Thursday, November 21, 2024
Thursday, November 21, 2024

Geetha Shivarajkumar ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿದ ಗೀತಾ

Date:

Geetha Shivarajkumar ನಾನು ಖಂಡಿತ ಮತದಾರರ ಋಣವನ್ನು ತೀರಿಸುತ್ತೇನೆ. ಬದಲಾವಣೆಗೆಗಾಗಿ ನನಗೊಂದು ಅವಕಾಶ ಕೊಡಿ ಎಂದು ಶಿವಮೊಗ್ಗ ಜಿಲ್ಲೆಯ ಜನತೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಮನವಿ ಮಾಡಿದರು.
ಇಂದು ನಗರದ ಕೋಟೆ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಪತಿ ಶಿವರಾಜ್‌ಕುಮಾರ್‌ರವರೊಂದಿಗೆ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಹೋದ ಕಡೆಯಲೆಲ್ಲಾ ಉತ್ತಮ ವಾತಾವರಣ ಕಂಡು ಬರುತ್ತಿದೆ. ಅಪಾರ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಮಹಿಳೆಯರು ಕೂಡ ಹೆಚ್ಚಾಗಿ ಬರುತ್ತಿದ್ದಾರೆ. ಗೆದ್ದೆ ಗೆಲ್ಲುತ್ತೇನೆ ಎಂಬ ವಿಶ್ವಾಸ ನನಗಿದೆ ಎಂದರು.
ಮಲೆನಾಡಿನ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಮೊದಲಿನಿಂದಲೂ ಈ ಬಗ್ಗೆ ನನಗೆ ಗೊತ್ತಿದೆ. ಅಡಕೆ ಬೆಳಗಾರರ ಸಮಸ್ಯೆ,ಮುಳುಗಡೆ ಸಂತ್ರಸ್ಥರ ಸಮಸ್ಯೆ, ಮಹಿಳೆಯರ ಸಮಸ್ಯೆಗಳು, ಸಾಗುವಳಿ ರೈತರ ಸಮಸ್ಯೆ, ಉದ್ಯೋಗದ ಸಮಸ್ಯೆ, ಕಾರ್ಖಾನೆಗಳ ಸಮಸ್ಯೆಗಳ ಬಗ್ಗೆ ಗೊತ್ತು. ಖಂಡಿತ ಇವೆಲವುಗಳನ್ನು ಪಟ್ಟಿ ಮಾಡಿಕೊಂಡಿರುವೆ ಎಂದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಈಗಾಗಲೇ ಅನುಷ್ಠಾನಗೊಂಡಿವೆ. ಇವು ನಮ್ಮ ಕೈಹಿಡಿಯಲಿವೆ. ಜೊತೆಗೆ ಕೇಂದ್ರ ಮಟ್ಟದ ಕಾಂಗ್ರೆಸ್‌ನ ಗ್ಯಾರಂಟಿಗಳು ಕೂಡ ಜೊತೆಗಿವೆ. ವಾತಾವರಣ ಚೆನ್ನಾಗಿದೆ. ಗೆಲ್ಲುತ್ತೇವೆ ಎಂದರು.
ನಟ ಶಿವರಾಜ್‌ಕುಮಾರ್ ಮಾತನಾಡಿ, ಹೋದ ಕಡೆಯಲ್ಲೆಲ್ಲ ಅಪಾರ ಜನಸಂಖ್ಯೆ ಸೇರುತ್ತದೆ. ಕೇವಲ ಶಿವಣ್ಣನನ್ನು ನೋಡಲು ಮಾತ್ರ ಬರುವುದಿಲ್ಲ. ಅವರ ಮುಖದಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತದೆ. ಗೀತಾಕ್ಕನನ್ನು ಗೆಲ್ಲಿಸಬೇಕು ಎಂಬ ಭಾವವು ಇದರಲ್ಲಿ ಸೇರಿಕೊಂಡಿರುತ್ತದೆ. ಒಂದು ಹೊಸ ಬದಲಾವಣೆ ಬೇಕಾಗಿದೆ. ಗೀತಾಳಿಗೆ ಅವಕಾಶ ಕೊಡಬೇಕು ಎಂದರು.

Geetha Shivarajkumar ಈಗಾಗಲೇ ಗೀತಾ ಅವರು ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಮಲೆನಾಡಿನ ಸಮಸ್ಯೆಗಳ ಬಗ್ಗೆ ಅರಿವಿದೆ. ಶಕ್ತಿಧಾಮದ ಮೂಲಕ ಶೈಕ್ಷಣಿಕ ಸೇವೆಯನ್ನು ಮಾಡುತ್ತಿದ್ದಾರೆ. ಎಲ್ಲ ಕಡೆ ಉತ್ತಮ ವಾತಾವರಣವಿದೆ. ನಂಬಿಕೆ ನಮಗೆ ಇದೆ. ನಾವು ಗೆಲ್ಲುತ್ತೇವೆ.
ಕಾಂಗ್ರೆಸ್ ಮುಖಂಡರಾದ ಹೆಚ್.ಎಸ್. ಸುಂದರೇಶ್, ಎಂ. ಶ್ರೀಕಾಂತ್, ಎಸ್.ಕೆ.ಮರಿಯಪ್ಪ, ಜಿ.ಡಿ. ಮಂಜುನಾಥ್, ಆರ್. ಪ್ರಸನ್ನಕುಮಾರ್, ಕಲಗೋಡು ರತ್ನಾಕರ್ ಮುಂತಾದವರು ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Cooperation ಹಿರಿಯ ಸಹಕಾರಿ ಧುರೀಣ ಕೊಪ್ಪದ ಎಸ್.ಎನ್.ವಿಶ್ವನಾಥ್ ಗೆ ‘ ಸಹಕಾರಿ ರತ್ನ’ ಪ್ರಶಸ್ತಿ.

Department of Cooperation ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲ ದ...

Kasturba Girls Junior College ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪ್ರತಿಭಾ ಕಾರಂಜಿಗೆ ಇನ್ನಷ್ಟು ಶಕ್ತಿ ತುಂಬೋಣ- ಶಾಸಕ ಚನ್ನಬಸಪ್ಪ

Kasturba Girls Junior College ವೈವಿಧ್ಯತೆಯನ್ನು ಹೊಂದಿರುವ ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು...