ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಶ್ರೀ ಅಜಯ್ ಮಿಶ್ರಾ ಅವರು ಸುದ್ದಿಗಾರರೊಂದಿಗೆ ಸಲ್ಲದ ನಡವಳಿಕೆ ತೋರಿದ ಪ್ರಸಂಗ ವರದಿಯಾಗಿದೆ. ಲಖಿಂಪುರ್ ಖೇರಿ ಈ ಪ್ರಕರಣದಲ್ಲಿ ದೋಷಿಯಾಗಿರುವ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಕುರಿತು ಪ್ರಶ್ನಿಸಿದಾಗ ಗೃಹಮಂತ್ರಿ ವ್ಯಗ್ರರಾಗಿದ್ದಾರೆ.
ಸುದ್ದಿ ಸಂಸ್ಥೆಯೊಂದರ ಪರವಾಗಿ ಟಿವಿ ಪತ್ರಕರ್ತ ನವೀನ್ ಅವಸ್ಥಿ ಅವರು ಕೇಳಿದ ಪ್ರಶ್ನೆಗೆ ಗೃಹಮಂತ್ರಿಗಳು ತಾಳ್ಮೆ ಕಳೆದುಕೊಂಡರು ಎಂದು ತಿಳಿದುಬಂದಿದೆ.
ಸಚಿವರು ಲಖಿಪುರ್ ಖೇರಿಯ ಓಎಲ್ ಟೌನ್ ನಲ್ಲಿ ಆಮ್ಲಜನಕ ಸ್ಥಾವರವನ್ನು ಉದ್ಘಾಟಿಸಲು ಬಂದಿದ್ದರು. ಸಂದರ್ಭದಲ್ಲಿ ಪತ್ರಕರ್ತರು ಸಚಿವರ ಪುತ್ರನಾ ಮೇಲಿನ ಆರೋಪದ ಬಗ್ಗೆ ಪ್ರಶ್ನಿಸಿದರು. ಆಗ ತಮ್ಮ ಕೈಯಲ್ಲಿದ್ದ ಧ್ವನಿವರ್ಧಕ ಕಿತ್ತುಕೊಂಡು ಜೊತೆಗೆ ಸಂಗಡಿಗ ಪತ್ರಕರ್ತರ ಮೊಬೈಲ್ ಕಸಿಯುವ ಪ್ರಯತ್ನ ಮಾಡಿದರು ಎಂದು ಪತ್ರಕರ್ತರು ಹೇಳಿದ್ದಾರೆ. ಈ ಘಟನೆಯ ಸಂಪೂರ್ಣ ವೀಡಿಯೋ ಚಿತ್ರೀಕರಣವಾಗಿದೆ.
ಸಚಿವರು ಅವಸ್ಥಿ ಅವರಿಗೆ ‘ಮೂರ್ಖ ಪ್ರಶ್ನೆಗಳನ್ನು ಕೇಳಬೇಡಿ, ನಿಮಗೆ ಬುದ್ಧಿ ಸರಿಯಾಗಿದೆಯೇ’ ಎಂದು ಕೂಗಾಡಿದ್ದಾರೆ. ಅಲ್ಲದೆ ‘ಪತ್ರಕರ್ತರಿಗೆ ಹೋಗಿ ಎಸ್ಐಟಿ ಯನ್ನು ಚಾರ್ಜ್ಶೀಟ್ ಬಗ್ಗೆ ನೀವೇ ವಿಚಾರಿಸಿ ಹಾಗೂ ನೀವು ಮಾಧ್ಯಮದವರು ಚೋರರು. ಒಬ್ಬ ನಿರ್ದೋಷಿ ವ್ಯಕ್ತಿಯ ಬಗ್ಗೆ ಏನೆಲ್ಲಾ ಹೇಳಿದ್ದೀರಿ ನಿಮಗೆ ನಾಚಿಕೆ ಆಗಲ್ವೇ’ ಎಂದು ಸಿಟ್ಟಿನಿಂದ ಕೇಳಿದ್ದಾರೆ.
ಪತ್ರಕರ್ತರ ಸಮೂಹ ಅಲ್ಲಿನ ಜಿಲ್ಲಾಧಿಕಾರಿಗೆ ಮನವಿ ಪತ್ರ ನೀಡಿ ಅದನ್ನ ರಾಷ್ಟ್ರಪತಿಯವರಿಗೆ ಕಳಿಸಲು ಕೋರಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.