Shivaganga Yoga Centre ಶಿವಮೊಗ್ಗ ನಗರದ ಶಿವಗಂಗಾ ಯೋಗ ಕೇಂದ್ರದ ರಾಘವ ಶಾಖೆಯಲ್ಲಿ ಮಂಗಳವಾರ ಯುಗಾದಿ ಸಂಭ್ರಮ ಆಚರಿಸಲಾಯಿತು. ಇದೇ ವೇಳೆ ಬೇವು ಬೆಲ್ಲ ಸಿಹಿ ಹಂಚಿ ಪರಸ್ಪರರಲ್ಲಿ ಶುಭಾಶಯ ಕೋರಿ ಯೋಗ ಸದಸ್ಯರು ಸಡಗರ ಸಂಭ್ರಮದಿಂದ ಹಬ್ಬ ಆಚರಿಸಿದರು.
ಇದೇ ಸಂದರ್ಭದಲ್ಲಿ ರಾಘವ ಶಾಖೆಯ ಶಿಕ್ಷಕ ಜಿ.ಎಸ್.ಓಂಕಾರ್ ಮಾತನಾಡಿ, ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ. ಹಬ್ಬದ ದಿನದಂದು ರೇಡಿಯೋದಲ್ಲಿ ಕವಿ ದ.ರಾ.ಬೇಂದ್ರೆಯವರ ರಚನೆಯ ವಾಣಿ ಕೇಳಿ ಹಬ್ಬಕ್ಕೆ ಶುಭವ ತರುತ್ತಿತ್ತು. ಹಿಂದೂಗಳೆಲ್ಲರಿಗೂ ಹೊಸ ವರ್ಷದ ಆರಂಭ. ಹಬ್ಬದ ಸ್ವಾಗತಕ್ಕಾಗಿ ಮುಂಚಿನ ದಿನಗಳಿಂದಲೇ ಸಿದ್ಧತೆ. ಮಕ್ಕಳು ಹಿರಿಯರಲ್ಲಿ ಸಂಭ್ರಮ ಇರುತ್ತಿತ್ತು.
ಸಂಸ್ಕೃತಿ ಸಂಪ್ರದಾಯ ಉಳಿಸಿ ಬೆಳೆಸುವಲ್ಲಿ ಹಬ್ಬಗಳ ಪಾತ್ರ ಹಿರಿದು. ಬಾಗಿಲಿಗೆ ತಳಿರು ತೋರಣ ಹೂ ಮಾಲೆ ಇಂದ ಶೃಂಗಾರ. ಮನೆ ಮುಂದೆ ರಂಗು ರಂಗಿನ ರಂಗವಲ್ಲಿಯ ಚಿತ್ತಾರ ಮಹಿಳೆಯರ ನಡುವಿನ ಮಾನಸ ಸ್ಪರ್ಧೆ. ವಾತಾವರಣಕ್ಕೆ ಕಳೆಗಟ್ಟುತ್ತಿತ್ತು ಎಂದು ಹೇಳಿದರು.
ಶಿಕ್ಷಕ ವಿಜಯಕೃಷ್ಣ ಮಾತನಾಡಿ, ಎದುರು ಸಿಗುವ ವ್ಯಕ್ತಿಗೆ ಹಬ್ಬದ ಶುಭಾಶಯಗಳು ವಿನಿಮಯ ಮಾಡುವ ಮೂಲಕ ಪರಸ್ಪರ ದ್ವೇಷವನ್ನು ಅಳಿಸುವಲ್ಲಿ ಹಬ್ಬ ಪ್ರಮುಖ ಕಾರಣವಾಗುತ್ತದೆ. ಭಿನ್ನಾಭಿಪ್ರಾಯ ದೂರಾಗಿಸಿ ಮತ್ತೆ ಸ್ನೇಹ ಭಾವ ಗಳಿಸುವ ಅವಕಾಶ ಸಿಗುತ್ತಿತ್ತು. ಹೊಸ ಬಟ್ಟೆಯುಟ್ಟು ಸಂಭ್ರಮಿಸುತ್ತ ಆಚರಣೆ. ಬೇವು ಬೆಲ್ಲವ ತಿಂದು ಸಿಹಿಯಾದ ಸವಿ ಮಾತನಾಡಿ ನೋವು ನಲಿವು ಸುಖ ದುಃಖಗಳನ್ನು ಸಮವಾಗಿ ಸ್ವೀಕರಿಸಬೇಕೆಂಬ ವೈಶಿಷ್ಟ ಸಂಪ್ರದಾಯ ಎಂದು ತಿಳಿಸಿದರು.
Shivaganga Yoga Centre ಶಿಕ್ಷಕ ಹರೀಶ್ ಮಾತನಾಡಿ, ಯೋಗ ಶಿಕ್ಷಣಾರ್ಥಿಗಳಾದ ನಾವು ಹಬ್ಬವೆಂದು ರಜೆ ಮಾಡದೆ ಸಮಸ್ತ ಜೀವಿಗಳ ಹಿತಕ್ಕಾಗಿ ಸಾಮೂಹಿಕವಾಗಿ ದೇವರಲ್ಲಿ ಪ್ರಾರ್ಥಿಸುವ ಸಲುವಾಗಿ ನಿತ್ಯದಂತೆ ದೇವರ ನಾಮ ಭಜನೆ ಪ್ರಾರ್ಥನೆ ಮಾಡುತ್ತಿದ್ದು, ಮಂತ್ರಗಳೊಂದಿಗೆ ಸೂರ್ಯ ನಮಸ್ಕಾರ ಪ್ರಾಣಾಯಾಮ ಮಾಡಿ ದೇವರಲ್ಲಿ ಭಕ್ತಿಯಿಂದ ಪ್ರಾರ್ಥಿಸಿದ್ದೇವೆ. ಧ್ಯಾನದಲ್ಲಿ ಜೀವಿಗಳು ಜಗತ್ತಿನ ಒಳಿತಿಗಾಗಿ ಆರೋಗ್ಯ ಸುಖ ಶಾಂತಿ ನೆಮ್ಮದಿ ಕಾಲಕಾಲಕ್ಕೆ ಮಳೆ ಬೆಳೆಗಾಗಿ ಸಂಕಲ್ಪಿಸಿದೆವು. ಯುಗಾದಿ ಹಬ್ಬವು ತರಲೆಲ್ಲರಿಗೆ ಶುಭವನು ಎಂದು ಆಶಿಸಿದರು.
ಯೋಗಪಟುಗಳಾದ ಜಿ.ವಿಜಯಕುಮಾರ್, ಮಹೇಶ್, ನರಸೋಜಿ ರಾವ್, ಸುಜಾತಾ ಮಧುಕೇಶ್ವರ್, ಶೋಭಾ ಶಂಕರ್, ವೀಣಾ, ಶ್ರೀನಿವಾಸ್, ಆನಂದ್, ಸುಬ್ರಹ್ಮಣ್ಯ, ದೀಪಕ್, ಸತೀಶ್, ಶಶಿಧರ್, ಯೋಗಪಟುಗಳು ಉಪಸ್ಥಿತರಿದ್ದರು. ಯುಗಾದಿ ಗೀತೆಗಳನ್ನ ಹಾಡಿ ಸಂಭ್ರಮಿಸಿದರು.