ಸದಾನಂದ ಗೌಡರು ಉತ್ತರಿಸಲಿ ಎಂದರು
ಈಶ್ವರಪ್ಪ ಗೀತಾ ಶಿವರಾಜ್‌ಕುಮಾರ್ ಅವರನ್ನು ಡಮ್ಮಿ ಎಂಬ ಆರೋಪಕ್ಕೆ ಈ ಬಾರಿ ಹೇಳಲ್ಲ. ಮುಂದಿನ ದಿನಗಳಲ್ಲಿ ಚುನಾವಣೆ ಪ್ರಚಾರಕ್ಕೆ ಬಂದಾಗ ಮಾತನಾಡುವೆ. ಎಂಪಿಎಂ ಕಾರ್ಖಾನೆ ಪುನಶ್ಚೇತನ ಮಾಡುವುದಾಗಿಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.