Jain Public School ಜೈನ್ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ಬೇಸಿಗೆ ಶಿಬಿರದಲ್ಲಿ ” ಮಣ್ಣಿನೊಂದಿಗೆ ಮಕ್ಕಳಾಟ ” ಆಯೋಜಿಸಲಾಗಿತ್ತು . ಈ ಶಿಬಿರದಲ್ಲಿ ೩ ರಿಂದ ೧೨ ವರ್ಷದೊಳಗಿನ ಒಟ್ಟು ೪೦ ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.
ಕಳೆದ ಒಂದು ವಾರದಿಂದ ಬೇಸಿಗೆ ಶಿಬಿರದಲ್ಲಿ ಹಲವಾರು ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದು , ಮಕ್ಕಳು ಅತ್ಯಂತ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಶನಿವಾರ ನಡೆದ ಮಣ್ಣಿನೊಂದಿಗೆ ಮಕ್ಕಳ ಆಟ ಅನ್ನುವ ಆಶಯದಲ್ಲಿ ಎಲ್ಲ ಮಕ್ಕಳು ಹಳ್ಳಿಯ ಸೊಬಗನ್ನು ಆನಂದಿಸಿ ಅನುಭವಿಸುವುದರ ಮೂಲಕ ತನ್ನ ರಜೆ ದಿನಗಳನ್ನು ಅರ್ಥಪೂರ್ಣವಾಗಿ ಕಳೆಯುತ್ತಿದ್ದಾರೆ.
Jain Public School ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಕೆಸರುಗದ್ದೆ ಓಟ, ಕೆಸರುಗದ್ದೆಯಲ್ಲಿ ಹಾಪ್ಸ್ ರೇಸ್, ಚೆಂಡು ಎಸೆತ , ಹಾಗೂ ರೈನ್ ಡ್ಯಾನ್ಸನ್ನು ಅತ್ಯಂತ ಸಂತೋಷದಿಂದ ಆಟವಾಡಿ ನೃತ್ಯ ಮಾಡುವ ಮೂಲಕ ತಮ್ಮ ದಿನವನ್ನು ಕಳೆದರು. ಇದರಿಂದ ಇತ್ತೀಚಿನ ದಿನಗಳಲ್ಲಿ ದಿನಗಳಲ್ಲಿ ಮಣ್ಣಿನ ಆಟಗಳಿಂದ ದೂರ ಉಳಿಯುತ್ತಿರುವ ಮಕ್ಕಳಿಗೆ ಪುನಃ ಮಣ್ಣಿನೊಂದಿಗೆ ಆಟವಾಡಿಸುವ ಮೂಲಕ ಅದರ ಮಹತ್ವವನ್ನು ತಿಳಿಸಲಾಯಿತು.
Jain Public School ಅಪರೂಪದ ಚಟುವಟಿಕೆ, ಮಣ್ಣಿನೊಂದಿಗೆ ಮಕ್ಕಳಾಟ
Date: