Monday, November 25, 2024
Monday, November 25, 2024

Karnataka State Seed Corporation ರೈತರ ಹಿತವೇ ರಾಜ್ಯ ಸರ್ಕಾರದ ಮೊದಲ ಆದ್ಯತೆ- ಕೃಷಿ ಸಚಿವ ಎನ್.ಚಲುವರಾಯಸ್ವಾಮಿ

Date:

Karnataka State Seed Corporation ಹೆಬ್ಬಾಳದ ಪಶು ವೈದ್ಯಕೀಯ ಪರಿಷತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮದ 312 ನೇ ನಿರ್ದೇಶಕ ಮಂಡಳಿ ಸಭೆ ನಡೆಸಿ ಮಾತನಾಡಲಾಯಿತು.

ಕರ್ನಾಟಕ ರಾಜ್ಯ ಬೀಜ ನಿಗಮ ಮಂಡಳಿ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯಬೇಕಾಗಿದೆ. ನಿರ್ದೇಶಕರ ಚುನಾವಣೆಗೆ ಕೇಲವು ಕಾನೂನು ತೊಡಕುಗಳಿದ್ದು, ಅದನ್ನು ಪರಿಹರಿಸಿ ಶೀಘ್ರವಾಗಿ ಚುನಾವಣೆ ನಡೆಸುವಂತೆ ನಿರ್ದೆಶನ ನೀಡಲಾಯಿತು.

2022-23 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮವು ವಿವಿಧ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಮಾರಾಟದಿಂದ ಒಟ್ಟು ರೂ.494.50ಕೋಟಿಗಳ ವಹಿವಾಟು ಮಾಡಿ ರೂ.7.65 ಕೋಟಿಗಳ ತೆರಿಗೆ ನಂತರದ ಲಾಭ ಗಳಿಸಿರುತ್ತದೆ. ಇದು ಕಳೆದ 49 ವರ್ಷಗಳಲ್ಲಿ ನಿಗಮವು ವ್ಯಾಪಾರ ವಹಿವಾಟಿನಲ್ಲಿ ಗಳಿಸಿರುವ ಅತಿ ಹೆಚ್ಚಿನ ಲಾಭವಾಗಿರುತ್ತದೆ.

ಪ್ರಸಕ್ತ ಸಾಲಿನಲ್ಲಿ 2.73 ಲಕ್ಷ ಕ್ವಿಂಟಾಲ್ಗಳ ವಿವಿಧ ಬೆಳೆ / ತಳಿಗಳ ಬಿತ್ತನೆ ಬೀಜಗಳ ಮಾರಾಟದಿಂದ ರೂ.189.61 ಕೋಟಿಗಳಷ್ಟು ವಹಿವಾಟನ್ನು ಸಾಧಿಸಿರುತ್ತದೆ.

ಇದಲ್ಲದೆ, ಕಂಪನಿಯು ಪ್ರಸಕ್ತ ಸಾಲಿನಲ್ಲಿ 1.43 ಲಕ್ಷ ಮೆಟ್ರಿಕ್ ಟನ್ ಡಿ.ಎ.ಪಿ, ಯೂರಿಯಾ, ಕಾಂಪ್ಲೆಕ್ಸ್, ಎಂ.ಒ.ಪಿ., ಅಮೋನಿಯಂ, ಸಲ್ಫೇಟ್ ಮತ್ತು ಎಸ್.ಓ.ಪಿ ರಸಗೊಬ್ಬರಗಳನ್ನು ಕಾಪು ದಾಸ್ತಾನು ಯೋಜನೆಯಡಿ ಹಾಗೂ ತಂಬಾಕು ಮಂಡಳಿಗೆ ವಿತರಿಸಿ ರೂ.301.65 ಕೋಟಿಗಳ ವಹಿವಾಟು ಸಾಧಿಸಿದೆ. 2023-24ನೇ ಸಾಲಿನಲ್ಲಿ ರೂ.200 ಕೋಟಿಗಳ ವೆಚ್ಚದಲ್ಲಿ 2 ಲಕ್ಷ ಮೆಟ್ರಿಕ್ ಟನ್ ವಿವಿಧ ಶ್ರೇಣಿ ರಸಗೊಬ್ಬರಗಳ ವಹಿವಾಟನ್ನು ಮಾಡಲು ಯೋಜಿಸಲಾಗಿದೆ.

ಸಂಸ್ಥೆಯ ಎಲ್ಲಾ ವಹಿವಾಟು ಪಾರದರ್ಶಕವಾಗಿರಬೇಕು ಹಾಗೂ ಸಕಾಲದಲ್ಲಿ ಸದಸ್ಯರಿಗೆ ಮಾಹಿತಿ ನೀಡಬೇಕು. ಲೋಪದೋಷಗಳಾದರೇ ಅಧಿಕಾರಿಗಳೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದೆ.

ನಿಗಮದ ಚಟುವಟಿಕೆಗಳಲ್ಲಿ ಹಲವು ರಚನಾತ್ಮಕ ಬದಲಾವಣೆಗಳಿಗೆ ಸಲಹೆ ಸೂಚನೆ ನೀಡಿದೆ. ರೈತರಿಗೆ ಅನುಕೂಲವಾಗುವಂತೆ ಹಾಗೂ ಉತ್ಪಾದನೆ ಹೆಚ್ಚಳಕ್ಕೆ ಪೂರಕವಾಗಿ ಬಿತ್ತನೆ ಬೀಜ ಪೂರೈಸಲು ನಿರ್ದೇಶನ ನೀಡಲಾಯಿತು.

Karnataka State Seed Corporation ಸಭೆಯಲ್ಲಿ ಕರ್ನಾಟಕ ಬೀಜ ನಿಗಮದ ನಿರ್ದೇಶಕ ಮಂಡಳಿ ಸದಸ್ಯರಾದ ಕೃಷಿ‌ಇಲಾಖೆ ಕಾರ್ಯದರ್ಶಿ ಶ್ರೀ ಅನ್ಬುಕುಮಾರ್, ಆಯುಕ್ತರಾದ ಶ್ರೀ ವೈ.ಎಸ್ ಪಾಟೀಲ್, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಹೆಚ್.ಎಸ್ ದೇವರಾಜ್ ಮತ್ತಿತರರು ಹಾಜರಿದ್ದರು.‌

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

COSMO Club Shivamogga ಅಧ್ಯಯನಶೀಲ ತತ್ವದತ್ತ ಮುನ್ನಡೆದು ಸಮರ್ಥ ಸಮಾಜಕ್ಕೆ ದೀಪವಾಗೋಣ- ರಂಜಿನಿ ದತ್ತಾತ್ರಿ

COSMO Club Shivamogga ನಮ್ಮ ನಿಮ್ಮ ನಗುವಿಗೊಂದು ದೀಪ, ಸಂತಸದ ಬೆಳಕಿಗೊಂದು...

MESCOM ನವೆಂಬರ್ 27. ಎಂ.ಆರ್.ಎಸ್. ನಲ್ಲಿ ತ್ರೈಮಾಸಿಕ ನಿರ್ವಹಣೆ. ಶಿವಮೊಗ್ಗದ ಬಹುಪಾಲು ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ಎಂ.ಆರ್.ಎಸ್. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ...