Sunday, August 2, 2026
Sunday, August 2, 2026

Breaking News ಮದುವೆಗೆ ಮಂಗಳವಾದ್ಯ ನುಡಿಸಲು ಹೊರಟವರಿಗೆ ಮೃತ್ಯು ಕಾಡಿತ್ತು…

Date:

Breaking News ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಶುಭಶ್ರೀ ಕಲ್ಯಾಣಮಂಟಪದಲ್ಲಿದ್ದ ಮದುವೆಗೆ ವ್ಯಾದ್ಯ ನುಡಿಸಲು ಹೋಗುತ್ತಿದ್ದ ನಾಲ್ವರಲ್ಲಿ ಇಬ್ವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಇಂದು ಸಂಭವಿಸಿದೆ.
ವಾದ್ಯಗಾರ ಮಂಜುನಾಥ್ ಬೈಕ್‌ನಲ್ಲಿ, ಅಜಯ್ ಮತ್ತು ರಮೇಶ್ ಇನ್ನೊಂದು ಬೈಕಿನಲ್ಲಿ ಹಾಗೂ ಮನು ಮತ್ತು ಜ್ಯೋತಿಕುಮಾರ್ ಒಂದು ಬೈಕ್‌ನಲ್ಲಿ ಹೊನ್ನಾಳಿಯ ಹಿರೆಬಾಸೂರು ಗ್ರಾಮದಿಂದ ಹೊರಟು ರಾತ್ರಿ ಸುಮಾರು ೯:೩೦ ಗಂಟೆಯ ಸಮಯದಲ್ಲಿ ಶಿವಮೊಗ್ಗ ತಾಲ್ಲೂಕು ಬುಳ್ಳಾಪುರ ಗ್ರಾಮದ ಬಳಿ ಬರುತ್ತಿದ್ದಾಗ ಶಿವಮೊಗ್ಗದಿಂದ ಬರುತ್ತಿದ್ದ ಬೈಕ್ ಸವಾರರಿಬ್ಬರು ಡಿಕ್ಕಿ ಹೊಡೆದಿದ್ದಾರೆ.

Breaking News ಓವರ್ಟೇಕ್ ಮಾಡಲು ಹೋಗಿ ಚಲಾಯಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆಸಿದ್ದಾನೆ. ಅಪಘಾತಪಡಿಸಿದ್ದರಿಂದ ಎರಡು ಬೈಕ್ ನಲ್ಲಿ ಇದ್ದವರು ಬೈಕ್ ಸಮೇತ ಕೆಳಗೆ ರಸ್ತೆಯ ಮೇಲೆ ಬಿದ್ದಿದ್ದು ಆಗ ಅಲ್ಲೇ ಹಿಂಬದಿಯಲ್ಲಿ ಬರುತ್ತಿದ್ದ ಮಂಜುನಾಥ್ ಹಾಗೂ ಮನು ಮತ್ತು ಜ್ಯೋತಿ ಕುಮಾರ್ ಕೆಳಗೆ
ಬಿದ್ದವರನ್ನು ಉಪಚರಿಸಿ ನೋಡಲಾಗಿ ಅಜಯ್ ರವರಿಗೆ ಎಡಕಾಲಿಗೆ ಮತ್ತು ತಲೆಗೆ ಪೆಟ್ಟಾಗಿತ್ತು, ರಮೇಶ ಮುಖಕ್ಕೆ, ತಲೆಗೆ, ಎಡಕಾಲಿಗೆ ಪೆಟ್ಟಾಗಿತ್ತು. ಅಪಘಾತಪಡಿಸಿದ ಬೈಕ್‌ನಲ್ಲಿ ಇದ್ದ ಮುಬಾರಕ್ ಮತ್ತು ಜಾಫರ್ ಸಾದಿಕ್ ಅವರಿಗೂ ಪೆಟ್ಟಾಗಿತ್ತು.

ಅಜಯ್ ಮತ್ತು ರಮೇಶ್ ರವರನ್ನು ಅಂಬುಲೆನ್ಸ್ ನಲ್ಲಿ ಮೆಗ್ರಾನ್ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಅಜಯ್ ಮೃತಪಟ್ಟಿರುವುದನ್ನು ಘೋಷಿಸಿದರು. ಕೆಲವೇ ಹೊತ್ತಿನಲ್ಲಿ ರಮೇಶ ಸಹ ಸಾವನ್ನಪ್ಪಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...