Shivamogga News ಮಾರ್ಚ್ 17 ರಂದು ಶಿವಮೊಗ್ಗದ ಯೂತ್ ಹಾಸ್ಟೆಲ್ಸ್ ನ ರಾಷ್ಟ್ರೀಯ ಸಮಿತಿಯ ಶಿವಮೊಗ್ಗದ ಅ.ನಾ.ವಿಜಯೇಂದ್ರ ದಂಪತಿಗಳು ಅತಂತ್ರ ಸ್ಥಿತಿ ಅನುಭವಿ ಸಿದ್ದಾರೆ.
ಪುತ್ರನ ಮದುವೆ ಸಂಬಂಧ ಜವುಳಿಸೀರೆ ಖರೀದಿಗೆಂದು ತಮಿಳ್ನಾಡಿಗೆ ವಿಜೇಂದ್ರ ದಂಪತಿಗಳು ಮಾರ್ಚ್ 16 ರಂದು ತೆರಳಿದ್ದರು.
17 ರಂದು ಬೆಳಿಗ್ಗೆ ವಾಪಸ್ ಬರುವಾಗ ಅವರ ಕಾರನ್ನ ಈರೋಡಿನಲ್ಲಿ ಚುನಾವಣಾ ತಪಾಸಣೆ ಗೇಟ್ ನಲ್ಲಿ
ಪೊಲೀಸ್ ತಡೆದಿದ್ದಾರೆ.
ಕಾರನ್ನು ತಪಾಸಣೆ ಮಾಡಿದಾಗ ಅವರ ಸಂಗೆಡ ಖರೀದಿ ಮಾಡಿದ್ದ ಸೀರೆಗಳು ಮತ್ತು ಕಿಸೆಯಲ್ಲಿ ಉಳಿದಿದ್ದ ನಗದನ್ನ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ವಿಜಯೇಂದ್ರ ದಂಪತಿಗಳನ್ನ ಪೊಲೀಸರು ಠಾಣೆಯಲ್ಲೇ ಕೊಳೆಹಾಕಿದ್ದಾರೆ.
ತಾವು ಮದುವೆ ಸಂಬಂಧ ಸೀರೆ ಖರೀದಿಸಿದ
ಬಗ್ಗೆ ಅಂಗಡಿಯ ರಶೀದಿ ತೋರಿಸಿದರೂ ಪೊಲೀಸ್ ಕೇಳಲಿಲ್ಲವಂತೆ.
ಇದೆಂಥಾ ನಡವಳಿಕೆ ಈರೋಡಿನ ಚುನಾವಣಾ ಸಿಬ್ಬಂದಿ ಯದ್ದು? ಎಂದು ಕೇಳುವಂತಾಗಿದೆ.
ಕನ್ನಡಿಗರ ಬಗ್ಗೆ ಏನಾದಾರೂ ದ್ವೇಷದಿಂದ ಈ ಕ್ರಮ ಕೈಗೊಂಡಿದ್ದಾರೆಯೆ? ಎಂಬ ಸಂದೇಹ ಬರುವಂತಿದೆ.
ವಿಜೇಂದ್ರರಾವ್ ಅವರ ಈ ಪ್ರಕರಣವನ್ನು ದಾಖಲಿಸಿದ ತಮಿಳುನಾಡಿನ ದೃಶ್ಯಮಾಧ್ಯಮಗಳು
ಇದನ್ನ ಒಂದು ರೀತುಯ ದೌರ್ಜನ್ಯ ಎಂದೇ ಹೇಳಿ ಅಲ್ಲಿನ ಪೊಲೀಸ್ ಇಲಾಖೆಯ ಕ್ರಮವನ್ನು ಟೀಕಿಸಿವೆ.
ವಿಜೇಂದ್ರರಾವ್ ಅವರನ್ನ ಶಿವಮೊಗ್ಹ ಕೆ ಲೈವ್ ಸಂಪರ್ಕಮಾಡಿತು.
ನೀರಿಗೆ,ಉಪಾಹಾರಕ್ಕೆ ಐದುನೂರು ಕಿಸೆಯಲ್ಲಿರಲಿ ಎಂದರೂ ಪೊಲೀಸ್ ಕೇಳಲಿಲ್ಲ ಎಂದು ವಿಜೇಂದ್ರ ತಮಗಾದ ಮಾನಸಿಕ ಆಘಾತದ ಬಗ್ಗೆ ನೊಂದು ನುಡಿದರು.
ಈಗಾಗಲೇ ಕರ್ನಾಟಕದ ಉನ್ನತ ಐಎಎಸ್ ಅಧಿಕಾರಿಗಳು ತಮಿಳುನಾಡು ಚುನಾವಣಾ ಅಧಿಕಾರಿಗಳನ್ನ ಸಂಪರ್ಕಿಸಿ ಈ ಪ್ರಕರಣಕ್ಕೆ ವಿರಾಮ ಹಾಕಿದ್ದಾರೆ
Shivamogga News ತಾ.18 ರಂದು ವಿಜೇಂದ್ರ ಅವರು ತಮ್ಮ ಖರೀದಿಸಿದ ಜವುಳಿ ಮತ್ತು ನಗದು ಹಣ, ಸಾಮಗ್ರಿಗಳೊಂದಿಗೆ
ಶಿವಮೊಗ್ಗಕ್ಕೆ ವಾಪಸಾಗುವ ನಿರೀಕ್ಷೆಯಿದೆ.