Wednesday, September 16, 2026
Wednesday, September 16, 2026

Ayanur Manjunath ಕಾಂಗ್ರೆಸ್ ಸಂಸ್ಕೃತಿ ಬಗ್ಗೆ ಹುಷಾರಾಗಿ ಮಾತಾಡಿ, ಸಂಸದ ರಾಘವೇಂದ್ರರಿಗೆ ಆಯನೂರು ಚಾಟಿ

Date:

Ayanur Manjunath ನಿಮ್ಮ ತಂದೆಯವರ ಬಗ್ಗೆ ಕೆ.ಎಸ್.ಈಶ್ವರಪ್ಪ ಅಶ್ಲೀಲವಾಗಿ ಮಾತನಾಡಿದಾಗ ಪುತ್ರರಾದ ನೀವು ಪ್ರಶ್ನೆ ಮಾಡಿಲ್ಲ ಯಾಕೆ? ನಿಮ್ಮ ತಂದೆಯವರು ಕಣ್ಣೀರು ಹಾಕಿಕೊಂಡು ರಾಜಕೀಯ ತ್ಯಾಗ ಮಾಡಿದಾಗ ಪ್ರಶ್ನಿಸಲಿಲ್ಲ ಏಕೆ? ಯಡಿಯೂರಪ್ಪ ಜೈಲಿಗೆ ಹೋಗಲು ಕಾರಣ ಯಾರು? ಈಗಲಾದರೂ ಸತ್ಯ ಹೇಳಿ ಎಂದು ಸಂಸದ ಬಿ ವೈ ರಾಘವೇಂದ್ರ ಅವರಿಗೆ ಪ್ರಶ್ನಿಸಿರುವ ಮಾಜಿ ಸಂಸದ, ಕೆಪಿಸಿ ವಕ್ತಾರ ಆಯನೂರು ಮಂಜುನಾಥ, ಸಂಸ್ಕೃತಿಹೀನ ಸಂತಾನ ಇದ್ದರೆ ತಂದೆಗೆ ಇದೇ ಸ್ಥಿತಿ ಬರುತ್ತದೆ. ತಂದೆಗೆ ತೊಂದರೆ ಕೊಟ್ಟಾಗ ಸುಮ್ಮನಿದ್ದ ನಿಮ್ಮದು ಕುಲಘಾತಕ ಸಂಸ್ಕೃತಿ ಎಂದು ಟೀಕಿಸಿದ್ದಾರೆ.

ಸುದ್ದಿಗೋ಼ಷ್ಠಿಯಲ್ಲಿ ಮಾತನಾಡಿದ ಅವರು, ರಾಘವೇಂದ್ರ ವಿರುದ್ದ ಹರಿ ಹಾಯ್ದಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಚಿವ ಮಧು ಬಂಗಾರಪ್ಪ ಬಳಸುವ ಪದಗಳ ಬಗ್ಗೆ ವಾಗ್ದಾಳಿ ನಡೆಸಿ, ಸಚಿವರ ಸಂಸ್ಕೃತಿಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಪ್ರತ್ಯುತ್ತರವಾಗಿ ಮಾತನಾಡಿದ ಆಯನೂರು, ತಂದೆಯ ಆಸ್ತಿಯ ವಾರಸುದಾರರಾದ ನೀವು ನಾನು ದುಖಃ ಪಟ್ಟಷ್ಟು ಪಡಲಿಲ್ಲ. ಕಾಂಗ್ರೆಸ್ ಸಂಸ್ಕೃತಿ ಬಗ್ಗೆ ಮಾತನಾಡುವಾಗ ಹುಷಾರಾಗಿ ಮಾತನಾಡಿ. ಚೇಲಾ ಎನ್ನುವುದು ಹಿಂದಿ ಪದ ಎಂದು ನಿಮಗೆ ಗೊತ್ತಿಲ್ಲವೇ. ಚೇಲಾ ಎಂದರೆ ಶಿಷ್ಯರು. ಸಂಬoಧ ಇಲ್ಲದ ವಸ್ತುವಿಗೆ ಹಡಬೆ ಎಂದು ಹೇಳುತ್ತಾರೆ. ಇದರಲ್ಲಿ ಅಸಂಸ್ಕೃತವಾದುದು ಏನಿದೆ. ರಾಮನ ಹೆಸರು ಬಳಸುತ್ತೀರಿ. ತಂದೆಯ ಮಾತಿಗೆ ರಾಮ ಕಾಡಿಗೆ ಹೋದ, ನೀವು ತಂದೆಯನ್ನೇ ಜೈಲಿಗೆ ಕಳಿಸಿದವರು ಎಂದು ಕುಟುಕಿದರು.

Ayanur Manjunath ವಿಐಎಸ್‌ಎಲ್‌ನ್ನು ಚುನಾವಣೆ ಮುಗಿಯವರೆಗೂ ಮುಚ್ಚಬೇಡಿ ಎಂದು ನಿಮ್ಮ ಕೇಂದ್ರ ನಾಯಕರ ಬಳಿ ಹೇಳಿ ಬಂದಿರುವುದು ನಮಗೆ ಗೊತ್ತಿದೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...