B. Y. Raghavendra ಚುನಾವಣೆ ಹಿನ್ನಲೆಯಲ್ಲಿ ಸಚಿವ ಮಧು ಬಂಗಾರಪ್ಪ ಜಿಲ್ಲೆಯಲ್ಲಿ ಸಹೋದರಿ ಗೀತಾ ಪ್ರಚಾರ ಸಭೆಯಲ್ಲಿ ತನ್ನ್ನು ಟೀಕಿಸುತ್ತಿರುವುದಕ್ಕೆ ಸಂಸದ ರಾಘವೇಂದ್ರ ಆಕ್ಷೇಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,
ಪ್ರಚಾರದ ವೇಳೆ ಜಿಲ್ಲೆಯ ನೀರಾವರಿ, ಅಭಿವೃದ್ಧಿ, ಬಗುರ್ ಹುಕುಂ ಬಗ್ಗೆ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಅವರ ವಾಗ್ದಾಳಿಗೆ ಪತ್ರಿಕೆ ತೋರಿಸಿ ಯಾವ ಯಾವ ಪತ್ರಿಕೆಯಲ್ಲಿ ಸಂಸತ್ ನಲ್ಲಿ ಮಾತನಾಡಿರುವ ಬಗ್ಗೆ ಅಡಿಕೆ ವಿಚಾರ, ಭದ್ರಾವತಿ ಕಾರ್ಖಾನೆ ಬಗ್ಗೆ ಏನೇನು ಕಾರ್ಯಗಳಾಗಿವೆ ಎಂಬುದನ್ನ ತೋರಿಸಿ ಮಾತನಾಡಿದರು.
ಮೊದಲನೇ ಹಂತದ ಚುನಾವಣೆ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ಚುನಾವಣೆ ವೇಳೆ ಅನೇಕ ವಿಚಾರಗಳು ಚರ್ಚೆ ಆಗುತ್ತಿದೆ. ಹಿಂದಿನ ಸರ್ಕಾರದ ಸಾಧನೆ, ವೈಫಲ್ಯಗಳು ಚರ್ಚೆ ಆಗಲಿವೆ.
ಎನ್ ಡಿ ಎ ಒಕ್ಕೂಟ 400+ ಗುರಿ ಹೊಂದಿದೆ. ಅಭಿವೃದ್ಧಿ, ರಾಷ್ಟ್ರದ ಚರ್ಚೆಗಳು ಎನ್ ಡಿಎ ಆರಂಭಿಸಿದೆ. ಶಿವಮೊಗ್ಗದಲ್ಲಿಯೂ ರಾಜಕೀಯ ಚರ್ಚೆಗಳು ಆರಂಭಿಸಲಾಗಿದೆ. ಶಿವಮೊಗ್ಗಕ್ಕೆ ರಾಜಕೀಯ ಇತಿಹಾಸವಿದೆ. ಸಾಹಿತಿ, ಸಿಎಂಗಳಿಗೆ ಶಕ್ತಿ ತುಂಬಿದ ಕ್ಷೇತ್ರವಾಗಿದೆ ಎಂದರು.
B. Y. Raghavendra ಅಂತರಾಷ್ಟ್ರೀಯ ಮಟ್ಟದಿಂದ ಹಿಡಿದು, ಸ್ಥಳೀಯವಾಗಿ ಆಗುಹೋಗುಗಳ ಬಗ್ಗೆ ಚರ್ಚೆ ಆಗ್ತಾ ಇದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಸಾರ್ವಜನಿಕ ಸಭೆಗಳಲ್ಲಿ ಮೋದಿ, ಬಿಜೆಪಿ ಕಾರ್ಯಕರ್ತರು ಮತ್ತು ನನ್ನ ವಿರುದ್ಧ ಆಡಿರುವ ಮಾತುಗಳು ಸರಿಯಿಲ್ಲ ಎಂದರು.
B. Y. Raghavendra ಸಚಿವ ಮಧು ಬಂಗಾರಪ್ಪನವರಿಗೆ ತಮ್ಮ ಸಾಧನೆಗಳ ದಾಖಲೆ ತೋರಿಸಿ ಮಾತಾಡಿದ ಬಿ.ವೈ.ರಾಘವೇಂದ್ರ
Date: