Thursday, May 7, 2026
Thursday, May 7, 2026

K.S.Eshwarappa ಈಶ್ವರಪ್ಪ ,ಆಸ್ತಿ ವಿವರ ಘೋಷಣೆ.₹10 ಕೋಟಿಗೂ ಮೀರಿ ಸ್ಥಿರಾಸ್ತಿ

Date:

K.S.Eshwarappa ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ‌ಈಶ್ವರಪ್ಪ ಅವರು ತಮ್ಮ ಆಸ್ತಿ ವಿವರವನ್ನು ಚುನಾವಣೆ ಅಧಿಕಾರಿಗಳಿಗೆ ನೀಡಿದ್ದಾರೆ. ಇಂದು ನಾಮಪತ್ರ ಸಲ್ಲಿಸಿದ ಈಶ್ವರಪ್ಪ ಆಯೋಗಕ್ಕೆ ತಮ್ಮ ಆಸ್ತಿ ವಿವರಣೆಯನ್ನ ಪ್ರಕಟಿಸಿದ್ದಾರೆ.
ಅವರ ಹೆಸರಿನಲ್ಲಿ 98 ಲಕ್ಷದ 92 ಸಾವಿರದ 20 ರೂ ಹೊಂದಿದ್ದಾರೆ. ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ 35 ಲಕ್ಷ 50 ಸಾವಿರದ 20 ರೂ. ಹೊಂದಿದ್ದಾರೆ. ಈಶ್ವರಪ್ಪ ಅವರ ಕೈಯಲ್ಲಿ ಇರುವ ನಗದು 25 ಲಕ್ಷ ರೂ.ಪತ್ನಿ ಜಯಲಕ್ಷ್ಮಿ ಅವರ ಕೈಯಲ್ಲಿ ಇರುವ ನಗದು 2 ಲಕ್ಷ ಎಂದು ಸಲ್ಲಿಸಿದ್ದಾರೆ.
ಈಶ್ವರಪ್ಪ ಹೆಸರಿನಲ್ಲಿ ಬಂಗಾರ 300 ಗ್ರಾಂ, ಬೆಳ್ಳಿ 2 ಕೆ.ಜಿ ಸಾಮಾಗ್ರಿಗಳನ್ನ ಹೊಂದಿದ್ದಾರೆ. ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ ಬಂಗಾರ 500 ಗ್ರಾಂ, ಬೆಳ್ಳಿ 5 ಕೆ.ಜಿ. ಹೊಂದಿದ್ದಾರೆ.
ಈಶ್ವರಪ್ಪ ಹೆಸರಿನಲ್ಲಿ ನಿದಿಗೆ ಗ್ರಾಮದ ಬಳಿ 1 ಎಕರೆ31 ಗುಂಟೆ ಕೃಷಿ ಭೂಮಿ ಹೊಂದಿದ್ದಾರೆ. ಕೃಷಿಯೇತರ ಭೂಮಿ 4 ಎಕರೆ 24 ಗುಂಟೆ ಹೊಂದಿದ್ದಾರೆ. ಬೆಂಗಳೂರಿನ‌ ಜಯನಗರದಲ್ಲಿ ನಿವೇಶನ, ಶಿವಮೊಗ್ಗದಲ್ಲಿ ವಾಸದ ಮನೆ ಹೊಂದಿದ್ಷಾರೆ.

K.S.Eshwarappa ಈಶ್ವರಪ್ಪ ಹೆಸರಿನಲ್ಲಿ 5 ಕೋಟಿ 87 ಲಕ್ಷದ 39 ಸಾವಿರ ಸಾಲ ತೋರಿಸಲಾಗಿದೆ. ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ 70 ಲಕ್ಷದ 80 ಸಾವಿರದ 13 ಸಾವಿರ ರೂ. ಈಶ್ವರಪ್ಪ ಅವರ ಹೆಸರಿನಲ್ಲಿ ಚರಾಸ್ಥಿ 4 ಕೋಟಿ 28 ಲಕ್ಷದ 61 ಸಾವಿರ ರೂ. ಹೊಂದಿದ್ದಾರೆ. 3 ಕೋಟಿ 77 ಲಕ್ಷದ 34 ಸಾವಿರ ರೂ. ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ ಚರಾಸ್ಥಿ‌ ಇದೆ.
ಈಶ್ವರಪ್ಪ ಹೆಸರಿನಲ್ಲಿ ಸ್ಥಿರಾಸ್ಥಿ‌ 10 ಕೋಟಿ 95 ಲಕ್ಷದ 59 ಸಾವಿರ ರೂ‌ ಮೌಲ್ಯವಿದ್ದರೆ. ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ ಸ್ಥಿರಾಸ್ಥಿ 7 ಲಕ್ಷದ 31 ಸಾವಿರವಿದೆ.‌ ತಮ್ಮ ಐದು ವರ್ಷಗಳ ಆದಾಯವನ್ನ ತೋರಿಸಿರುವ ಈಶ್ವರಪ್ಪ 2018-19 ರಲ್ಲಿ 34,88,380 ರೂ. ಆದಾಯವಿದೆ ಎಂದು ತೋರಿಸಿದರೆ 2019-20 ರಲ್ಲಿ 74,35,520ರೂ.ಎಂದು ತೋರಿಸಿದ್ದಾರೆ.

2020-21 ರಲ್ಲಿ 54,50,390 ರೂ. 2021-22 ರಲ್ಲಿ 88,35,420 ರೂ. ಇದ್ದರೆ 2022-23 ರಲ್ಲಿ 98,92,200 ರು ಆದಾಯ ಎಂದು ಘೋಷಿಸಿಕೊಂಡಿದ್ದಾರೆ. ವರ ವಿರುದ್ಧ ಯಾವುದೇ ಎಫ್ಐಆರ, ಯಾವುದೇ ಅಪರಾಧಗಳು ಇಲ್ಲ ಎಂದು ಘೋಷಿಸಿಕೊಂಡಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ಹತ್ತು ಚಿನ್ನದ ಪದಕ ಮುಡಿಗೇರಿಸಿದ ಕುವೆಂಪು ವಿವಿಗೇ ಪ್ರಥಮ ವಿದ್ಯಾರ್ಥಿಎಂ.ಎ.(ಕನ್ನಡ) ವಿಭಾಗದ ಪ್ರತಿಭೆ, ಹೆಚ್.ಎಂ.ಅಭಿಷೇಕ್.

Kuvempu University ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯ ಮೂಲಕ ಗಮನ...

Kuvempu university ಕುವೆಂಪು ವಿವಿಯಿಂದ ಗೌರಗ ಡಾಕ್ಟರೇಟ್ ಪಡೆದ ಮಹನಿಯರ ಮಾಹಿತಿ

Kuvempu university ಕುವೆಂಪು ವಿಶ್ವವಿದ್ಯಾಲಯದ 35ನೇ ವಾರ್ಷಿಕ ಘಟಿಕೋತ್ಸವದಲ್ಲಿ ನಾಡಿನ ಮೂವರು ಗಣ್ಯ...

Kuvempu University ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸಿನ ಎತ್ತರಗಳನ್ನ ಸಾಧಿಸಿ, ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿ- ಗೌ.ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Kuvempu University “ಕೇವಲ ಉದ್ಯೋಗಾಕಾಂಕ್ಷಿಯಾಗಿರದೆ ಅವಕಾಶಗಳ ಸೃಷ್ಟಿಕರ್ತರಾಗಿ. ಸ್ಟಾರ್ಟ್‌ಅಪ್ ಸಂಸ್ಕೃತಿ, ನಾವೀನ್ಯತೆ...

S.N. Channabasappa ಕನ್ನಡ ಸಾಹಿತ್ಯ ಪರಿಷತ್ತಿನ 111 ವರ್ಷಗಳ ಸೇವೆ ಅಪ್ರತಿಮ- ಎಸ್.ಎನ್.ಚನ್ನಬಸಪ್ಪ

S.N. Channabasappa "ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಕಟ್ಟುವಲ್ಲಿ ಕನ್ನಡ...