Thursday, September 17, 2026
Thursday, September 17, 2026

World Theatre Day  ವಿಶ್ವರಂಗಭೂಮಿ ದಿನಾಚರಣೆ ಪ್ರಯುಕ್ತ ಶಿವಮೊಗ್ಗದಲ್ಲಿ ರಂಗಚಿಂತನ ಕಾರ್ಯಕ್ರಮ

Date:

World Theatre Day  ವಿಶ್ವರಂಗಭೂಮಿ ದಿನಾಚರಣೆಯ ಪ್ರಯುಕ್ತ ರಂಗಾಯಣ ಶಿವಮೊಗ್ಗದಲ್ಲಿ ರಂಗಚಿಂತನ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮವನ್ನು ಹಿರಿಯ ರಂಗಕರ್ಮಿಗಳಾದ ಪುರುಷೋತ್ತಮ ತಲವಾಟರವರು ಮೇಕಪ್ ಮಾಡುವ ಮೂಲಕ ವಿಭಿನ್ನವಾಗಿ ಉದ್ಘಾಟಿಸಿದರು.

ಈ ವರ್ಷದ ವಿಶ್ವರಂಗಭೂಮಿ ಸಂದೇಶವನ್ನು ರಂಗಸಮಾಜದ ಮಾಜಿ ಸದಸ್ಯ, ರಂಗಕರ್ಮಿ ಆರ್.ಎಸ್. ಹಾಲಸ್ವಾಮಿ ವಾಚನ ಮಾಡಿದರು.

ರಂಗಾಯಣದ ಆಡಳಿತಾಧಿಕಾರಿ ಡಾ.ಶೈಲಜಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಂಗಿಕಾ ಅಭಿನಯದ ಕುರಿತು ನೃತ್ಯಗುರು ಸಹನ ಚೇತನ್, ವಾಚಿಕ ಕುರಿತು ರಂಗಕರ್ಮಿ ಚೇತನ್ ಕುಮಾರ್ ಸಿ.ರಾಯನಹಳ್ಳಿ, ಆಹಾರ್ಯ ಕುರಿತು ಹಿರಿಯ ರಂಗಕರ್ಮಿ ಪುರುಷೋತ್ತಮ ತಲವಾಟ, ಸಾತ್ವಿಕ ಕುರಿತು ಶ್ರೀಹರ್ಷ ಗೋಭಟ್ ಪ್ರಾತ್ಯಕ್ಷಿಕೆ ನೀಡಿದರು.

World Theatre Day  ಕಾರ್ಯಕ್ರಮದ ಅಂತ್ಯದಲ್ಲಿ ಡಾ.ಸಾಸ್ವೆಹಳ್ಳಿ ಸತೀಶ್ ನಿರ್ದೇಶನದಲ್ಲಿ ಸದಭಿರುಚಿ ತಂಡದವರು ‘ಆನು ಒಲಿದಂತೆ ಹಾಡುವೆ’ ನಾಟಕ ಪ್ರದರ್ಶನ ನೀಡಿದರು. ರಂಗಾಯಣದ ಆಡಳಿತಾಧಿಕಾರಿಗಳಾದ ಡಾ.ಶೈಲಜಾ, ರಂಗಸಮಾಜದ ಮಾಜಿ ಸದಸ್ಯ ಹಾಲಸ್ವಾಮಿ ಆರ್.ಎಸ್. ನೃತ್ಯ ಗುರು ಸಹನಾ ಚೇತನ್, ನಮ್ಮ ಹಳ್ಳಿ ಥಿಯೇಟರ್ ನ ಅದ್ಯಕ್ಷ ಚೇತನ್ ಸಿ.ರಾಯನಹಳ್ಳಿ, ಕತ ತಂಡದ ಶ್ರಿಹರ್ಷ, ರಂಗಕರ್ಮಿ ಮಂಜುನಾಥ ಸ್ವಾಮಿ.ಎಸ್, ಪ್ರತೀಕ್.ಸಿ.ಎಂ ಹಾಗೂ ರಂಗಾಯಣ ಶಿವಮೊಗ್ಗದ ಸಿಬ್ಬಂದಿ ವರ್ಗದವರು ಮತ್ತು ಹಲವು ಬಿ.ಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...