Monday, February 2, 2026
Monday, February 2, 2026

Death News ಪತ್ರಕರ್ತ ತಟ್ಟೆಹಳ್ಳಿ ರವಿಕುಮಾರ್ ಹೃದಯಾಘಾತದಿಂದ ನಿಧನ

Date:

Death News ಡೈಲಿ ನ್ಯೂಸ್ ಪತ್ರಿಕೆ ವರದಿಗಾರ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿತ ಪತ್ರಕರ್ತರ ಸಂಘದ ಹೊಳೆಹೊನ್ನೂರು ಘಟಕದ ಉಪಾಧ್ಯಕ್ಷರಾದ ತಟ್ಟೆಹಳ್ಳಿ ರವಿಕುಮಾರ್( 42) ಹೃದಯಾಘಾತದಿಂದ ಮಂಗಳವಾರ ನಿಧನರಾಗಿದ್ದಾರೆ.

ತನ್ನ ಅಪ್ಪನ ತಂಗಿಯ ಸಾವಿಗೆಂದು ಚನ್ನಗಿರಿಯ ತಾಲ್ಲೂಕಿನ ಸುಣ್ಣಿಗೆರೆಗೆ ಇಂದು ಬೆಳಗಿನ ಜಾವ ಹೋಗಿದ್ದರು. ಆ ಸಂದರ್ಭದಲ್ಲಿ ಎದೆಯ ನೋವು ಕಾಣಿಸಿಕೊಂಡಿದೆ. ಯಾರಿಗೂ ತಿಳಿಸದೇ ಓಮಿನಿಯಲ್ಲಿ ಲಾಕ್ ಮಾಡಿಕೊಂಡು ಕುಳಿತುಕೊಂಡಿದ್ದಾರೆ. ಬಹಳ ಸಮಯವಾದರೂ ಯಾರಿಗೂ ಕಾಣದೆ ಇದ್ದುದರಿಂದ ಓಮಿನಿಯಲ್ಲಿ ಇರಬಹುದು ಎಂದು ಜನರು ಹೋಗಿ ನೋಡಿದ್ದಾರೆ. ಹೊರಗಿನಿಂದ ಎಷ್ಟು ಕರೆದರೂ ಎಚ್ಚರವಾಗಿಲ್ಲ. ಅನುಮಾನ ಬಂದು ಗಾಡಿಯ ಗಾಜನ್ನು ಒಡೆದು ನೋಡಿದಾಗ ಪ್ರಜ್ಞೆ ಇರಲಿಲ್ಲ. ತಕ್ಷಣ ಚನ್ನಗಿರಿಯ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ವೈದ್ಯರ ಪರೀಕ್ಷೆಯ ನಂತರ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಮೃತರು ಪತ್ನಿ ಹಾಗೂ ಪುತ್ರಿ ಇದ್ದಾರೆ.

ತಟ್ಟೆಹಳ್ಳಿ ಗ್ರಾಮದಲ್ಲಿ ಮಂಗಳವಾರದಿಂದ ಮೂರು ದಿನಗಳ ಕಾಲ ಮಾರಿ ಜಾತ್ರಾ ಮಹೋತ್ಸವವಿತ್ತು. ಸುಮಾರು 12 ವರ್ಗಳಿಂದ ಗ್ರಾಮದಲ್ಲಿ ಜಾತ್ರೆ ನಡೆದಿರಲಿಲ್ಲ. ಆದ ಕಾರಣ ಬಹಳ ಅದ್ದೂರಿಯಾಗಿ ಹಬ್ಬ ಆಚರಿಸಲು ಎಲ್ಲಾ ಬಂಧು ಮಿತ್ರರಿಗೂ ಆಹ್ವಾನ ನೀಡಿದ್ದರು. ಹಬ್ಬದ ಸಲುವಾಗಿ ಮನೆಯಲ್ಲಿ ನೆಂಟರೆಲ್ಲಾ ಬಂದು ಸೇರಿದ್ದರು. ವಿಧಿಯಾಟ ಅತ್ತೆಯ ಸಾವಿಗೆಂದು ಹೋದ ಅಳಿಯ ಶವವಾಗಿ ಮನೆಗೆ ಬರುವಂತಾಯಿತು.

Death News ಗ್ರಾಮದಲ್ಲಿ ಜಾತ್ರೆ ಇರುವುದರಿಂದ ಊರಿನ ಹೊರಗಿರುವ ಅವರ ತೋಟಕ್ಕೆ ತೆದುಕೊಂಡು ಹೋಗಲಾಗಿತ್ತು. ಹಬ್ಬಕ್ಕೆಂದು ಬಂದಿದ್ದ ಜನರು ಎಲ್ಲರೂ ಸೇರಿ ಜಾಮಯಿಸಿದ್ದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಮೃತರ ತೋಟದಲ್ಲಿ ಸಂಜೆ ಅಂತ್ಯಸಂಸ್ಕಾರ ಮಾಡಲಾಯಿತು.
ಸಂತಾಪ: ಶಿವಮೊಗ್ಗ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಹೊಳೆಹೊನ್ನೂರು ಹೋಬಳಿ ಘಟಕ ಸಂತಾಪ ಸೂಚಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...