Saturday, December 6, 2025
Saturday, December 6, 2025

Manasadhara Trust ಮನಸ್ಫೂರ್ತಿ ಶಿಬಿರವನ್ನ ಮನಸಿನ ಪೂರ್ತಿ ಸದುಪಯೋಗ ಮಾಡಿಕೊಳ್ಳಿ- ಡಾ.ಎನ್.ಸುಧೀಂದ್ರ

Date:

Manasadhara Trust ಮನಸ್ಫೂರ್ತಿ ಶಿಬಿರವನ್ನ ಮನಸಿನ ಪೂರ್ತಿ ಸದುಪಯೋಗ ಮಾಡಿಕೊಳ್ಳಿ- ಡಾ.ಎನ್.ಸುಧೀಂದ್ರ ಡಾ.ರಜನಿ.ಎ. ಪೈ. ಅಧ್ಯಕ್ಷರು, ಮಾನಸಧಾರಾ ಟ್ರಸ್ಟ್, ಶಿವಮೊಗ್ಗ ಹಾಗೂ ಡಾ. ಪ್ರೀತಿ ಶಾನ್ ಭಾಗ್, ಶೈಕ್ಷಣಿಕ ನಿರ್ದೇಶಕರು, ಕಟೀಲಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ ಇವರ ಸಲಹೆ ಹಾಗೂ ಮಾರ್ಗದರ್ಶನದೊಂದಿಗೆ ಪ್ರಾರಂಭವಾದ ಈ ಶಿಬಿರದಲ್ಲಿ ಸರ್ಕಾರಿ ಹಾಗೂ ಸರ್ಕಾರೇತರ ಶಾಲೆಗಳ ಸುಮಾರು 75 ಕ್ಕಿಂತ ಹೆಚ್ಚು ಮಕ್ಕಳು ಭಾಗವಹಿಸಿದ್ದರು.

ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ. ಕೆ.ಲೈವ್ ನ್ಯೂಸ್ ಚಾನಲ್ ಪ್ರಧಾನ ಸಂಪಾದಕರಾದ ಡಾ.ಸುಧೀಂದ್ರ ಎನ್., ಇವರು ಮಾತನಾಡುತ್ತಾ “ಮನಸ್ಫೂರ್ತಿ, ಮನಸ್ಸಿಗೆ ಸ್ಫೂರ್ತಿ” ಎಂದು ಶಬ್ದದ ವಿಶೇಷ ಅರ್ಥವನ್ನು ವಿವರಿಸಿದರು. ಈ ಮನಸ್ಫೂರ್ತಿಗೆ ಉತ್ತಮ ಪ್ರೇರಣೆ ನೀಡುವಲ್ಲಿ ಡಾ.ಅಶೋಕ್ ಪೈರವರ ಪಾತ್ರವನ್ನು ಹಾಗೂ ಅವರ ಸಮಾಜಮುಖಿ ಚಿಂತನೆಗಳನ್ನು ಸ್ಮರಿಸಿದರು. ಅಂತಹ ಮಹಾನುಭಾವರ ಸ್ಫೂರ್ತಿಯನ್ನು ತುಂಬಿಕೊಂಡು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಶಿಬಿರಾರ್ಥಿಗಳನ್ನು ಹುರಿದುಂಬಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ವಿದ್ಯಾ ರಘುದತ್ ರವರು ಮಕ್ಕಳಿಗೆ ಸ್ಫೂರ್ತಿದಾಯಕ ಕಥೆಯನ್ನು ಹೇಳಿದರು. ಕಥೆಯಲ್ಲಿ ಬರುವ ರಾಜನ ಮೂರನೇ ಮಗನ ಬುದ್ಧಿವಂತಿಕೆಯನ್ನು ಹೊಗಳಿ ನಾವೂ ಸಹ ಸಮಯಕ್ಕೆ ತಕ್ಕಂತೆ ನಮ್ಮ ಬುದ್ಧಿಯನ್ನು ಉಪಯೋಗಿಸಿ ಅಲ್ಪ ಸಮಯದಲ್ಲೇ ಶಿಬಿರದಲ್ಲಿ ಕಲಿಸುವ ಕೌಶಲ್ಯಗಳಲ್ಲಿ ನೈಪುಣ್ಯತೆಯನ್ನು ಪಡೆಯಲು ಸಲಹೆ ನೀಡಿದರು.

Manasadhara Trust ಮನಸ್ಫೂರ್ತಿ ಶಿಬಿರವನ್ನ ಮನಸಿನ ಪೂರ್ತಿ ಸದುಪಯೋಗ ಮಾಡಿಕೊಳ್ಳಿ- ಡಾ.ಎನ್.ಸುಧೀಂದ್ರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಚೇತನ್.ಸಿ.ರಾಯನಹಳ್ಳಿ, ಅಧ್ಯಕ್ಷರು, ನಮ್ಮ ಹಳ್ಳಿ ಥಿಯೇಟರ್, ಶಿವಮೊಗ್ಗ ಇವರು 15 ದಿನಗಳ ಶಿಬಿರದಲ್ಲಿ ನೀಡಲಾಗುವ ತರಬೇತಿಗಳ ಬಗ್ಗೆ ವಿವರಿಸಿದರು. ಕು.ಗೌತಮಿ ಇವರು ಪ್ರಾರ್ಥಿಸಿದರು. ಶ್ರೀಮತಿ ರಂಗನಾಯಕಿ ಸಂಯೋಜಕರು ಮನಸ್ಪೂರ್ತಿ ಕಲಿಕಾ ತರಬೇತಿ ಕೇಂದ್ರ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಸ್ವಾಗತಿಸಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಮಂಜುನಾಥ ಸ್ವಾಮಿ, ಮುಖ್ಯಸ್ಥರು, ಸಮಾಜಕಾರ್ಯ ವಿಭಾಗ, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಇವರು ನಿರ್ವಹಿಸಿದರು. ಶ್ರೀಮತಿ ಉಷಾ ಉಡುಪ ಇವರು ವಂದಿಸಿದರು. ಮನಸ್ಫೂರ್ತಿ ಕಲಿಕಾ ಕೇಂದ್ರದ ಎಲ್ಲಾ ಬೋಧಕ ಹಾಗೂ ಬೋಧಕೇತರ ವಿಭಾಗದವರೂ ಹಾಜರಿದ್ದರು. ಶಿಬಿರದಲ್ಲಿ ಕೌಶಲ್ಯಗಳ ತರಬೇತಿ ನೀಡಲು ಆಹ್ವಾನಿತರಾದ ನುರಿತ ತರಬೇತುದಾರರೂ ಹಾಜರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...