Thursday, September 17, 2026
Thursday, September 17, 2026

Rameswaram Cafe ಬಾಂಬ್ ಬ್ಲಾಸ್ಟರ್ & ಮಾಸ್ಟರ್ ಮೈಂಡ್ ಈರ್ವರೂ ಈಗ ಅಂದರ್: ಫಲಪ್ರದ ಎನ್ಐಎ ಕಾರ್ಯಾಚರಣೆ

Date:

Rameswaram Cafe ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ಇಬ್ಬರು ಉಗ್ರರರನ್ನು ಎನ್ ಐಎ ವಶಕ್ಕೆ ಪಡೆದಿದೆ. ಮುಸಾವೀರ್ ಮತ್ತು ಮತೀನ್ ಅವರನ್ನು ಕೊಲ್ಕತಾದ ಹೊರವಲಯದ ಪೂರ್ವ ಮಿಡ್ನಾಪುರ ದಿಘಾ ಎಂಬಲ್ಲಿ ಪತ್ತೆ ಹಚ್ಚಿ ಅರೆಸ್ಟ್ ಮಾಡಲಾಗಿದೆ.
ನಕಲಿ ದಾಖಲೆ ನೀಡಿ ಬಾಡಿಗೆ ಮನೆ ಪಡೆದು ವಾಸ್ತವ್ಯ ಹೂಡಿದ್ದ ಇಬ್ವರು ಉಗ್ರರು ಹೆಸರು ಕೂಡ ಬದಲಿಸಿಕೊಂಡು ವಾಸವಿದ್ದರು. ಉಗ್ರರಾದ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವಿರ್ ಹುಸೇನ್ ಶಾಜಿಬ್ ಇಬ್ವರೂ ನಿದ್ದೆಯಲ್ಲಿರುವಾಗ ಪತ್ತೆಹಚ್ಚಲಾಗಿದೆ.
ಎನ್ ಐಎ ಅಧಿಕಾರಿಗಳು ಉಗ್ರರ ವಾಸ್ತವ್ಯ ಪತ್ತೆ ಹಚ್ಚಿದ್ದರು.ಇಂದು ಬೆಳಗ್ಗಿನ ಜಾವ 2.30 ರ ಸುಮಾರಿಗೆ ಉಗ್ರರಿಂದ ಮನೆ ಮೇಲೆ ದಾಳಿ ನಡೆಸಲಾಗಿದೆ. ನಿದ್ದೆಯಲ್ಲಿದ್ದ ಇಬ್ಬರು ಉಗ್ರರನ್ನು ವಶಕ್ಕೆ ಪಡೆಯಲಾಗಿದೆ.
ಎನ್ ಐಎ ಅಧಿಕಾರಿಗಳಿಂದ ಇಬ್ಬರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ. ಸ್ಥಳೀಯ ನ್ಯಾಯಾಲಯಕ್ಕೆ ಎನ್ ಐಎ ತಂಡ ಹಾಜರು ಪಡಿಸಲಿದೆ. ಬಳಿಕ ಬೆಂಗಳೂರಿಗೆ ಕರೆತರಲಾಗುವುದು.
Rameswaram Cafe ಇಂದು ಸಂಜೆ 6 ಗಂಟೆಗೆ ಉಗ್ರರನ್ನು ಬೆಂಗಳೂರಿಗೆ ಕರೆತರುವ ಸಾಧ್ಯತೆವಿದೆ. . ಸಂಜೆ 6 ಗಂಟೆಗೆ ದೇವನಹಳ್ಳಿ ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಗೆ ಎನ್ ಐ ಎ ಅಧಿಕಾರಿಗಳು ಉಗ್ರರರನ್ನು ಕರೆತರಲಿದ್ದಾರೆ. ತಲೆಮೆಸಿಕೊಂಡಿದ್ದ ಮತೀನ್ ಅನೇ ಕ ವರ್ಷಗಳ ನಂತರ ಪತ್ತೆಯಾಗಿದ್ದಾನೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...