Saturday, May 23, 2026
Saturday, May 23, 2026

K. S. Eshwarappa ಈಶ್ವರಪ್ಪ ಜೊತೆಗಿನ ಮಾತುಕತೆ ವಿಫಲ: ಮಧ್ಯದಲ್ಲೇ ಎದ್ದುಹೋದ ಈಶ್ವರಪ್ಪ

Date:

K. S. Eshwarappa ಬಂಡೆದ್ದಿರುವ ಮಾಜಿ ಸಚಿವ ಈಶ್ವರಪ್ಪನವರ ಜೊತೆ ಸಂಧಾನ ಮಾತುಕೆಗೆ ಬಂದಿದ್ದ ಬಿಜೆಪಿಯ ಕೇಂದ್ರ ನಾಯಕರಿಗೆ ಹಿನ್ನಡೆಯಾಗಿದೆ.
ಸಭೆಯ ನಡುವೆ ಎದ್ದು ಹೋಗಿದ್ದಾರೆ. ಇದರಿಂದ
ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಧಾರಾಮ್ ಅಗರ್ ವಾಲ್ ಅವರೊಂದಿನ ಮಾತುಕತೆ ಮುರಿದು ಬಿದ್ದಿದೆ.ಮಧ್ಯಾಹ್ನ
12 ಕ್ಕೆ ರಾಧಾರಾಮ್ ಅಗರ್ ವಾಲ್ ಈಶ್ವರಪ್ಪನವರೊಂದಿಗೆ ಮಾತನಾಡಲು ಅವರ ಮನೆಗೆ ಬಂದಿದ್ದರು. ಅವರೊಂದಿಗೆ ಮಾತುಕತೆಗೆ ಕುಳಿತಿದ್ದ ಈಶ್ವರಪ್ಪ ಸಭೆಯ ನಡುವೆ ಕಾರ್ಯಕ್ರಮದ ಹಿನ್ನಲೆಯಲ್ಲಿ ಎದ್ದು ಹೋಗಿದ್ದರು. ತೆರಳಿ ಸುಮಾರು 1 ಗಂಟೆಯ ವರೆಗೆ ಈಶ್ವರಪ್ಪನವರಿಗೆ ಕಾಯ್ದ ಅಗರ್ವಾಲ್ ತಂಡ ಈಶ್ವರಪ್ಪನವರ ಮನೆಯಿಂದ ಹೊರನಡೆದರು.
ಇದರಿಂದ ಈಶ್ವರಪ್ಪ ಜೊತೆಗಿನ ಸಂಧಾನ ಮಾತುಕತೆ ಮುರಿದುಬಿದ್ದಿದೆ.
ಈ ಬಗ್ಗೆ ಮಾತನಾಡಿದ ಸಂಘನಾ ಕಾರ್ಯದರ್ಶಿ ಒಂದು ತಿಂಗಳು ಕರ್ನಾಟಕಲ್ಲಿಯೇ ಇರುವೆ. ಸ್ನೇಹ ಮಾತುಕತೆಗಾಗಿ ಬಂದಿರುವೆ. ಈಶ್ವರಪ್ಪ ಮನೆಯವರ ಜೊತೆ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾತನಾಡಿರುವೆ ಎಂದು ಮಾತ್ರ ತಿಳಿಸಿದ್ದಾರೆ. ವಿಫಲವಾಗಿರುವ ಬಗ್ಗೆ ಮಾಹಿತಿ ನೀಡಿಲ್ಲ. ಈಶ್ವರಪ್ಪನವರು ಸಭೆಯ ನಡುವೆ ಎದ್ದು ಹೋಗಿರುವುದು ಮತ್ತು ಕಾದರೂ ಈಶ್ವರಪ್ಪ ಬಾರದ ಹಿನ್ನಲೆಯಲ್ಲಿ ಸಂಧಾನದ ಮಾತುಕತೆ ಉರಿದು ಬಿದ್ದಿದೆ ಎಂದೇ ಬಣ್ಣಿಸಲಾಗುತ್ತಿದೆ.
ಜಿಲ್ಲಾ ಬಿಜೆಪಿ ಸಂಘನಾ ಕಾರ್ಯದರ್ಶಿ ನಟರಾಜ್, ಎಂಎಲ್ ಸಿ ಅರುಣ್, ರಾಧಾರಾಮ್ ಅಗರ್ವಾಲ್ ರಿಗೆ ಸಾಥ್ ನೀಡಿದ್ದರು. ಸಂಧಾನ K. S. Eshwarappa ಮಾತುಕತೆ ಮುರಿದು ಬಿದ್ದ ಹಿನ್ನಲೆಯಲ್ಲಿ ಈಶ್ವರಪ್ಪನವರ ಸ್ಪರ್ಧೆ ಗಟ್ಟಿಯಾಗುತ್ತಿದೆ. ಇದುಬಿಎಸ್ ವೈ ಕುಟುಂಬಕ್ಕೆ ತಲೆನೋವಾಗಿ ಪರಿಣಮಿಸುತ್ತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ತಾತ್ಕಾಲಿಕ ನೇರ ನೇಮಕಾತಿ ಮೂಲಕಖಾಯಂ ಶಿಕ್ಷಕರ ನೇಮಕಾತಿವರೆಗೆ ಅತಿಥಿ ಶಿಕ್ಷಕರ ನೇಮಕ

Shimoga News 2026-27ನೇ ಶೈಕ್ಷಣಿಕ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು...

Klive Special Article ನೇಪಾಳದಲ್ಲಿ ಶೃಂಗೇರಿ ಜಗದ್ಗುರುಗಳು.

ವಿಶೇಷ ವರದಿ: ಪ್ರಭಾಕರ ಕಾರಂತ Klive Special Article ಜಗದ್ಗುರು ಶ್ರೀ ವಿಧುಶೇಖರ ಭಾರತೀ...

Eshwara Khandre ಶ್ರಾವ್ಯಾ ಸಾಗರ್ ನಿರ್ಮಾಣದ ಸಾಕ್ಷ್ಯಚಿತ್ರಕ್ಕೆ ಜೀವವೈವಿಧ್ಯ ಪ್ರಶಸ್ತಿ.

Eshwara Khandre ಕರ್ನಾಟಕ ಸರ್ಕಾರದ ಜೀವವೈವಿದ್ಯ ಮಂಡಳಿ ಕೊಡಮಾಡುವ ೨೦೨೫-೨೬ನೇ ಸಾಲಿನ...