Sunday, December 7, 2025
Sunday, December 7, 2025

Lok Sabha Election ನಮ್ಮದು ನಿಜವಾದ ಬಿಜೆಪಿ ಪಕ್ಷ,‌ ಬಿ.ವೈ‌.ರಾಘವೇಂದ್ರ ಅವರದ್ದು ಕಾಂಗ್ರೆಸ್ ಛಾಯೆ-ಮೇಲಿನಕೊಪ್ಪ ಮಹೇಶ್

Date:

Lok Sabha Election ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದಿಂದಾಗಿ ಬಿಜೆಪಿಯ ನಿಜವಾದ ಹಿಂದೂ ಕಾರ್ಯಕರ್ತರಿಗೆ ಅನ್ಯಾಯವಾಗಿದೆ. ಹಾಗಾಗಿ ಹಿಂದುಳಿದ ವರ್ಗಕ್ಕೆ ಸೇರಿದ ತಾನು ಹಾಗೂ ಇತರರು ರಾಷ್ಟ್ರಭಕ್ತ ಪಕ್ಷದ ಪರವಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಫರ್ಧಿಸಲಿರುವ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರನ್ನು ಬೆಂಬಲಿಸುತ್ತಿರುವುದಾಗಿ ಬೆಜ್ಜವಳ್ಳಿ ಗ್ರಾ.ಪಂ.ಸದಸ್ಯ, ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಘಟಕದ ಸದಸ್ಯ ಮೇಲಿನಕೊಪ್ಪ ಮಹೇಶ್ ಹೇಳಿದರು.
ತೀರ್ಥಹಳ್ಳಿ ಪಟ್ಟಣದಲ್ಲಿ ತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮದು ನಿಜವಾದ ಬಿಜೆಪಿ ಪಕ್ಷ. ಬಿ.ವೈ. ರಾಘವೇಂದ್ರ ಅವರದ್ದು ಕಾಂಗ್ರೆಸ್ಸಿನ ಛಾಯೆ,ಬಿಜೆಪಿಯಲ್ಲಿ ನಿಜವಾದ ಹಿಂದೂ ಕಾರ್ಯಕರ್ತರಿಗೆ ಅನ್ಯಾಯವಾಗಿದೆ. ಗೋ ಬ್ಯಾಕ್ ಚಳುವಳಿಯಿಂದ ಕ್ಷೇತ್ರ ಬದಲಾಯಿಸಿ ಶೋಭ ಕರಂದ್ಲಾಜೆಗೆ ಟಿಕೆಟ್ ಕೊಟ್ಟ ಬಿಜೆಪಿಯವರು ಹಿಂದುತ್ವವಾದಿಗಳನ್ನು ಕಡೆಗಣಿಸಿದ್ದಾರೆ ಎಂದರು.

Lok Sabha Election ಯಡಿಯೂರಪ್ಪನವರ ಕುಟುಂಬ ರಾಜಕಾರಣದಿಂದಾಗಿ ಬಿಜೆಪಿಯಲ್ಲಿ ಅನೇಕರಿಗೆ ಅನ್ಯಾಯವಾಗಿದೆ. ಅಂತಹವರಲ್ಲಿ ಈಶ್ವರಪ್ಪನವರು ಪ್ರಮುಖರು. ಈ ಹಿಂದೆ ಬಿಜೆಪಿ ವರಿಷ್ಟರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಗಿತಗೊಳಿಸುವಂತೆ ಹೇಳಿದ್ದರು. ಅದನ್ನು ಈಶ್ವರಪ್ಪ ಪಾಲಿಸಿದ್ದರು.

ಮುಂದೆ ಶಿವಮೊಗ್ಗ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂದು ಈಶ್ವರಪ್ಪನಿಗೆ ಹೇಳಿದಾಗ ಮರು ಮಾತಿಲ್ಲದೆ ಅವರು ಒಪ್ಪಿ ಆ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಆಗ ಯಡಿಯೂರಪ್ಪನವರು ಹಾವೇರಿಯಲ್ಲಿ ತಮ್ಮ ಮಗನಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡುವುದಾಗಿ ಈಶ್ವರಪ್ಪನವರಿಗೆ ಭರವಸೆಯಿತ್ತಿದ್ದರು. ಇದರಂತೆ ಹಾವೇರಿಯಲ್ಲಿ ಈಶ್ವರಪ್ಪನವರ ಪುತ್ರ ತಯಾರಿ ಕೂಡ ಮಾಡಿಕೊಂಡಿದ್ದರು. ಆದರೆ ಕೊಟ್ಟ ಮಾತನ್ನು ಯಡಿಯೂರಪ್ಪ ನಡೆಸಿಕೊಡದೆ ಈಶ್ವರಪ್ಪನವರಿಗೆ ದ್ರೋಹ ಎಸಗಲಾಗಿದೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...