Election Commission ಚುನಾವಣಾ ಆಯೋಗ ಲೋಕಸಭಾ ಚುನಾವಣೆ 2024ಕ್ಕೆ ದಿನಾಂಕ ಘೋಷಣೆ ಮಾಡಿದ್ದು, ನೀತಿ ಸಂಹಿತೆಯನ್ನು ಮಾರ್ಚ್ 16ರಿಂದಲೇ ಜಾರಿಗೊಳಿಸಗೊಳಿಸಲಾಗಿದೆ.
ಏಪ್ರಿಲ್ 19 ರಿಂದ ದೇಶದ ಒಟ್ಟು 543 ಲೋಕಸಭಾ ಕ್ಷೇತ್ರಗಳಿಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಜೂನ್ 4 ಫಲಿತಾಂಶ ಪ್ರಕಟಗೊಳ್ಳಲಿದೆ.
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 14 ಕ್ಷೇತ್ರಗಳಲ್ಲಿ, ಅನಂತರದ 14 ಕ್ಷೇತ್ರಗಳಲ್ಲಿ ಎರಡನೇ ಹಂತದ ಚುನಾವಣೆ ನಡೆಯಲಿದೆ. ಕರ್ನಾಟಕದಲ್ಲಿ ಏಪ್ರಿಲ್ 26 ಹಾಗೂ ಮೇ 7ರಂದು ಮತದಾನ ನಡೆಯಲಿದೆ.
ಚುನಾವಣೆ ಮುಕ್ತಾಯಗೊಳ್ಳುವವರೆಗೂ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಪಾಲನೆ ಮಾಡಬೇಕಾದ ನಿಯಮಗಳನ್ನು ಚುನಾವಣಾ ಆಯೋಗ ಜಾರಿಗೊಳಿಸಿದೆ.
ಸರ್ಕಾರವೂ ಸಹ ಈ ನೀತಿ ಸಂಹಿತೆಯಡಿಯೇ ಕಾರ್ಯನಿರ್ವಹಿಸಬೇಕಾಗುತ್ತದೆ.
ಲೋಕ ಸಭಾ ಚುನಾವಣೆ ಘೋಷಣೆ ಮಾಡಿದ ಕ್ಷಣದಿಂದ ಚುನಾವಣೆಯ ಕಾವು ಹೆಚ್ಚಾಗಿದೆ. ರಾಜಕೀಯ ನಾಯಕರು ಟಿಕೆಟ್ ಪಡೆಯಲು ಪಕ್ಷದ ಬಾಗಿಲು ಕಾಯುತ್ತಿದ್ದರೆ, ಇತ್ತ ಚುನಾವಣಾ ಆಯೋಗದ ತಂಡ ನಾಯಕರ ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.
ದಿನಕಳೆದಂತೆ ಪ್ರತಿ ಕ್ಷೇತ್ರವೂ ಡಿಜಿಟಲ್ ಸ್ವರೂಪ ಪಡೆಯುತ್ತಿದೆ. ಇದಕ್ಕೆ ರಾಜಕೀಯ ಪಕ್ಷಗಳ ಕಾರ್ಯವೈಖರಿ, ಚುನಾವಣಾ ಪ್ರಚಾರ ಸಹ ಸಂಪೂರ್ಣ ಬದಲಾಗಿದೆ.
ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಹಾಗೂ ಅಭ್ಯರ್ಥಿಗಳ ಪ್ರಚಾರದ ರೂಪ ಬಹುತೇಕ ಡಿಜಿಟಲ್ ಸ್ಪರ್ಶ ಪಡೆದಿದೆ. ಯುವ ಸಮುದಾಯವನ್ನು ಸೆಳೆಯಲು ಈ ಮಾರ್ಗ ಅತ್ಯಂತ ಸುಲಭವಾಗಿದೆ. ಈ ಎಲ್ಲವನ್ನು ಗಮನಿಸಿದ ಚುನಾವಣಾ ಆಯೋಗ ಈ ಬಾರಿ ಸಾಮಾಜಿಕ ಜಾಲತಾಣಗಳ ಮೇಲೆ ವಿಶೇಷವಾಗಿ ತೀವ್ರ ನಿಗಾವಹಿಸಿದೆ.
ಸಾಮಾಜಿಕ ಜಾಲತಾಣದ ಬಳಕೆದಾರರೇ ಎಚ್ಚರ :
ಚುನಾವಣಾ ಆಯೋಗ ಸಾಮಾಜಿಕ ಜಾಲತಾಣದ ಬಳಕೆದಾರರಿಗೆ ಕೆಲವೊಂದು ರೂಲ್ಸ್ ಗಳನ್ನ ಜಾರಿಗೊಳಿಸಿದೆ.
ಫೇಸ್ಬುಕ್ ಪೇಜ್ ನಲ್ಲಿ ಅಕಸ್ಮಾತ್ ಚುನಾವಣಾ ಪ್ರಚಾರ ಮಾಡಿದ್ರೆ ಎಫ್ ಐ ಆರ್ ದಾಖಲಾಗುವುದು ಗ್ರಾರೆಂಟಿ.
ಟ್ವಿಟ್ಟರ್ (x) ಖಾತೆಯಲ್ಲಿ ಮನಬಂದಂತೆ ಟ್ವಿಟ್ ಮಾಡೋ ಹಾಗಿಲ್ಲ.
ಇನ್ಸ್ಟಾಗ್ರಾಮ್ ನಲ್ಲಿ ಅಭ್ಯರ್ಥಿಯ ಫೋಟೋ ಹಾಕುವ ಹಾಗಿಲ್ಲ.
ವಾಟ್ಸಪ್ ಗ್ರೂಪ್ ನಲ್ಲಿ ಚುನಾವಣಾ ಪ್ರಚಾರ ಮಾಡಿದರೆ ಅಡ್ಮಿನ್ ಗಳನ್ನು ಜೈಲಿಗೆ ಕಲಿಸಲಾಗುತ್ತದೆ.
Election Commission ವಾಟ್ಸಪ್ ಹಾಗೂ ಫೇಸ್ಬುಕ್ ಕಂಪನಿಗಳ ಮುಖ್ಯಸ್ಥರ ಜೊತೆಗೆ ಚರ್ಚೆ ಕೂಡ ಮಾಡಲಾಗಿದೆ. ಇದಿಷ್ಟು ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಚುನಾವಣಾ ಆಯೋಗ ತಂದಿರುವ ಅತಿ ಬಿಗಿಯಾದ ರೂಲ್ಸ್ ಆಗಿದೆ.