ರಾಜ್ಯ ಸರ್ಕಾರ ರಾಜ್ಯಾದ್ಯಂತ ಹತ್ತು ವರ್ಷದ ಮಕ್ಕಳಿಗೆ ಉಚಿತವಾಗಿ ಡಿಟ್ಯಾಪ್ ಲಸಿಕೆಯನ್ನು ನೀಡಲು ನಿರ್ಧರಿಸಿದೆ.
ಈ ಲಸಿಕೆಯು ಗಂಟಲು ಮಾರಿ, ನಾಯಿ ಕೆಮ್ಮು ಮತ್ತು ಧನುರ್ವಾಯು ರೋಗಗಳನ್ನು ತಡೆಗಟ್ಟುವಲ್ಲಿ ಮುಖ್ಯಪಾತ್ರವಹಿಸುತ್ತದೆ. ಈ ಲಸಿಕೆಯನ್ನು ಈಗಾಗಲೇ ಪಡೆದುಕೊಂಡಿರುವ ಮಕ್ಕಳಿಗೆ ಬೂಸ್ಟರ್ ಡೋಸ್ ಆಗಿಯೂ ನೀಡಲಾಗುತ್ತದೆ.
ಈ ಲಸಿಕೆಯನ್ನು ನಿರ್ದಿಷ್ಟ ವೇಳಾಪಟ್ಟಿಯ ಅನುಸಾರ 5 ಡೋಸ್ ಗಳಾಗಿ ನೀಡಲಾಗುತ್ತದೆ. 2,4,6 ತಿಂಗಳು, 15ರಿಂದ 18 ತಿಂಗಳೊಳಗೆ ಮತ್ತು 4 ರಿಂದ 6 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುತ್ತದೆ. ಬಳಿಕ 10ನೇ ವರ್ಷಕ್ಕೆ ಒಂದು ಬೂಸ್ಟರ್ ಡೋಸ್ ನೀಡಲಾಗುತ್ತದೆ.
ಮಕ್ಕಳು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೆ, ಆ ಸಮಯವನ್ನು ಹೊರತುಪಡಿಸಿ ಬೇರೆಲ್ಲಾ ಸಮಯದಲ್ಲಿ ಈ ಲಸಿಕೆ ಕೊಡಿಸಬಹುದಾಗಿದೆ.
ಲಸಿಕೆಯು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಖಾಸಗಿ ಕ್ಲಿನಿಕ್ ಗಳಲ್ಲೂ ಕೂಡ ಈ ಲಸಿಕೆಯನ್ನು ಪಡೆಯಬಹುದು. ಲಸಿಕೆ ಪಡೆದುಕೊಂಡ ದಿನ ಸ್ವಲ್ಪ ಜ್ವರ ಕಾಣಿಸಿಕೊಳ್ಳುತ್ತದೆ. ಇಂಜೆಕ್ಷನ್ ನೀಡಿದ ಸ್ಥಳದಲ್ಲಿ ಕೆಂಪಾಗಿ ಊತ ಕಾಣಿಸಿಕೊಳ್ಳುತ್ತದೆ ಮತ್ತು ಆಯಾಸ ಬಿಟ್ಟರೆ ಬೇರೆ ಯಾವ ಅಡ್ಡ ಪರಿಣಾಮವೂ ಬೀರುವುದಿಲ್ಲ.
” ಚುಚ್ಚುಮದ್ದು ಮಗುವಿಗೆ ರಕ್ಷಣೆ ನೀಡಲು ದೇಹದ ಸ್ವಯಂ ಪ್ರತಿರಕ್ಷಣಾ ವ್ಯವಸ್ಥೆಯನ್ನು ಪ್ರಚೋದಿಸುತ್ತವೆ. ಚುಚ್ಚುಮದ್ದನ್ನು ಚುಚ್ಚಿಸಿಕೊಳ್ಳುವುದರಿಂದ ಆಗುವ ಸಣ್ಣಪುಟ್ಟ ಅಡ್ಡಪರಿಣಾಮಗಳಿಗೆ ಹೋಲಿಸಿದರೆ, ಚುಚ್ಚಿಸಿಕೊಳ್ಳದಿದ್ದರೆ ಆಗುವ ಅಪಾಯವೇ ಹೆಚ್ಚು” ಎಂದು ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ನಿರ್ದೇಶಕ ಡಾ. ಸಂಜಯ್ ಕೆ.ಎಸ್ ತಿಳಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.