Friday, December 5, 2025
Friday, December 5, 2025

Bharatiya Janata Party ಕಾಂಗ್ರೆಸ್ ಮುಗಿಸುತ್ತೇವೆ ಎಂಬ ಹೇಳಿಕೆಗೆ ಜಿಲ್ಲಾ ಕಾಂಗ್ರೆಸ್‌‌ ಪ್ರತಿ ಚಾಟಿ

Date:

Bharatiya Janata Party ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವನ್ನು ವಿಶ್ವಗುರು ಮಾಡಲು ಕಾಂಗ್ರೇಸ್ ಪಕ್ಷವನ್ನು ಬುಡ ಸಮೇತ ಕಿತ್ತು ಹಾಕಬೇಕೆಂದು ಕರೆ ನೀಡಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್ ಅವರೆ ನೀವು ವಿಧಾನ ಪರಿಷತ್ ಸದಸ್ಯರಾಗಿದ್ದಾಗಲೆ ನಿಮ್ಮ ಕುಟುಂಬ ಸಮೇತವಾಗಿ ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿ ಆಗಿದ್ದಿರಲ್ಲ, ಅದು ಕಾಂಗ್ರೇಸ್ ಪಕ್ಷದ ಸರ್ಕಾರ ಜಾರಿಗೆ ತಂದ ಯೋಜನೆ ಎನ್ನುವುದನ್ನು ಮರೆಯಬಾರದೆಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ಕುಹಕವಾಡಿದ್ದಾರೆ.

ಭಾರತೀಯ ಜನತಾ ಪಕ್ಷ ಮತ್ತು ಅದರ ನಾಯಕರು ಎಂತಹ ಸುಳ್ಳುಗಾರರು ಎನ್ನುವುದು, ಜನರ ಜಿ.ಎಸ್.ಟಿ. ತೆರಿಗೆ ಹಣವನ್ನು ರಾಜ್ಯಗಳಿಗೆ ಕೊಡದೆ ಭಂಡತನ ತೋರಿಸುತ್ತಿರುವುದನ್ನು ದೇಶದ ಜನರು ತಿಳಿಯದ ದಡ್ಡರೇನಲ್ಲ ಎನ್ನುವುದನ್ನು ಬಿ.ಜೆ.ಪಿ.ಯವರು ತಿಳಿದುಕೊಳ್ಳಲಿ. ದೇಶದಲ್ಲಿ ಹಣ ಅಮಾನೀಕರಣ ಮಾಡಿದಾಗ ಕೇಂದ್ರ ಸರ್ಕಾರಕ್ಕೆ ಎಷ್ಟು ಹಣ ಮರಳಿ ಬಂದಿದೆ ಎಂದು ಹೇಳಲಾಗದವರು, ಪ್ರಧಾನ ಮಂತ್ರಿಗಳ ಆರೋಗ್ಯ ನಿಧಿಗೆ ಎಷ್ಟು ಪ್ರಮಾಣದಲ್ಲಿ ಹಣ ಬಂದಿದೆ ಎನ್ನುವ ಬಗ್ಗೆ ತುಟಿ ಬಿಚ್ಚದವರು, 07 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಚುನಾವಣಾ ಬಾಂಡ್‌ಗಳ ಮೂಲಕ ಕಳ್ಳರು, ಸುಳ್ಳರು, ದ್ರೋಹಿಗಳಿಂದ ಹಣವನ್ನು ಸಂಗ್ರಹಿಸಿ ಬಿ.ಜೆ.ಪಿ.ಯ ಆಲಿಬಾಬಾ ಗ್ಯಾಂಗ್‌ಗೆ ದೇಶದ ಸುಪ್ರೀಂ ಕೋರ್ಟ್ ಚೀಮಾರಿ ಹಾಕಿದರೂ ಬುದ್ದಿ ಬಂದಂತೆ ಇಲ್ಲ. ಇಂತಹ ಹಿನ್ನೆಲೆಯ ಬಿ.ಜೆ.ಪಿ.ಯವರು ಕಾಂಗ್ರೇಸ್ ಪಕ್ಷವನ್ನು ಬುಡ ಸಮೇತ ಕಿತ್ತು ಹಾಕುವುದಕ್ಕೆ ಕಾಂಗ್ರೇಸ್ ಪಕ್ಷ ಏನು ನುಗ್ಗೆಯ ಮರವಲ್ಲ. ಅದು ಇಡೀ ಭಾರತವನ್ನು ಆವರಿಸಿರುವ ಆಲದ ಮರವೆಂದು ಎಂ.ಬಿ. ಭಾನುಪ್ರಕಾಶ್ ಅವರಿಗೆ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಎದುರೇಟು ನೀಡಿದ್ದಾರೆ.

Bharatiya Janata Party ಕಾಂಗ್ರೇಸ್ ಪಕ್ಷ ಅಧಿಕಾರದ ಆಸೆ ಹೊಂದಿದ್ದ ಜನರಿಂದ ಹುಟ್ಟಿದ ಪಕ್ಷವಲ್ಲ. ಅದು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರನ್ನು ದೇಶದಿಂದ ಓಡಿಸಲು ಜನ್ಮ ತಾಳಿದ ಪಕ್ಷವಾಗಿದೆ. ಆಲದ ಮರದಂತೆ ಇಡೀ ದೇಶವನ್ನು ಆವರಿಸಿಕೊಂಡಿರುವ ಕಾಂಗ್ರೇಸ್ ಪಕ್ಷವನ್ನು ಮುಗಿಸುತ್ತೇವೆಂದು ಹೇಳಿದಂತಹ ಬ್ರಿಟೀಷರ ಗುಲಾಮರು ಸಾವಿರಾರು ಸಂಖ್ಯೆಯಲ್ಲಿ ಬಂದು ಹೋಗಿದ್ದಾರೆ. ಅಂತದರಲ್ಲಿ ದೇಶ ರಕ್ಷಕರೆಂದು ಹೇಳಿಕೊಂಡು ಬಂದ ಬಿ.ಜೆ.ಪಿ.ಯವರು ಲೂಟಿ ಮಾಡಿದ ಹಣದಲ್ಲಿ ಆಪರೇಷನ್ ಕಮಲ ಎನ್ನುವ ಅಂಟು ಜಾಡ್ಯವನ್ನು ಚುನಾಯಿತ ಶಾಸಕರು, ಸಂಸದರು, ಇತರೆ ಚುನಾಯಿತ ಸದಸ್ಯರಿಗೆ ಅಂಟಿಸಿ ಚುನಾಯಿತ ಸದೃಢ ಸರ್ಕಾರಗಳನ್ನೆ ಬೀಳಿಸಿ ದುರಾಢಳಿತ ಮಾಡಿದ್ದು ಬಿಟ್ಟರೆ ಮತ್ತೇನನ್ನೂ ಮಾಡಿಲ್ಲ. ದುರಾಢಳಿತದ ಅಮಲು ನೆತ್ತಿಗೇರಿಸಿಕೊಂಡವರು ಎಂ.ಬಿ.ಭಾನುಪ್ರಕಾಶ್ ಅಂತವರು ಮಾತ್ರ ಕಾಂಗ್ರೇಸ್ ಪಕ್ಷವನ್ನು ಮುಗಿಸುತ್ತೇವೆಂದು ಹೇಳಲು ಸಾಧ್ಯವೆಂದು ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ಟೀಕಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...