Akashvani Bhadravati ಆಕಾಶವಾಣಿ ಭದ್ರಾವತಿ ಕೇಂದ್ರ ಮಕ್ಕಳಿಗೆ ಬೇಸಿಗೆ ರಜೆಯಲ್ಲಿ ವಿವಿಧ ಹಾಡನ್ನು ಕಲಿಸಲು ನವೀನ ಕಾರ್ಯಕ್ರಮವನ್ನು ಈ ತಿಂಗಳ 8 ರ ಸೋಮವಾರದಿಂದ ಪ್ರಸಾರ ಮಾಡುಲಾಗುತ್ತಿದೆ.
ಪ್ರತೀ ಸೋಮವಾರ ಬೆಳಿಗ್ಗೆ 7.15 ರಿಂದ 7.30ರವರೆಗೆ 3ನೇ ವಯಸ್ಸಿನಿಂದ 10ನೇ ವಯಸ್ಸಿನ ಮಕ್ಕಳಿಗೆ ಚಿನ್ನರ ಗೀತೆಯನ್ನು ಕಲಿಸುವ ವಿನೂತನ ಕಾರ್ಯಕ್ರಮವನ್ನು ಸಿದ್ಧಪಡಿಸಿ ಪ್ರಸಾರಿಸುತ್ತಿದ್ದು, “ಹಾಡುತ್ತಾ ನಲಿಯೋಣ” ಸರಣಿಯಲ್ಲಿ ಪ್ರತೀ ವಾರ ಒಂದೊಂದು ಹಾಡನ್ನು ಕಲಿಸುತ್ತಿದ್ದು, ಕಲಿಸಿದ ಹಾಡನ್ನು ಪುಟಾಣಿಗಳು ಹಾವ ಭಾವದೊಂದಿಗೆ ಹಾಡಿ ಮೊಬೈಲ್‍ನಲ್ಲಿ ಚಿತ್ರೀಕರಿಸಿ ಆಕಾಶವಾಣಿ ಭದ್ರಾವತಿ ವಾಟ್ಸಾಪ್ ಸಂಖ್ಯೆ 9481572600 ಗೆ ಅಥವಾ ‘airbdvt@gmail.com’ ಈ-ಮೈಲ್ ಗೆ ಒಂದು ವಾರದ ಒಳಗೆ ಕಳುಹಿಸಿದರೆ ವೀಡಿಯೋ ಚಿತ್ರೀಕರಣ ಮಾಡಿ ಕಳುಹಿಸಿದ ಪುಟಾಣಿಗಳ ಹಾಡನ್ನು ಭದ್ರಾವತಿ ಆಕಾಶವಾಣಿಯ ಯೂಟ್ಯೂಬ್ ಚಾನಲ್‍ನಲ್ಲಿ ಅದನ್ನು ಪ್ರಕಟಿಸಿ ಆ ಮಕ್ಕಳ ಪ್ರತಿಭೆಯನ್ನು ಜಗತ್ತಿನಾದ್ಯಂತ ತಿಳಿಸುವ ಪ್ರಯತ್ನ ಮಾಡಲಾಗುವುದು.
Akashvani Bhadravati ಬೇಸಿಗೆ ರಜೆಯ ಸದುಪಯೋಗಕ್ಕಾಗಿ ಸಿದ್ದಪಡಿಸಿದ ‘ಹಾಡುತ್ತಾ ನಲಿಯೋಣ’ ಕ್ರಿಯಾತ್ಮಕ ಕಲಿಕಾ ಸರಣಿಯು ಆಕಾಶವಾಣಿ ಭದ್ರಾವತಿಯ ಎಫ್.ಎಂ 103.5 ಹಾಗೂ ಮೀಡಿಯಂ ವೇವ್ಸ್ 675 ಕಿಲೋ ಹಟ್ರ್ಸ್ ಮತ್ತು ‘newsonair’Appನಲ್ಲಿ ಪ್ರಸಾರ ಸಮಯದಲ್ಲಿ ಕೇಳುವುದರೊಂದಿಗೆ ಭದ್ರಾವತಿ ಆಕಾಶವಾಣಿ youtube ಚಾನಲ್‍ನಲ್ಲಿ ಕೇಳುವಂತೆ ಭದ್ರಾವತಿ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಎಸ್.ಆರ್. ಭಟ್ ತಿಳಿಸಿದ್ದಾರೆ.