Election Masala ಈಗಾಗಲೇ ಬಿಜೆಪಿಯ ಲೋಕಸಭಾಕ್ಷೇತ್ರದ
ಟಿಕೆಟ್ ಹಂಚಿಕೆ ಸಾಕಷ್ಟು ಸ್ಪಷ್ಟತೆ ಕೊಟ್ಟಿದೆ.
ಹಾಗೆಯೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳೂ ತಮ್ಮ ಕಸರತ್ತು ಮುಗಿಸಿವೆ.
ಕೆಲವು ಇಂಟರೆಸ್ಟಿಂಗ್ ವಿಷಯಗಳನ್ನ ನೋಡುತ್ತಾ ಹೋಗೋಣ.
೧.ಕುಟುಂಬ ರಾಜಕಾರಣ.
ಶಿವಮೊಗ್ಗ ಕ್ಷೇತ್ರದಿಂದಲೇ ಆರಂಭಿಸೋಣ.
ಬಿ.ವೈ.ರಾಘವೇಂದ್ರ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ.
ಈಗ ಮೂರು ಬಾರಿ ಸಂಸದರಾದ ಅನುಭವ ಇದೆ.
ಜೊತೆಗೆ ತೀರ್ಥಹಳ್ಳಿ, ಶಿವಮೊಗ್ಗ ನಗರ, ಶಿಕಾರಿಪುರ ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ.
ಶಿವಮೊಗ್ಗ ಜಿಲ್ಲೆಯೇ ಅಲ್ಲದೆ ಬೈಂದೂರು ತಾಲ್ಲೂಕು
ವಿಧಾನಸಭಾಕ್ಷೇತ್ರ ಕೂಡ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೇರ್ಪಡೆಯಾಗಿದೆ.
ಅಲ್ಲೂ ಕೂಡ ಬಿಜೆಪಿ ಶಾಸಕರಿದ್ದಾರೆ.
ಮೈತ್ರಿ ಬೆಂಬಲವಾಗಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕಿಯಿದ್ದಾರೆ
ಶಿವಮೊಗ್ಗ ಕ್ಷೇತ್ರಕ್ಕೆ ನೀಡಿದ ಸೇವೆ,ಮಾಡಿದ ಸಾಧನೆಗಳ ರಿಪೋರ್ಟ್ ಕಾರ್ಡ್ ಇದೆ. ಏನೂ ಪವಾಡ ನಡೆಯದ್ದಿದ್ದರೆ. ಬಿವೈಆರ್ ಆಯ್ಕೆ ಖಚಿತ.
ಮಾಜಿ ಮುಖ್ಯಮಂತ್ರಿಗಳ ಪುತ್ರಿ ಗೀತಾ ಶಿವರಾಜ್ ಕುಮಾರ್
ಎರಡನೇ ಬಾರಿ ಸ್ಪರ್ಧಿಸುತ್ತಿದ್ದಾರೆ.
ಸಹೋದರ ,ಸೊರಬ ಕ್ಷೇತ್ರದ ಶಾಸಕ,ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರದ್ದು ಪೂರ್ಣ ಬೆಂಬಲವಿದೆ.
ಶಿವಮೊಗ್ಗ ಕ್ಷೇತ್ರಕ್ಕೆ ನೀಡಿದ ಸೇವೆ,ಸಾಧನೆ ರಿಪೋರ್ಟ್ ಕಾರ್ಡ್ ಶೂನ್ಯ ತೋರಿಸುತ್ತದೆ.
ಸರಿ.ಬಂಗಾರಪ್ಪನವರ
ಹೆಸರು ಹೇಳಿ ಅವರ ಖ್ಯಾತಿಯನ್ನ ಎನ್ ಕ್ಯಾಶ್ ಮಾಡಿಕೊಂಡರೆ ಅದೆರ ಪ್ಲಸ್ ಪಾಯಿಂಟ್.
ಜೊತೆಗೆ ಭದ್ರಾವತಿ,ಸೊರಬ, ಸಾಗರ ವಿಧಾನ ಸಭಾಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.
ಜಿಲ್ಲೆಯಲ್ಲಿ ಮಧು ಬಂಗಾರಪ್ಪನವರ ಛಾಪು ಇನ್ನೂ ಸ್ಷಷ್ಟ ಬಿದ್ದಿಲ್ಲ. ಹಿರಿಯ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ನಾಮಬಲ ಮತ್ತು ಸದ್ಯ ಚಲಾವಣೆಯಲ್ಲಿರುವ ಗ್ಯಾರಂಟಿಯನ್ನೇ ಅಪ್ಪಿಕೊಂಡು ಮುನ್ನಡೆಯಬೇಕಾಗಿದೆ.
ರಾಜಕೀಯದಲ್ಲಿ ಹಿರಿತನ ತೋರಿ ಹೆಸರು ಮಾಡಿದ್ದ ಕೆ.ಎಸ್.ಈಶ್ವರಪ್ಪ ನವರೀಗ ಬಿಜೆಪಿ ಬಂಡಾಯ ಅಭ್ಯರ್ಥಿಯಾಗುವ ಗುಟುರು ಹಾಕುತ್ತಿದ್ದಾರೆ.
ಸಜ್ಜನರ ಅನಿಸಿಕೆಯೆಂದರೆ ಅವರು ತಮ್ಮ ಪುತ್ರ ಹಾವೇರಿಯಲ್ಲಿ ನೂರಕ್ಕೆ ನೂರು ಗೆಲ್ಲುವರು ಎಂಬ ವಿಶ್ವಾಸವಿದ್ದರೆ ಹಾವೇರಿಯಲ್ಲೇ ಈ ಬಂಡಾಯ ಸಾರ್ಥಕ ಪಡಿಸಿಕೊಳ್ಳುವ ಪ್ರಯತ್ನ ಮಾಡಬೇಕು.
ಶಿವಮೊಗ್ಗದಲ್ಲಿ ಬಲವಾಗುತ್ತಿರುವ ಕಾಂಗ್ರೆಸ್ ಎದುರು ಅವರಿಗೆ “ನೆಗೆಟಿವ್” ಬಿಜೆಪಿ ಮತಗಳ ಲಭ್ಯತೆ ಕಡಿಮೆ.
ನೈತಿಕವಾಗಿ ಈಶ್ವರಪ್ಪ ಅವರದ್ದೂ ಕುಟುಂಬ ರಾಜಕಾರಣವೆ. ಇಲ್ಲಿನ ಪ್ರಬಲ ಮೂರೂ ವ್ಯಕ್ತಿಗಳ ಸ್ಪರ್ಧೆ ಇದಕ್ಕೆ ಹೊರತಾಗಿಲ್ಲ.
ಈಗ ಬಿಎಸ್ ವೈ ಅವರ ಕೈಯಲ್ಲಿರುವ ಮಂತ್ರದಂಡ ಏನು ಮಾಡುತ್ತದೆ? ಎಂಬುದೇ ಈಗಿನ ವಿಚಾರ.
ತುಮಕೂರಿನಲ್ಲಿ ಸೋಮಣ್ಣ ಮತ್ತು ಮಾಧು ಸ್ವಾಮಿ ಅವರ ವಲಯದಲ್ಲಿ
ಇದ್ದ ಅಸಮಾಧಾನ ತಣ್ಣಗೆ ಮಾಡಿದ್ದಾರೆ.
ಕೊಪ್ಪಳದ ಸಂಗಣ್ಣ ಕರಡಿ ಅವರಲ್ಲಿ ಇದ್ದ
ಅತೃಪ್ತಿಗೂ ಸಮಾಧಾನ ಹೇಳಿದ್ದಾರೆ. ದಾವಣಗೆರೆಯಲ್ಲಿ ಹೊಗೆಯಾಡಿದ ರೇಣುಕಾ ಚಾರ್ಯ, ರವೀಂದ್ರ ನಾಥ್ ಬಣದ ಬಗ್ಗೆಯೂ ಕೂಲ್ ಮಾಡಿದ್ದಾರೆ.
ಪ್ರಮುಖವಾಗಿ ಬೆಳಗಾವಿಯಲ್ಲಿ ಗೋ ಬ್ಯಾಕ್ ಶೆಟ್ಟರ್ ಘೋಷಣೆ ಈಗ ಕಮಾನ್ ಶೆಟ್ಟರ್ ಆಗಿ ಬಿಎಸ್ ವೈ ಪರಿವರ್ತಿಸಿದ್ದಾರೆ.
ಛೂ ಮಂತ್ರಗಾಳಿ ಮಾಡಿ ಅವರ ಹಿರಿತನ ಮೆರೆದಿದ್ದಾರೆ.
ಶಿವಮೊಗ್ಗದ ಈಶ್ವರಪ್ಪನವರ ಮೇಲೆ ಅವರ ಪವಾಡ ನಡೆಯುತ್ತೋ ಇಲ್ಲವೋ ಕಾದು ನೋಡೋಣ ಎನ್ನುತ್ತಾರೆ ಬಿಜೆಪಿಯಲ್ಲಿನ ಪರಿಣಿತರು. “ಕೇವಲ ನಲ್ವತ್ತೆಂಟು ಗಂಟೆ ತಡೆಯಿರಿ” ಎಂದು ರಾಜ್ಯ ಬಿಜೆಪಿ ಅಧ್ಯಕ್ಷ
Election Masala ಬಿ.ವೈ.ವಿಜಯೇಂದ್ರ
ಕುತೂಹಲದ ಹೇಳಿಕೆ ನೀಡಿದ್ದಾರೆ.
