Monday, November 25, 2024
Monday, November 25, 2024

ವಾರಾಣಸಿ ಈಗ ವಿಶ್ವದ ಗಮನ ಸೆಳೆದಿದೆ.-ಪ್ರಧಾನಿ

Date:

ಕಾಶಿ ವಿಶ್ವನಾಥ ಧಾಮ ಕಾರಿಡಾರ್ ಅನ್ನು ಮಹಾದೇವನಿಗೆ ಅರ್ಪಿಸಿದ್ದೇವೆ. ವಾರಣಾಸಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳು ಸ್ಥಳೀಯವಾಗಿ ಮಾತ್ರವಲ್ಲ, ದೇಶ ಹಾಗೂ ಜಗತ್ತಿನ ಗಮನ ಸೆಳೆದಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ವಾರಣಾಸಿಗೆ ಭೇಟಿ ನೀಡಿದ ಅವರು, ಸದ್ಗುರು ಸದಾಫಲದೇವ ಅವರ ಮೂರ್ತಿಗೆ ಗೌರವ ಸಲ್ಲಿಸಿದರು. ಸದ್ಗುರು ಸದಾಫಲ ದೇವ ವಿಹಂಗಮ ಯೋಗ ಸಂಸ್ಥಾನದ 98 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.


ಕಾಶಿ ವಿಶ್ವನಾಥನ ಶಕ್ತಿ ಅಖಂಡ ವಾಗಿದೆ. ಇಲ್ಲಿನ ಅಭಿವೃದ್ಧಿಯು ದೇಶದ ಅಭಿವೃದ್ಧಿಯ ದಿಕ್ಸೂಚಿಯಾಗಿದೆ. ಇದು ದೇಶದ ಏಳಿಗೆಗೆ ನಾಂದಿ ಹಾಡಲಿದೆ. ವಾರಣಾಸಿಯಲ್ಲಿ ಕ್ಷಿಪ್ರವಾಗಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ 2014- 15 ನೇ ಸಾಲಿಗೆ ಹೋಲಿಸಿದರೆ 2019- 20 ನೇ ಸಾಲಿನಲ್ಲಿ ಯಾತ್ರಾರ್ಥಿಗಳ ಸಂಖ್ಯೆ ದ್ವಿಗುಣವಾಗಿದೆ ಎಂದರು.
ಸದ್ಗುರು ಸದಾಫಲದೇವ ಅವರ ಕೊಡುಗೆ ಸ್ಮರಿಸಿದ ಪ್ರಧಾನಿ, ಸದಾಫಲ ದೇವ ಮಹಾರಾಜ್ ಸೇರಿ ಹಲವು ಸಂತರು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಗಣನೀಯ ಕೊಡುಗೆ ನೀಡಿದ್ದಾರೆ. ಆದರೆ ದೇಶದಲ್ಲಿ ಇತಿಹಾಸದಲ್ಲಿ ಸಾಧು-ಸಂತರ ಕೊಡುಗೆ ಉಲ್ಲೇಖವಾಗಿಲ್ಲ. ಸದಾಫಲದೇವ ಮಹಾರಾಜ್ ಅವರು ಸ್ವಾತಂತ್ರ್ಯ ಹೋರಾಟದ ವೇಳೆ ಸ್ವದೇಶಿ ಚಳವಳಿಗೆ ನಾಂದಿ ಹಾಡಿದ್ದರು. ನಾವು ಇದೇ ಮಾರ್ಗದಲ್ಲಿ ಮುನ್ನಡೆದು ‘ಆತ್ಮ ನಿರ್ಭರ ಭಾರತ್’ ಅಭಿಮಾನ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ದೇಶದಲ್ಲಿ ಉತ್ತಮ ಆಡಳಿತಕ್ಕೆ (ಸು-ರಾಜ್) ಅವಶ್ಯಕತೆಯಿದ್ದಂತೆ ಸ್ವಾವಲಂಬನೆ (ಸ್ವರಾಜ್) ಸಹ ಅತ್ಯವಶ್ಯಕವಾಗಿದೆ. ಇನ್ನು ಮುಂದೆ ಸ್ವಚ್ಛತೆ ಹಾಗೂ ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವ ಸಂಕಲ್ಪವನ್ನು ಎಲ್ಲರೂ ಮಾಡಬೇಕಿದೆ. ಹಾಗಾದಾಗಲೇ ಉತ್ತಮ ಆಡಳಿತ, ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಲಿದೆ ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Constitution Day ನವೆಂಬರ್ 26.”ಸಂವಿಧಾನ ದಿನ” .ಫ್ರೀಡಂ ಪಾರ್ಕಿನಲ್ಲಿ ವಿಶೇಷ ಕಾರ್ಯಕ್ರಮ

Constitution Day ನ. 26 ರಂದು 'ಸಂವಿಧಾನ ದಿನಾಚರಣೆ' ಪ್ರಯುಕ್ತ ಭಾರತ...

Shivamogga police ವಿಷ ಸೇವಿಸಿ ಮೃತಪಟ್ಟ ಅಪರಿಚಿತ ವ್ಯಕ್ತಿ.ಪೊಲೀಸ್ ಪ್ರಕಟಣೆ

Shivamogga police ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರ್ಕಾರಿ ಬಸ್ ನಿಲ್ದಾಣದ...

B.Y. Raghavendra ಯೋಗದಲ್ಲಿ ಭಾರತೀಯರ ಸಾಧನೆ.ಎಲ್ಲರೂ ಅನುಸರಿಸುವಂಥದ್ದಾಗಿದೆ- ಸಂಸದ ರಾಘವೇಂದ್ರ

B.Y. Raghavendra ವಿಶ್ವಕ್ಕೆ ಯೋಗ ಮತ್ತು ಯೋಗದ ಮಹತ್ವವನ್ನು ಪರಿಚಯಿಸಿದ ದೇಶ...