Tuesday, October 1, 2024
Tuesday, October 1, 2024

Bekkina Kalmatha ಸಾವು ಎಂಬುದು ನಾವು ಜೀವನದಲ್ಲಿ ನಡೆದು ಬಂದ ಮಾಗಿದ ಫಲ-ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರಶ್ರೀ

Date:

Bekkina Kalmatha ಬದುಕ ದಾರಿಯಲ್ಲಿ ಸಂತೋಷದ ನಿರ್ಗಮನವನ್ನು ಅರಗಿಸಿಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಸಾವು ಎಂಬುದು ನಾವು ಜೀವನದಲ್ಲಿ ನಡೆದು ಬಂದ ಮಾಗಿದ ಫಲ, ಗಣಿ ಮತ್ತು ಗುರುತು ಎಂದು ಹೇಳಬಹುದು. ಮಾಡಿದ ಒಳ್ಳೆಯ ಕಾರ್ಯಗಳೇ ಉಳಿಯುತ್ತದೆ ಎಂದು ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ತಿಳಿಸಿದರು.

ಅವರು ದೇವಕಾತಿಕೊಪ್ಪದಲ್ಲಿ ಕೋಟೆ ಗಂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ವೀರಶೈವ ಸಮಾಜದ ಗ್ರಾಮಾಂತರ ಅಧ್ಯಕ್ಷರೂ ಆಗಿದ್ದ ಡಾ. ಡಿ ಬಿ ವಿಜಯಕುಮಾರ್ ಅವರ ಭಾವಪೂರ್ಣ ಶ್ರದ್ಧಾಂಜಲಿ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ನಾವು ವ್ಯಕ್ತಿಯ ಸಾವಿನ ನಂತರ ಭೂಮಿಯೊಳಗೆ ಬೀಜ ಬಿತ್ತಿದಂತೆ ದೇಹವನ್ನು ಹೂತಿರುತ್ತೇವೆ. ಅದೊಂದು ರೀತಿ ಭುವಿಯಲ್ಲಿ ಬೆಳೆಯುವ ಭತ್ತವಿದ್ದಂತೆ. ಮುಂದಿನ ಪೀಳಿಗೆಯ ಹಲವರಲ್ಲಿ ಅಂತಹ ಒಳ್ಳೆಯ ಗುಣಗಳು ಕಾಣಬಹುದು ಎಂದು ಹೇಳಿದರು.

ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಕೇವಲ ಸಮಾಜಕ್ಕೆ, ಕುಟುಂಬಕ್ಕೆ ಸೀಮಿತವಾಗದೆ ಇಡೀ ವ್ಯವಸ್ಥೆಯ ನಡುವೆ ಬಡವರ, ನೊಂದವರ ಪರವಾಗಿ ಸದಾ ಅವರ ಬೆನ್ನಿಗೆ ಹೆಗಲಾಗಿ ನಿಂತು ಮಹಾನ್ ವ್ಯಕ್ತಿಯಾಗಿರುವುದು ಇಂದಿನ ವೇದಿಕೆಯಲ್ಲಿ ಕೇಳಿಬಂದ ಮಾತುಗಳಲ್ಲಿ ಸ್ಪಷ್ಟವಾಗಿ ಕಂಡು ಬರುತ್ತದೆ. ಜೀವನದ ಸಾರ್ಥಕತೆ ಬದುಕು ನಮ್ಮದಾದ ಕೂಡಲೇ ಸಂತೋಷದಿಂದ ನಿರ್ಗಮನ ಒಂದು ಮಾರ್ಗವಾಗುತ್ತದೆ ಎಂದರು.

Bekkina Kalmatha ಡಿ ಬಿ ವಿಜಯಕುಮಾರ್ ಆದರ್ಶ ವ್ಯಕ್ತಿಯಾಗಿದ್ದರು. ಅವರ ಸರಳತೆ, ಸಜ್ಜನಿಕೆ ಹಾಗೂ ಅವರ ಬಗ್ಗೆ ಜನರು ಇಟ್ಟುಕೊಂಡಿರುವ ಪ್ರೀತಿ ವಿಶ್ವಾಸ ಅವರಿಗೆ ಚಿರಶಾಂತಿ ನೀಡುತ್ತದೆ ಎಂದರು.
ವೀರಶೈವ ಸಮಾಜದ ಗ್ರಾಮಾಂತರ ಗೌರವಾಧ್ಯಕ್ಷ ಎಸ್ ಎಂ ಲೋಕೇಶ್ವರಪ್ಪ ಮಾತನಾಡುತ್ತಾ, 2007ರಲ್ಲಿ ಆರಂಭಗೊಂಡ ಲಿಂಗಾಯಿತ ವೀರಶೈವ ಸಮಾಜದ ಗ್ರಾಮಾಂತರ ವಿಭಾಗದಲ್ಲಿ ಬಹಳಷ್ಟು ವರ್ಷಗಳ ಕಾಲ ದಕ್ಷ ಹಾಗೂ ಸಮಾಜದ ಅಭಿವೃದ್ಧಿಗೆ ಶ್ರಮಿಸಬಲ್ಲ ವಿಜಯ್ ಕುಮಾರ್ ಅವರನ್ನು ಖಜಾಂಚಿಯಾಗಿ ಮಾಡಿದ್ದೆವು. 2022 ರಿಂದ ಅವರು ಅಧ್ಯಕ್ಷರಾದರು.

ದೇವಕಾತಿಕೊಪ್ಪ ಹಾಗೂ ಸಿದ್ಲಿಪುರ ಗ್ರಾಮಗಳ ಜಮೀನು ಪ್ರದೇಶವನ್ನು ಉತ್ತಮ ಬೆಲೆಗೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದು ಸೂಳೇಬೈಲು ಮಠದಲ್ಲಿ ಮೂರು ವರ್ಷ ಸಾಮಾಜಿಕ ವಿವಾಹ ಮಾಡಿಸಿದ್ದು, ಕೋಟೆಗಂಗೂರು ಗ್ರಾಮ ಪಂಚಾಯಿತಿ ಸದಸ್ಯರು, ಉಪಾಧ್ಯಕ್ಷರು ಹಾಗೂ ಅಧ್ಯಕ್ಷರಾಗಿ ಮಾಡಿದ ಅವರ ಕಾರ್ಯ ಇತರರಿಗೆ ಮಾದರಿ ಎಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ನಂದ್ಯಪ್ಪ , ಮಂಜಪ್ಪ ಹಾಗೂ ಇತರರು ಮಾತನಾಡಿದರು. ಶ್ರೀಗಳು ಶೋಭಾ ವಿಜಯ್ ಕುಮಾರ್, ಅವರ ಪುತ್ರಿಯರು ಹಾಗೂ ಕುಟುಂಬ ವರ್ಗ ಹಾಗೂ ಪಟೇಲ್ ವಂಶಸ್ಥರ ಕುಟುಂಬ ವರ್ಗಕ್ಕೆ ಶ್ರೀಗಳು ಆಶೀರ್ವದಿಸಿದರು.

ಕಾರ್ಯಕ್ರಮವನ್ನು ಶಿಕ್ಷಕ, ಸಾಹಿತಿ ಸಂತೋಷ ಬಿದರಗಡ್ಡೆ ನಿರೂಪಿಸಿದರು. ಅಪಾರ ಬಂಧು ಬಳಗದವರು, ಅಭಿಮಾನಿಗಳು, ವಿವಿಧ ಮುಖಂಡರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...