Tourism Department ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ವತಿಯಿಂದ ಸಾಹಸಿಗ, ಚಾರಣಿಗ ಆ. ನಾ. ವಿಜಯೇಂದ್ರ ರಾವ್ ಆಯೋಜಿಸಲಾಗಿದ್ದ, ಆಂಡಮಾನ್ ಪ್ರವಾಸ ಮತ್ತು ಚಾರಣ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವಾಗಿ ಮಾರ್ಪಾಡಾಗಿ, ಪ್ರವಾಸಿಗರಿಗೆ ಚಾರಣದ ಅನುಭವದ ಜೊತೆ ಜೊತೆಯಲ್ಲಿಯೇ ಸಾಹಿತ್ಯದ ಅಭಿರುಚಿಯನ್ನು ಬೆಳೆಸುವಲ್ಲಿ ಸಹಕಾರಿಯಾಗಿತ್ತು.
ವಿಶೇಷವಾಗಿ ಆಂಡಮಾನ್‌ನಲ್ಲಿರುವ ಕನ್ನಡ ಸಂಘದ ಸದಸ್ಯರೊಂದಿಗೆ ಬೆರೆತ ಚಾರಣಿಗರು, ಕನ್ನಡ ಸಾಹಿತ್ಯ-ಸಾಂಸ್ಕೃತಿಕ ಪರಂಪರೆಯ ವಿನಿಮಯ ಮಾಡಿಕೊಂಡರು. ಆಂಡಮಾನ್‌ನ0ತ ದ್ವೀಪ ರಾಜ್ಯದಲ್ಲಿ ವಿವಿಧೆಡೆಗಳಲ್ಲಿ ಹಂಚಿಹೋಗಿರುವ ಕನ್ನಡಿಗರನ್ನು ಒಂದೆಡೆ ಸೇರಿಸಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಸ್ಥಳೀಯ ಕನ್ನಡ ಸಂಘದ ಕಾರ್ಯವನ್ನು ಚಾರಣಿಗರು ಪ್ರಶಂಸಿಸಿ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಗಮನ ಸೆಳೆದರು.
ಐದು ದಿನಗಳ ಈ ಚಾರಣ ಹಾಗೂ ಪ್ರವಾಸದಲ್ಲಿ ಆಂಡಮಾನ್‌ನ ರಾಜಧಾನಿ ಪೋರ್ಟ್ಬ್ಲೇರ್‌ನ ಪ್ರಸಿದ್ದ ಸೆಲ್ಯುಲಾರ್ ಜೈಲು, ಸಂಜೆ ವೇಳೆ ಜೈಲು ಆವರಣದಲ್ಲಿ ನಡೆದ ಪರಿಣಾಮಕಾಗಿ ಧ್ವನಿ ಬೆಳಕಿನ ವ್ಯವಸ್ಥೆ ನಿಜಕ್ಕೂ ಕೂಡಾ ರೋಮಾಂಚನವಾಗಿತ್ತು. ದೇಶದ ಸ್ವತಂತ್ರಕ್ಕಾಗಿ ಹೋರಾಟಗಾರರು ಅನುಭವಿಸಿದ ಯಾತನೆಗಳನ್ನು ಧ್ವನಿ ಬೆಳಕಿನ ಮೂಲಕ ಅನಾವರಣಗೊಳಿಸಿದ ರೀತಿ ತೀವ್ರತರವಾದ ಭಾವಾಭಿವ್ಯಕ್ತಿಗೆ ಕಾರಣವಾಗಿತ್ತು. ಏಷ್ಯಾದ ಅತಿ ದೊಡ್ಡ ಸಾಮಿಲ್ ಎಂದೇ ಹೆಸರಾದ ಚತ್ತಾಮ್‌ನ ಸರ್ಕಾರಿ ಸ್ವಾಮ್ಯದ ಸಾಮಿಲ್ ಭೇಟಿ ಕೂಡಾ ಅಚ್ಚರಿಗಳಲ್ಲಿ ಒಂದು. ಆಂಡಮಾನ್ ಹಾಗೂ ಅದರ ಸಮೂಹ ದ್ವೀಪಗಳಲ್ಲಿನ ಅಪಾರವಾದ ಅರಣ್ಯ ಸಂಪತ್ತಿದೆ. ಭಾರತಕ್ಕೆ ಪೂರೈಕೆಯಾಗುವ ಅರಣ್ಯ ಉತ್ಪನ್ನಗಳಲ್ಲಿ ಬಹುತೇಕ ಉತ್ಪನ್ನಗಳು ಈ ದ್ವೀಪ ಸಮೂಹದಿಂದಲೇ ಬರುತ್ತದೆ ಎಂಬುದು ಗಮನಾರ್ಹ.
ಹಾಗೆಯೇ ನಾರ್ತ್ ಬೇ ಐಲ್ಯಾಂಡ್‌ನಲ್ಲಿ ಚಾರಣಿಗರು, ಸ್ಕೂಬಾ ಡೈವ್, ಸ್ನಾರ್ಕಿಂಗ್ಸ್ ಹಾಗೂ ಸಮುದ್ರದಂಚಿನಲ್ಲಿ ಮರಳಿನಲ್ಲಿ ನಡೆಸಿದ ನಡಿಗೆ ಚಾರಣಗಳು ಹೊಸ ಅನುಭವವನ್ನು ಕಟ್ಟಿಕೊಟ್ಟಿದ್ದವು. ಹಾವ್‌ಲಾಕ್ ಐಲ್ಯಾಂಡ್ ಹಾಗೂ ಅತ್ಯಂತ ಪರಿಶುದ್ಧವಾದ ರಾಧಾ ನಗರ ಬೀಚ್ ಅಚ್ಚರಿಗಳಲ್ಲಿ ಒಂದು. ರಾಧಾ ನಗರ ಬೀಚ್‌ನಲ್ಲಿ ನಡೆದ ನೌಕಾ ಪಡೆಯ ತಾಲೀಮು ಅಪರೂಪದಲ್ಲೊಂದು ಅಪರೂಪದ ಘಟನೆ. ಜನ ಸಾಮಾನ್ಯರಿಗೆ ನೋಡಲು ಸಿಗದ ಈ ತಾಲೀಮು ಚಾರಣಿಗರಿಗೆ ಅನುಭವಿಸಲು ಸಿಕ್ಕಿದ್ದು ಒಂದು ಅವಿಸ್ಮರಣೀಯ ಘಟನೆ. ಈ ರಾಧಾನಗರ್ ಬೀಚ್‌ಗೆ ಹಡಗಿನಲ್ಲಿ ಪ್ರಯಾಣಿಸಬೇಕು. ಈ ಪ್ರಯಾಣ ಕೂಡಾ ಅವಿಸ್ಮರಣೀಯವಾಗಿತ್ತು. ಇದಕ್ಕೆ ಮುಖ್ಯವಾಗಿ ಶಿವಮೊಗ್ಗೆಯ ಈ ಚಾರಣಿಗರು, ಗುರುತು ಪರಿಚಯ ಇಲ್ಲದ ಎಲ್ಲ ಪ್ರಯಾಣಿಕರನ್ನು ಒಂದುಗೂಡಿಸಿ, ಪರಸ್ಪರ ಆತ್ಮೀಯವಾಗಿಸಿ, ಪ್ರಯಾಣದ ಅವಽಯ ಮೂರು ತಾಸುಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದ್ದು ಗಮನಾರ್ಹ.
ಆದಿವಾಸಿಗಳ ತಾಣವಾಗಿರುವ ಮಿಡ್ಲ್ ಸ್ಟೆಟ್‌ಗೆ ವಾಹನಗಳಲ್ಲಿ ಸಾಗಿ, -ರ‍್ರಿ ಮೂಲಕ ದಡ ಸೇರಬೇಕು. ಅಲ್ಲಿಂದ ೩೦ ನಿಮಿಷಗಳ ಕಾಲ ಸ್ಪೀಡ್ ಬೋಟ್ ಮೂಲಕ ಲೈಮ್ ಸ್ಟೋನ್ ಕೇವ್ ಹಾಗೂ ಮಡ್ ವಾಲ್ಕೆನೋ ವಿಕ್ಷಣೆಗೆ ಸಾಗಬೇಕು. ಈ ಮಡ್ ವಾಲ್ಕೆನೋ, ಲೈಮ್‌ಸ್ಟೋನ್ ಕೇವ್ ನಿಜಕ್ಕೂ ಕೂಡಾ ಒಂದು ಪ್ರಾಕೃತಿಕ ಅಚ್ಚರಿ. ನೈಸರ್ಗಿಕವಾಗಿ ನಿರ್ಮಿತವಾದ ಈ ಎರಡೂ ಪ್ರದೇಶಗಳು ನೋಡಲಷ್ಟೇ ಅಲ್ಲ, ಅಧ್ಯಯನದ ದೃಷ್ಟಿಯಿಂದಲೂ ಮಹತ್ವದ್ದು.
ಪ್ರತಿನಿತ್ಯ ರಾತ್ರಿ ಊಟವಾದ ನಂತರ ನಡೆದ ಚರ್ಚೆ ಸಂವಾದಗಳು ಸಹ ಅರ್ಥಪೂರ್ಣ ಅಷ್ಟೇ ಅಲ್ಲ, ವಿದ್ವತ್‌ಪೂರ್ಣವಾಗಿದ್ದು ವಿಶೇಷ. ಆಂಡಮಾನ್‌ನಲ್ಲಿರುವ ಆದಿವಾಸಿಗಳ ಕುರಿತಾದ ಮ್ಯೂಸಿಯಂ, ಫಿಷರೀಸ್ ಮ್ಯೂಸಿಯಂ ಸೇರಿದಂತೆ ವೈವಿಧ್ಯಮಯ ಮ್ಯೂಸಿಯಂಗಳು, ಛಿಡಿಯಾ ಟಾಪ್ ಬೀಚ್‌ನಲ್ಲಿನ ಸೂರ್ಯಾಸ್ಥಮಾನದ ರಮಣೀಯ ದೃಶ್ಯಗಳು ಕಣ್ಮನ ಸೆಳೆಯುತ್ತವೆ.
ಇದೆಲ್ಲದರ ನಡುವೆ, ಅಲ್ಲಿಯ ಜನರು ಮತ್ತು ಸ್ಥಳಿಯ ವಾಹನ ಚಾಲಕರ ಪ್ರಾಮಾಣಿಕತೆ, ರಸ್ತೆ ಸಂಚಾರ ನಿಯಮಗಳ ಪಾಲನೆಯೂ ಸಹ ಗಮನಾರ್ಹ ಸಂಗತಿಗಳೇ.
Tourism Department ಈ ಮೂಲಕ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಪ್ರವಾಸಿಗರು ಹಾಗೂ ಚಾರಣಿಗರಿಗೆ ಸಾಹಿತ್ಯ ಸಾಂಸ್ಕೃತಿಕ ಪರಂಪರೆಯ ಅರಿವು ಮೂಡಿಸಿದ್ದು ಪ್ರವಾಸವನ್ನು ಹೀಗೂ ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿತ್ತು. ಈ ವಿಶಿಷ್ಟ ಅನುಭವವನ್ನು ಅ. ನಾ. ವಿಜಯೇಂದ್ರರಾವ್ ಕಟ್ಟಿಕೊಟ್ಟಿದ್ದರು.
ಪ್ರವಾಸ ಮತ್ತು ಚಾರಣ ಮುಗಿಸಿ ಬಂದ ಮೇಲೂ ಕೂಡಾ ಚಾರಣಿಗರಿಗಾಗಿ ಒಂದು ವಿಶಿಷ್ಟವಾದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಪ್ರವಾಸ ಹಾಗೂ ಚಾರಣದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರ ಹೆಸರನ್ನು ಬಳಸಿಕೊಂಡು ಒಂದು ಕಥೆ ಅಥವಾ ಪ್ರವಾಸಾನುಭವವನ್ನು ರಚಿಸುವ ಸ್ಪರ್ಧೆ ಅದು. ಅದರಲ್ಲಿ ಕಮಲ ನೆಹರೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್. ಎಸ್. ನಾಗಭೂಷಣ್ ರವರು ತಂಡದಲ್ಲಿದ್ದ ೫೦ ಜನರ ಹೆಸರು ಸೇರಿಸಿ, ಉತ್ತಮ ಲೇಖನ ಬರೆದು ಕಳಿಸಿ, ಬೆಳ್ಳಿಯ ಪದಕವನ್ನು ಬಹುಮಾನವಾಗಿ ಪಡೆದುಕೊಂಡರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ವೇದಿಕೆಯ ಅಧ್ಯಕ್ಷ ಶಂಕರಪ್ಪ, ಕಾರ್ಯದರ್ಶಿ ಎನ್.ಗೋಪಿನಾಥ್, ಉಪಾಧ್ಯಕ್ಷ ಮಂಜುನಾಥ ಶರ್ಮ, ಖಜಾಂಚಿ ನಿರ್ಮಲ ಕಾಶೀ, ನಿರ್ದೆಶಕರಾದ ಪ್ರದೀಪ್ ಏಲಿ, ಡಾ. ಸುದೀಂದ್ರ ಮತ್ತು ಸಹ ಕಾರ್ಯದರ್ಶಿ ಅ.ನಾ.ವಿಜಯೇಂದ್ರ ರಾವ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಚಾರಣಿಗರು ತಮ್ಮ ಪ್ರವಾಸಾನುಭವವನ್ನು ಹಂಚಿಕೊ0ಡರು.
Tourism Department ಅಂಡಮಾನ್ ನಲ್ಲಿ ಐದು ದಿನಗಳ ಚಾರಣ& ಪ್ರವಾಸ ಅನನ್ಯ ಅನುಭವ- ಪತ್ರಕರ್ತ ವೈದ್ಯ
Date: