Shivamogga Food Court ನಗರದಲ್ಲಿ ವಿವಿಧೆಡೆ ಅಸಮರ್ಪಕ ಶೌಚಾಲಯ ವ್ಯವಸ್ಥೆ ಪರಿಶೀಲನೆ ಜನದಟ್ಟಣೆ ಪ್ರದೇಶದಲ್ಲಿ ಶೌಚಾಲಯವಿದ್ದರೂ ಬಳಕೆಗೆ ಇಲ್ಲದಿರುವ ಬಗ್ಗೆ ಸಾರ್ವಜನಿಕರ ದೂರಿನ ಅನ್ವಯ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟ ಬುಧವಾರ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದೆ.
ಮಲ್ಲಿಕಾರ್ಜುನ್ ಟಾಕೀಸ್ ಪಕ್ಕದಲ್ಲಿರುವ ಸಸ್ಯಹಾರಿ, ವೇಜ್ ಪುಢ್ ಕೊರ್ಟ್ ನಲ್ಲಿ ಇರುವ ಸಾರ್ವಜನಿಕ ಶೌಚಾಲಯ ಇದಾಗಿದೆ. ಸಾರ್ವಜನಿಕರು, ಸಣ್ಣ ಪುಟ್ಟ ಮಕ್ಕಳು ಸೇರಿ ಕುಟುಂಬ ಪರಿವಾರದೊಂದಿಗೆ ಹಾಗೂ ಅಕ್ಕಪಕ್ಕದ ಕಾಲೇಜು ಮಹಿಳಾ ವಿದ್ಯಾರ್ಥಿಗಳು, ಬಹಳಷ್ಟು ಹಿರಿಯರು ವಯೋವೃದ್ಧರು ಸಸ್ಯಹಾರಿ ಪುಢ್ ಕೊರ್ಟ್ ಗೆ ಆಹಾರ ಸವಿಯಲು ಹೋಗುತ್ತಾರೆ.
ಆದರೆ ವಾಶ್ ರೂಮ್‌ಗೆ ಹೋಗಬೇಕೆಂದರೆ ಪುಡ್‌ಕೋರ್ಟ್‌ನಲ್ಲಿ ಇರುವ ಪುರುಷ ಹಾಗೂ ಮಹಿಳಾ ಶೌಚಾಲಯವೂ ಸದಾ ಬಿಗಾ ಹಾಕಿರುತ್ತದೆ. ಸಮಿಪದಲ್ಲಿ ಎಲ್ಲೂ ಶೌಚಾಲಯವಿಲ್ಲ ಎಂಬ ದೂರು ಬಂದಿತ್ತು.
ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟವು ಪುಢ್ ಕೋರ್ಟ್‌ಗೆ ಭೇಟಿ ನೀಡಿ, ವಾಸ್ತವ ಸ್ಥಿತಿಯನ್ನು ಪರಿಶೀಲನೆ ಮಾಡಿತು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ. ವಿ. ವಸಂತ್‌ಕುಮಾರ್ ಮಾತನಾಡಿ, ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ ಗ್ರಾಹಕರು ನಿಮ್ಮ ಬಳಿ ಆಹಾರ ಸವಿಯಲು ಬರುವರು ಅವರಿಗೆ ಮೂಲಭೂತ ಅವಶ್ಯಕವಾದ ಶೌಚಾಲಯವು ಒಂದು, ಅದಕ್ಕೆ ಬೀಗ ಹಾಕಿರುವುದು ಎಷ್ಟು ಸರಿ ಎಂದರು.
Shivamogga Food Court ನಗರದಲ್ಲಿ ವಿವಿಧೆಡೆ ಅಸಮರ್ಪಕ ಶೌಚಾಲಯ ವ್ಯವಸ್ಥೆ ಪರಿಶೀಲನೆ ಅದಕ್ಕೆ ಅಕ್ಕ ಪಕ್ಕದ ಅಂಗಡಿಯವರು ದುರ್ವಾಸನೆ ಬರುತ್ತದೆ ಎಂದು ಬೀಗ ಹಾಕಿರುವುದಾಗಿ ತಿಳಿಸಿದರು.
ಪಾಲಿಕೆ ಅಧಿಕಾರಿಗಳಿಗೆ ದಿನನಿತ್ಯ ಸ್ವಚ್ಛ ಮಾಡಲು ಸದಾ ಸಿಬ್ಬಂದಿಯನ್ನು ಇಟ್ಟು ಹಣ ಪಾವತಿ ಮಾಡಿ ಶೌಚಾಲಯ ಬಳಸಲು ತಿಳಿಸಿದರು. ಎಲ್ಲಾ ಕನ್ಸರ್ವೆನ್ಸಿಗಳಲ್ಲಿ ಸಿದ್ಧಗೊಂಡಿರುವ ಶೌಚಾಲಯಗಳು ಸಾರ್ವಜನಿಕರ ಬಳಕೆಗೆ ಸಿಗುವಂತೆ ಮಾಡಲು ಸೂಚಿಸಿದರು.
ಒಕ್ಕೂಟದ ಸದಸ್ಯರಾದ ವಿನೋದ್ ಪೈ, ಸೀತಾರಾಮ್, ಚನ್ನವೀರಪ್ಪ ಗಾಮನಗಟ್ಟಿ, ಪುಡ್ ಕೋರ್ಟ್ ವ್ಯಾಪಾರಿಗಳು, ಪಾಲಿಕೆ ಅಧಿಕಾರಿಗಳು ಇಂಜಿನಿಯರ್ ಸುಧೀರ್ ಕೆ ಆಚಾರ್ಯ, ಶೌಚಾಲಯದ ನಿರ್ವಹಣಾಧಿಕಾರಿ ಶ್ರೀಧರ್ ಉಪಸ್ಥಿತರಿದ್ದರು.
