ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ 2ನೇ ಪಂದ್ಯವು ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ನಡೆಯಿತು. ಬಾಂಗ್ಲಾದೇಶ ತಂಡವು ಭಾರತ ತಂಡಕ್ಕೆ ಸುಲಭವಾಗಿ ಸೋತಿದೆ.
ಹಾಲಿ ಚಾಂಪಿಯನ್ ಮತ್ತು ಟೋಕಿಯೋ ಒಲಂಪಿಕ್ಸ್ ನಲ್ಲಿ ‘ಕಂಚಿನ ಪದಕ’ ಗೆದ್ದಿರುವ ಭಾರತ ಮೊದಲ ಪಂದ್ಯವನ್ನು ಕೋರಿಯಾ ಜೊತೆ 2-2 ರಲ್ಲಿ ಡ್ರಾ ಮಾಡಿಕೊಂಡಿತ್ತು.
ಏಷ್ಯಾನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ 2ನೇ ಪಂದ್ಯವು ಬುಧವಾರ ನಡೆಯಿತು. ಪಂದ್ಯದ ಆರಂಭದಲ್ಲೇ ಭಾರತ ತಂಡ ಆಕ್ರಮಣಕಾರಿ ಆಟಕ್ಕೆ ಅಣಿಯಾಯಿತು. ಸ್ಟ್ರೈಕರ್ ದಿಲ್ – ಪ್ರೀತ್ ಸಿಂಗ್ ಅವರ ಹ್ಯಾಟ್ರಿಕ್ ಮತ್ತು ಜರ್ಮನ್ ಪ್ರೀತ್ ಗಳಿಸಿದ 2 ಗೋಲುಗಳು ಭಾರತ ತಂಡದ ಸುಲಭ ಜಯಕ್ಕೆ ಕಾರಣವಾದವು.
ಭಾರೀ ಅಂತರದ ಜಯ ಸಾಧಿಸಿದರೂ, ಭಾರತ ತಂಡ ಕೆಲವು ಅವಕಾಶಗಳನ್ನು ಕೈ ಚೆಲ್ಲಿತು. ಕಾದು ನೋಡುವ ತಂತ್ರಕ್ಕೆ ಒತ್ತುನೀಡಿದ ಬಾಂಗ್ಲಾದೇಶ, ಕೆಲವು ಸಂದರ್ಭಗಳಲ್ಲಿ ಪ್ರತಿರೋಧ ಒಡ್ಡುವಲ್ಲಿ ಯಶಸ್ವಿಯಾಯಿತು. ‘ಸೆಟ್ ಪೀಸ್’ ಸಂದರ್ಭದಲ್ಲಿ ಗೋಲ್ಕೀಪರ್ ಅಬೌಟ್ ನಿಪಾನ್ ಅಮೋಘ ಸಾಮರ್ಥ್ಯ ಪ್ರದರ್ಶಿಸಿದರು. ಮೊದಲ 12 ನಿಮಿಷಗಳಲ್ಲಿ 8 ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪಡೆದ ಭಾರತಕ್ಕೆ ಎದುರಾಳಿ ತಂಡದ ರಕ್ಷಣಾ ಗೋಡೆ ಕೆಡವಲು ಸಾಧ್ಯವಾಗಲಿಲ್ಲ.
12ನೇ ನಿಮಿಷದಲ್ಲಿ ದಿಲ್ – ಪ್ರೀತ್ ಗಳಿಸಿದ ಗೋಲಿನ ಮೂಲಕ ಭಾರತ ಮುನ್ನಡೆ ಗಳಿಸಿತು, 22ನೇ ನಿಮಿಷ ಮತ್ತು 45ನೇ ನಿಮಿಷದಲ್ಲಿ ದಿಲ್ – ಪ್ರೀತ್ ಮತ್ತೆರಡು ಗೋಲುಗಳನ್ನು ದಾಖಲಿಸಿದರು. 33 ಮತ್ತು 43 ನಿಮಿಷಗಳಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶಗಳಲ್ಲಿ ಹರ್ಮನ್ ಪ್ರೀತ್ ಸಿಂಗ್ ಚೆಂಡನ್ನು ಗುರಿ ಸೇರಿಸಿದರು.
ಉಪನಾಯಕ ಹರ್ಮನ್ ಪ್ರೀತ್ ಸಿಂಗ್ ಅವರ
ಪ್ಲಿಕ್ ನಲ್ಲಿ ಲಭಿಸಿದ ಚೆಂಡನ್ನು ಲಲಿತ್ ಉಪಾಧ್ಯಾಯ ಗುರಿ ಮುಟ್ಟಿಸಿದರೆ, ಮನ್ – ದೀಪ್ ಮೊರೆ ಚೊಚ್ಚಲ ಅಂತರರಾಷ್ಟ್ರೀಯ ಗೋಲಿನ ಸಂಭ್ರಮದಲ್ಲಿ ತೇಲಿದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.