Siddaramaiah ಗೃಹಜ್ಯೋತಿ ಯೋಜನೆಯಡಿ ಈವರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 3,09,030 ಫಲಾನುಭವಿಗಳು ನೋಂದಣಿಯಾಗಿದ್ದು, ಆಗಸ್ಟ್-2023 ತಿಂಗಳಿಂದ ಫೆಬ್ರವರಿ-2024ರ ತಿಂಗಳ ಅಂತ್ಯದವರೆಗೆ ಒಟ್ಟು 7,559 ಲಕ್ಷಗಳ ವೆಚ್ಚವಾಗಿದೆ. ಈ ಪೈಕಿ ಚಿಂತಾಮಣಿ ತಾಲ್ಲೂಕಿನಲ್ಲಿ 55,675 ಫಲಾನುವಿಗಳು ನೋಂದಣಿಯಾಗಿದ್ದು, 1,526 ಲಕ್ಷಗಳ ರಿಯಾಯಿತಿ ನೀಡಲಾಗಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಅನ್ನಭಾಗ್ಯ ಯೋಜನೆಯಡಿ ಜುಲೈ 2023ರಿಂದ ಈವರೆಗೆ ಡಿ.ಬಿ.ಟಿ ಮುಖಾಂತರ 85.97 ಕೋಟಿ ನೇರ ನಗದು ವರ್ಗಾಯಿಸಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಶೇ. 93.05 ರಷ್ಟು ಪಡಿತರ ಕುಟುಂಬಗಳು ಈ ಯೋಜನೆಯ ಲಾಭ ಪಡೆಯುತ್ತಿವೆ. ಚಿಂತಾಮಣಿ ತಾಲ್ಲೂಕಿನಲ್ಲಿ 64,827 ಪಡಿತರ ಕುಟುಂಬಗಳ 2,20,681 ಫಲಾನುಭವಿಗಳಿಗೆ ಪಡಿತರ ಮತ್ತು ನೇರ ನಗದು ಹಣವನ್ನು ವರ್ಗಾಯಿಸಲಾಗಿದೆ.
ಮಹಿಳಾ ಸಬಲೀಕರಣಕ್ಕೆ ದಿಟ್ಟ ಹೆಜ್ಜೆಯಿಟ್ಟ ಸರ್ಕಾರ ಗೃಹಲಕ್ಷ್ಮಿ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈವರೆಗೆ 2,99,152 ಅರ್ಜಿದಾರರು ನೋಂದಣಿಯಾಗಿದ್ದು, ಈ ಪೈಕಿ 2,75,330 ಮಹಿಳಾ ಫಲಾನುಭವಿಗಳಿಗೆ ಈವರೆಗೆ 304.12 ಕೋಟಿ ರೂಪಾಯಿ ಹಣ ವರ್ಗಾವಣೆಯಾಗಿದೆ.
ಈ ಪೈಕಿ ಚಿಂತಾಮಣಿ ತಾಲ್ಲೂಕಿನಲ್ಲಿ 66,000 ಮಹಿಳೆಯರು ನೋಂದಣಿಯಾಗಿದ್ದು, 80 ಕೋಟಿ ಹಣ ಅವರ ಖಾತೆಗೆ ಜಮೆಯಾಗಿದೆ ಎಂದು ಹೇಳಿದ್ದಾರೆ.
Siddaramaiah ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 2,527 ನಿರುದ್ಯೋಗಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ 347 ಅರ್ಜಿದಾರರಿಗೆ ಪ್ರತಿ ಪ್ರತಿ ತಿಂಗಳು 3,000 ರೂಗಳಂತೆ ಯುವನಿಧಿ ಭತ್ಯೆಯನ್ನು ಪಾವತಿಸಲಾಗಿರುತ್ತದೆ. ಈವರೆಗೆ ಜನವರಿ ಮತ್ತು ಫೆಬ್ರವರಿ ಮಾಹೆಯ ಭತ್ಯೆಯ ಮೊತ್ತ ಒಟ್ಟು 11,85,000 ರೂಗಳನ್ನು 2024ರ ಫೆಬ್ರವರಿ ಅಂತ್ಯದವರೆಗೆ ಪಾವತಿಸಲಾಗಿದೆ. ಈ ಪೈಕಿ ಚಿಂತಾಮಣಿ ತಾಲ್ಲೂಕಿನಲ್ಲಿ 6.18 ಲಕ್ಷ ರೂ.ಗಳನ್ನು ಪಾವತಿಸಲಾಗಿದೆ.
ಪಂಚ ಗ್ಯಾರಂಟಿಗಳ ಮೂಲಕ ರಾಜ್ಯದ ಜನರ ಬದುಕನ್ನು ಆರ್ಥಿಕವಾಗಿ ಸುಭದ್ರಗೊಳಿಸುವ ಜೊತೆಗೆ ರಾಜ್ಯದ ಅಭಿವೃದ್ಧಿಯೂ ನಮ್ಮ ಸರ್ಕಾರದ ಆದ್ಯತೆ ಆಗಿದೆ ಎಂದು ತಿಳಿಸಿದ್ದಾರೆsi