Friday, December 5, 2025
Friday, December 5, 2025

Guarantee scheme ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆ ಫಲಾನುಭವಿಗಳ ಮಾಹಿತಿ- ಚಂದ್ರ ಭೂಪಾಲ್

Date:

Guarantee scheme ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ನೇತೃತ್ವದ ಆಡಳಿತದಲ್ಲಿ ಎಲ್ಲರೂ ಪಾಲು ಪಡೆಯುವಂತಾಗಬೇಕು ಎನ್ನುವ ಉದ್ದೇಶದಿಂದ ಐದು ಗ್ಯಾರಂಟಿ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದು, ಯೋಜನೆಗಳಿಂದ ಪ್ರತಿ ಅರ್ಹ ಕುಟುಂಬವೂ ಕನಿಷ್ಟ ರೂ 5000 ರೂ. ನೆರವನ್ನು ಪಡೆಯುತ್ತಿದೆ.
ಸುದ್ದಿಗೋಷ್ಠಿಯಲ್ಲಿ ಶನಿವಾರ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಚಂದ್ರಭೂಪಾಲ್, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ ಈ ಬಗ್ಗೆ ಗಮನ ಹರಿಸಲು ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರ ರಚನೆ ಮಾಡಿದೆ. ಪ್ರತಿ ತಾಲೂಕಿಗೆ ಉಸ್ತುವಾರಿಗಳನ್ನು ನೇಮಕ‌ಮಾಡಿದೆ ಎಂದರು.
ಐದು ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯದೇ ಇರುವ ಅರ್ಹರು ಸರ್ಕಾರ ನೀಡಿರುವ ಸೌಲಭ್ಯದಿಂದ ಜನರು ಹೊರಗೆ ಉಳಿಯದಂತೆ ಎಲ್ಲಾ ಹಂತಗಳಲ್ಲಿ ಮುತುವರ್ಜಿಯಿಂದ ಗಮನಿಸಲಾಗುವುದು ಎಂದರು.
ಶಕ್ತಿ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯಲ್ಲಿ ಮಹಿಳೆಯರು ಬಸ್ ಪ್ರಯಾಣ ಉಚಿತವಾಗಿ ಮಾಡಿದ್ದು, ಕೆ.ಎಸ್.ಆರ್.ಟಿ.ಸಿ ಶಿವಮೊಗ್ಗ ಡಿಪೊಗೆ 62,25,87,090 ರೂಪಾಯಿ ಪಾವತಿಸಿದೆ. ಜೂನ್ 2023 ರಿಂದ ಮಾರ್ಚ್ 2024 ರವರಗೆ 1,82,42,996 ಮಹಿಳೆಯರು ಪ್ರಯಾಣ ಲಾಭವಾಗಿದೆ ಎಂದರು. ಗೃಹಜ್ಯೋತಿ ಯೋಜನೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸ್ತುತ ಪ್ರತಿ ಮನೆಗೆ ಪ್ರತಿ ತಿಂಗಳು 200 ಯುನಿಟ್ ವರೆಗೆ ವಿದ್ಯುತ್‌ ಉಚಿತ ಯೋಜನೆಯ ಲಾಭ ಪಡೆದಿದ್ದಾರೆ. ಸುಮಾರು 46 ಕೋಟಿ ರೂ ಜನರಿಗೆ ಲಾಭವಾಗಿದೆ ಎಂದರು.
ಅನ್ನಭಾಗ್ಯ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯಲ್ಲಿ ಜನವರಿ 2024 ರ ಮಾಹೆಯಲ್ಲಿ ಅಂತ್ಯೋದಯ, ಮತ್ತು ಬಿ.ಪಿ.ಎಲ್ ಕಾರ್ಡ್ ಹೊಂದಿರುವ 3,56,068 ಜನರು ಅರ್ಹರಾಗಿದ್ದು, ಅನ್ನಭಾಗ್ಯ ಪಡಿತರ ಚೀಟಿಯನ್ನು ಹೊಂದಿದ್ದಾರೆ. ಪ್ರತಿ ತಿಂಗಳು ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿಯ ಹಣದಲ್ಲಿ 5 ಕೆ.ಜಿ ಅಕ್ಕಿಯ ಬಾಬು ನಗದು ರೂಪದಲ್ಲಿ ಪಾವತಿ ಮಾಡಲಾಗಿದ್ದು, 20,21,23,200 ರೂಪಾಯಿ ಹಣ ಪಾವತಿ ಮಾಡಲಾಗಿದೆ.
ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2000 ರೂಪಾಯಿ ಉಚಿತ ಸಹಾಯದ ಯೋಜನೆಯಲ್ಲಿ 3,83,358 ಮಹಿಳೆಯರು ನೊಂದಾಣಿಯಾಗಿದ್ದು, ಸುಮಾರು 76 ಕೋಟಿ ರೂಪಾಯಿ ತಿಂಗಳು ಸರ್ಕಾರದಿಂದ ನೊಂದಾಣಿಯಾದ ಮನೆಯ ಒಡತಿಗೆ ಪಾವತಿಸಲಾಗಿದೆ ಎಂದರು.
ಯುವನಿಧಿಯಲ್ಲಿ 5139 ಯುವಕ- ಯುವತಿಯರ ನೊಂದಣಿ ಆಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ಎಚ್ ಎಂ ಮಧು, ಇಕ್ಕೇರಿ ರಮೇಶ್,, ಶಿವಾನಂದ, ಶಿವಣ್ಣ, ಅರ್ಚನಾ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...