ಸಾಹಸಿ ಯೋಧರಿಗೆ ಕೇಂದ್ರ ಸರ್ಕಾರ ನೀಡುವ ಶೌರ್ಯ ಪ್ರಶಸ್ತಿಗೆ ಪೂರಕವಾಗಿ ರಾಜ್ಯ ಸರ್ಕಾರ ನೀಡುವ ಗೌರವಧನವನ್ನು ಎಂಟು ಪಟ್ಟು ಹೆಚ್ಚಿಸಿದೆ.
ರಾಜ್ಯ ಮೂಲದ ಯೋಧರು ಪರಮವೀರ ಚಕ್ರ, ಮಹಾವೀರ ಚಕ್ರ ಸೇರಿದಂತೆ ನಾನಾ ಶೌರ್ಯ ಪ್ರಶಸ್ತಿ ಪಡೆದವರಿಗೆ ರಾಜ್ಯ ಸರ್ಕಾರ ಒಂದು ಸಲಕ್ಕೆ ಗೌರವ ಧನವಾಗಿ ನಗದು ಮೊತ್ತವನ್ನು ನೀಡುತ್ತಿದೆ. ದೇಶದ ಹಲವು ರಾಜ್ಯಗಳು ಶೌರ್ಯ ಪ್ರಶಸ್ತಿಯ ಧನವನ್ನು ಹೆಚ್ಚಿಸಿದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಗೌರವಧನದ ಮೊತ್ತವನ್ನು ಹೆಚ್ಚಿಸಲು ನಿರ್ಧರಿಸಿದೆ. ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ವತಿಯಿಂದ ನೀಡಲಾಗುವ ಅನುದಾನವನ್ನು ಕೂಡ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಗಾವಿ ಅಧಿವೇಶನದಲ್ಲಿ ತಿಳಿಸಿದರು.
ಈ ಹಿಂದೆ ಪರಮವೀರಚಕ್ರ ಈಗಿನ ಮೊತ್ತ 25 ಲಕ್ಷ ರೂ, ಪರಿಷ್ಕೃತ ಮೊತ್ತ 1.5 ಕೋಟಿ ರೂ. ಅಶೋಕ ಚಕ್ರ ಈಗಿನ ಮೊತ್ತ 25 ಲಕ್ಷರೂ, ಪರಿಷ್ಕೃತ ಮೊತ್ತ 1.5 ಕೋಟಿ ರೂ. ಮಹಾವೀರ ಚಕ್ರ ಈಗಿನ ಮೊತ್ತ 12 ಲಕ್ಷ ರೂ, ಪರಿಷ್ಕೃತ ಮೊತ್ತ 01 ಕೋಟಿ ರೂ. ಕೀರ್ತಿ ಚಕ್ರ ಈಗಿನ ಮೊತ್ತ 12 ಲಕ್ಷ ರೂ, ಪರಿಷ್ಕೃತ ಮೊತ್ತ 01ಕೋಟಿ ರೂ. ವೀರ ಚಕ್ರ ಈಗಿನ ಮೊತ್ತ 8 ಲಕ್ಷ ರೂ, ಪರಿಷ್ಕೃತ ಮೊತ್ತ 50 ಲಕ್ಷರೂ. ಶೌರ್ಯ ಚಕ್ರ ಈಗಿನ ಮೊತ್ತ 8 ಲಕ್ಷ ರೂ, ಪರಿಷ್ಕೃತ ಮೊತ್ತ 50 ಕೋಟಿ ರೂ. ಸೇನಾ/ನೌಕಾ ಸೇನಾ/ವಾಯು ಸೇನಾ ಪದಕ ಈಗಿನ ಮೊತ್ತ 2 ಲಕ್ಷ ರೂ, ಪರಿಷ್ಕೃತ ಮೊತ್ತ 15 ಲಕ್ಷ ರೂ. ವಿಶೇಷ ಪ್ರಶಸ್ತಿಗಳು ಈಗಿನ ಮೊತ್ತ 2 ಲಕ್ಷ ರೂ, ಪರಿಷ್ಕೃತ ಮೊತ್ತ 15 ಲಕ್ಷ ರೂ ದಷ್ಟು ಹೆಚ್ಚಿಸಲಾಗಿದೆ.
‘ಯೋಧರ ಮನೋಭಿಲಾಷೆಯನ್ನು ಹೆಚ್ಚಿಸಿ, ದೇಶಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮತ್ತು ಯೋಧರ ಮನೋಸ್ಥೈರ್ಯ ಹೆಚ್ಚಳವನ್ನು ಪ್ರೋತ್ಸಾಹಿಸುವ ಕ್ರಮ ಇದಾಗಿದೆ. ರಾಜ್ಯ ಸರ್ಕಾರ ಸೈನಿಕ ಕಲ್ಯಾಣಕ್ಕೆ ಆದ್ಯತೆ ನೀಡುತ್ತಿದೆ’ ಎಂದು ಬೊಮ್ಮಾಯಿ ಅವರು ಹೇಳಿದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.