Tuesday, October 1, 2024
Tuesday, October 1, 2024

K.S.Eshwarappa ಯಡಿಯೂರಪ್ಪ ಕೇಂದ್ರದವರಿಗೆ ಮಂಕುಬೂದಿ ಎರಚಿದ್ದಾರೆ- ಹೆಮ್ಮಾಡಿಯಲ್ಲಿ ಈಶ್ವರಪ್ಪ ಗುಟುರು

Date:

K.S.Eshwarappa ಬಿಜೆಪಿ ಪಕ್ಷದಲ್ಲಿ ನೊಂದ ಕಾರ್ಯಕರ್ತರ ಧ್ವನಿಯಾಗಿ ಕುಟುಂಬ ರಾಜಕಾರಣ ವಿರುದ್ಧ ಸ್ಪರ್ಧೆ ಮಾಡುತ್ತಿದ್ದೇನೆ. ಬ್ರಹ್ಮ ಬಂದು ಹೇಳಿದರೂ ಸ್ಪರ್ಧೆಯಿಂದ ಹಿಂದೆ ಸರಿಯಲ್ಲ. ಸ್ಪರ್ಧೆ ಮಾಡಿ ಗೆದ್ದು ಮೋದಿ ಕೈ ಬಲ ಪಡಿಸುತ್ತೇನೆ ಎಂದು ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ಚರಪ್ಪ ಹೇಳಿದರು.

ಹೆಮ್ಮಾಡಿಯಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾತನಾಡಿದ ಈಶ್ವರಪ್ಪ ನವರು, ಯಡಿಯೂರಪ್ಪ ಕೇಂದ್ರದವರಿಗೆ ಮಂಕು ಬೂದಿ ಎರಚಿದ್ದಾರೆ. ಸುಳ್ಳು ಹೇಳಿ ಮೋಸ ಮಾಡಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಹಿಂದುತ್ವದ ಹೋರಾಟಗಾರರಾದ ಸಿ.ಟಿ.ರವಿ, ಪ್ರತಾಪ್ ಸಿಂಹ, ಬಸವನ ಗೌಡ ಪಾಟೀಲ್ ಯತ್ನಾಳ್ ರನ್ನು ಮೂಲೆಗೆ ಸೇರಿಸಲಾಗಿದೆ. ಇದರ ಜೊತೆಗೆ ಕಾರ್ಯಕರ್ತರು ನೊಂದಿದ್ದಾರೆ. ಹಿಂದುತ್ವದ ಹೋರಾಟಗಾರರು ಎಲ್ಲಿದ್ದಾರೋ ಅದೆಲ್ಲಾ ನನ್ನ ಕರ್ಮಭೂಮಿ. ಹಿಂದುತ್ವ ಉಳಿವಿಗಾಗಿ ನಾನು ಸ್ಪರ್ಧೆ ಮಾಡುತ್ತಿದ್ದು, ಇದರಲ್ಲಿ ಗೆದ್ದೇ, ಗೆಲ್ಲುತ್ತೇನೆ ಎಂಬ ವಿಶ್ವಾಸ ಹೆಚ್ಚಿದೆ ಎಂದು ತಿಳಿಸಿದರು.

ಸಿದ್ದಾಂತ ಇದ್ದ ಪಕ್ಷ ಒಂದು ಕುಟುಂಬದ ಹಿಡಿತಕ್ಕೆ ಹೋಗುತ್ತಿದೆ. ಸಿದ್ದಾಂತದ ಉಳಿವಿಗಾಗಿ ಕುಟುಂಬದ ಕೈಯಲ್ಲಿ ಇರುವ ಪಕ್ಷ ಶುದ್ಧ ಮಾಡಲು ಸ್ಪರ್ಧೆ ಮಾಡುತ್ತಿದ್ದೇನೆ.‌ ಕೆಜೆಪಿ ಪಕ್ಷ ಕಟ್ಟಿದಾಗ ನಾನು ಯಡಿಯೂರಪ್ಪ ರವರಿಗೆ ಸಲಹೆ ನೀಡಿದೆ ಬೇರೆ ಪಕ್ಷ ಕಟ್ಟಬೇಡಿ ಎಂದು ನನಗೆ ಯಾರ ಸಲಹೆ ಬೇಡ ಎಂದು ಕೆಜೆಪಿ ಕಟ್ಟಿದರು ಎಷ್ಟು ಸೀಟು ಗೆದ್ದರು? ಚುನಾವಣೆ ಬಳಿಕ ಕೈ ಕಾಲು ಹಿಡಿದು ಮತ್ತೆ ನಮ್ಮ ಪಕ್ಷಕ್ಕೆ ಬಂದರು. ಮುಂದೆ ಹೊಸ ಯಡಿಯೂರಪ್ಪ ನೋಡುತ್ತೀರಿ ಎಂದು ಹೇಳಿದ್ದರು. ಇವರೆನಾ ಹೊಸ ಯಡಿಯೂರಪ್ಪ ಎಂದು ಪ್ರಶ್ನಿಸಿದರು.

K.S.Eshwarappa ಕ್ಷೇತ್ರದ ಎಲ್ಲಾ ಕಡೆ ಪ್ರವಾಸ ಮಾಡಿ ಪ್ರಚಾರ ಮಾಡುತ್ತಿದ್ದೇನೆ. ಶ್ರೀ ಸಾಮಾನ್ಯ ನನಗೆ ಬೆಂಬಲವಾಗಿ ನಿಂತಿರುವುದು ಸ್ಪಷ್ಟವಾಗಿದೆ. ಬಿಜೆಪಿ ಕಾರ್ಯಕರ್ತರ ಅಷ್ಟೇ ಅಲ್ಲ. ಕಾಂಗ್ರೆಸ್, ಜೆಡಿಎಸ್ ಪಕ್ಷದ ಕಾರ್ಯಕರ್ತರೂ ನನಗೆ ಬೆಂಬಲ ಕೊಡುವುದಾಗಿ ತೀರ್ಮಾನಿಸಿದ್ದಾರೆ. ಇದಕ್ಕೆ ಅವರ ಪಕ್ಷದವರು ಪ್ರಶ್ನೆ ಮಾಡಿದ್ದಾರೆ. ಇದೊಂದು ಚುನಾವಣೆ ನಮ್ಮನ್ನು ಬಿಡಿ ನಾವು ಈಶ್ವರಪ್ಪ ಪರವಾಗಿ ನಿಲ್ಲುತ್ತೇವೆ ಎಂದು ತಿಳಿಸಿದ್ದಾರೆ.

ರಾಜ್ಯದ ಹಿಂದುತ್ವದ ಹೋರಾಟಗಾರರು ಹಿರಿಯರು ನನ್ನ ಜೊತೆ ಇರುವುದಾಗಿ ಹೇಳಿ ಆಶೀರ್ವಾದ ಮಾಡಿದ್ದಾರೆ. ಇಷ್ಟೆಲ್ಲಾ ಬೆಂಬಲ ಪಡೆದಿರುವ ನಾನು ಈ ಬಾರಿ ಚುನಾವಣೆಯಲ್ಲಿ ನೂರಕ್ಕೆ ನೂರು ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಲ್ಲಾ ಅಂಶಗಳನ್ನು ಅಮಿತ್ ಶಾ ಅವರಿಗೆ ಫೋನ್ ಮೂಲಕ ತಿಳಿಸಿದೆ. ಅವರು ದೆಹಲಿಗೆ ಮಾತನಾಡಲು ಕರೆದರು ನಾನು ಹಿರಿಯರ ಮಾತಿಗೆ ಗೌರವ ಕೊಟ್ಟು ಹೋದೆ. ಭೇಟಿಯಾಗದೆ ಇರವುದಕ್ಕೆ ಕಾರಣ ನನ್ನ ಮೇಲಿನ ಅಸಮಾಧಾನವಲ್ಲ. ಬಹುಶಃ ಮೋದಿ ಅಮಿತ್ ಶಾ ಚರ್ಚಿಸಿ ಈಶ್ವರಪ್ಪ ಚುನಾವಣೆಯಲ್ಲಿ ನಿಂತು ಗೆದ್ದು ಬರಲಿ ಎಂದು ತೀರ್ಮಾನಿಸಿರಬಹುದು ಎಂಬುದು ನನ್ನ ಅಭಿಪ್ರಾಯ ಎಂದು ತಿಳಿಸಿದರು.

ಈ‌ ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಆರಂಭಿಸಿದಾಗ ಯಡಿಯೂರಪ್ಪ ದೆಹಲಿಗೆ ತೆರಳಿ ಅಮಿತ್ ಶಾ ಬಳಿ ದೂರು ನೀಡಿದರು. ಆಗ ಅಮಿತ್ ಶಾ ನನ್ನ ದೆಹಲಿಗೆ ಕರೆಸಿದರು. ನಾನು ಹೋಗಿದ್ದೆ ಅಲ್ಲಿ ಮೂರು ಗಂಟೆಗಳ ಕಾಲ ಚರ್ಚೆ ನಡೆಯಿತು‌‌. ನಾನು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಲ್ಲಿ ಹಿಂದುಳಿದ ವರ್ಗದವರು ಇದ್ದಾರೆ. ನಿಮಗೆ ಹಿಂದುಳಿದ ವರ್ಗದವರು ಬೇಡವಾ ಎಂದು ಪ್ರಶ್ನೆ ಮಾಡಿದೆ ಯಡಿಯೂರಪ್ಪ ಯಾವುದೇ ಕಾರಣಕ್ಕೂ ಒಪ್ಪಲಿಲ್ಲ ಅಮಿತ್ ಶಾ ನಿಲ್ಲಿಸಲು ಸೂಚಿಸಿದರು.

ನಾನು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಲ್ಲಿಸಿದೆ. ಕಳೆದ ಚುನಾವಣೆಯಲ್ಲಿ ಚುನಾವಣೆಯಿಂದ ಹಿಂದೆ ಸರಿಯಲು ಹೇಳಿದರು. ತಕ್ಷಣ ಕೇಂದ್ರದವರಿಗೆ ಪತ್ರ ಬರೆದು ಹಿಂದೆ ಸರಿದೆ. ಕಾಂತೇಶ್ ಗೆ ಹಾವೇರಿಯಲ್ಲಿ ಟಿಕೆಟ್ ಕೊಡುವುದಾಗಿ ಹೇಳಿ ನಂಬಿಸಿ ಮೋಸ ಮಾಡಿದರು. ಅಪ್ಪ ಮಕ್ಕಳ ಹಿಡಿತದಲ್ಲಿ ಬಿಜೆಪಿ ಇದೆ. ಇದರ ವಿರುದ್ಧ ಹೋರಾಟ ಮಾಡಲು ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ವಿವರಿಸಿದರು.

ಯಡಿಯೂರಪ್ಪ ಅವರು ನನಗೆ ಮೋಸ ಮಾಡಿದ್ದಾರೆ ಎಂದು ಚಂದ್ರಗುತ್ತಿಯಲ್ಲಿ ಅಲ್ಲ, ಅಯೋಧ್ಯೆ ಹೋಗಿ ಘಂಟೆ ಹೊಡೆಯಲು ಸಿದ್ಧನಿದ್ದೇನೆ. ಆದರೆ, ಯಡಿಯೂರಪ್ಪ ಟಿಕೆಟ್ ಕೊಡುವುದಾಗಿ ಹೇಳಿ ಮೋಸ ಮಾಡಿಲ್ಲ ಎಂದು ರಾಘವೇಂದ್ರ ಬಂದು ಗಂಟೆ ಹೊಡೆಯಲಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shakahari Film ಶಾಖಾಹಾರಿ ಚಿತ್ರಕ್ಕೆ ಕಾನೂನು ಜಯ

Shakahari Film ಶಿವಮೊಗ್ಗದ ಕೀಳಂಬಿ ಮೀಡಿಯಾ ಲ್ಯಾಬ್ ನಿರ್ಮಿಸಿದ್ದ ಶಾಖಾಹಾರಿ...

Mahatma Gandhi ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ, ಫಲಿತಾಂಶ ಪ್ರಕಟ

Mahatma Gandhi ರಾಷ್ಟ್ರಪಿತ ,ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿ ಅಂಗವಾಗಿ...

Yaduveer Wadiyar ಶಿವಮೊಗ್ಗ ಹಬ್ಬ ಯಶಸ್ವಿಗೊಳಿಸಿ- ಸಂಸದ ಯದುವೀರ್

Yaduveer Wadiyar ಪ್ರವಾಸೋದ್ಯಮ ಹಾಗೂ ಜಿಲ್ಲೆಯ ಉದ್ಯಮಿಗಳ ಪ್ರೋತ್ಸಾಹಿಸುವ ದೃಷ್ಟಿಯಿಂದ...

Shivamogga Cycle Club ಸೈಕಲ್ ಅಭ್ಯಾಸವು ಜನಸಾಮಾನ್ಯರ ವ್ಯಾಯಾಮಶಾಲೆ- ಎನ್.ಗೋಪಿನಾಥ್

Shivamogga Cycle Club ಸೈಕಲ್ ಅಭ್ಯಾಸ ಮಾಡುವುದರಿಂದ ಹೃದಯ ಸಂಬಂಧಿ...