Uttara Kannada ಹಲವು ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗೈದಿರುವ ಸಾಧನೆ ಮಾಡುತ್ತಿರುವವರೂ ಇದ್ದಾರೆ. ಈ ಮಧ್ಯೆ ಮಹಿಳೆಯೊಬ್ಬರು ಅಂಗನವಾಡಿ ಮಕ್ಕಳಿಗೋಸ್ಕರ ಬಾವಿ ತೋಡಿ ನೀರು ತರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗಣೇಶನಗರದಲ್ಲಿ ಅಂಗನವಾಡಿ ಮಕ್ಕಳಿಗೋಸ್ಕರ ಕಳೆದ ಜನವರಿ 30ನೇ ತಾರೀಕಿನಿಂದ ಗೌರಿ ನಾಯ್ಕ ಅವರು ಅಂಗನವಾಡಿಯ ಹಿಂಭಾಗದ ಜಾಗದಲ್ಲಿ ಯಾರ ಸಹಾಯವನ್ನೂ ಪಡೆಯದೇ ಬಾವಿ ತೋಡಿದ್ದಾರೆ. ಇವರ ಏಕಾಂಗಿ ಪ್ರಯತ್ನದಿಂದ ಇದೀಗ 45 ಅಡಿಯಲ್ಲಿ ನೀರು ಕಂಡು ಗೌರಿ ನಾಯಕ್ ಭಾವುಕರಾಗಿದ್ದಾರೆ.
ಹೌದು, ಬೇಸಿಗೆಯ ಹಿನ್ನೆಲೆಯಲ್ಲಿ ಗೌರಿ ನಾಯಕ್ ಕಳೆದ ಜನವರಿ 30ರಂದು ಅಂಗನವಾಡಿ ಮಕ್ಕಳಿಗೋಸ್ಕರ ಬಾವಿ ತೋಡಲು ಆರಂಭಿಸಿದ್ದರು. ಇದೀಗ ಏಕಾಂಗಿಯಾಗಿ ಭಾವಿತೋಡಿ ಕೊನೆಗೂ ನೀರು ತರಿಸಿದ ಗೌರಿ ನಾಯಕ್ 45 ಅಡಿ ಆಳದಲ್ಲಿ ನೀರು ಕಂಡು ಬಾವುಕರಾಗಿದ್ದಾರೆ. ಗಣೇಶನಗರದಲ್ಲಿ ಅಂಗನವಾಡಿ ಮಕ್ಕಳಿಗಾಗಿ ಗೌರಿ ಬಾವಿ ತೋಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗಣೇಶನಗರದಲ್ಲಿ ಅಂಗನವಾಡಿ ಮಕ್ಕಳಿಗೆ ಎಂದು ಗೌರಿ ಬಾವಿ ತೋಡಿದ್ದಾರೆ.
Uttara Kannada ಗೌರಿ ನಾಯಕ್ ಮಕ್ಕಳಿಗಾಗಿ ಬಾವಿ ತೋಡುತ್ತಿದ್ದರು. ಆದರೆ ಪರವಾನಿಗೆ ಪತ್ರ ಇಲ್ಲವೆಂದು ಅಧಿಕಾರಿಗಳು ಗೌರಿ ಅವರಿಗೆ ಬಾವಿ ತೋಡಲು ಅಡ್ಡಿಪಡಿಸಿದ್ದರು. ಅನುಮತಿ ಪತ್ರ ಇಲ್ಲವೆಂದು ಅಧಿಕಾರಿಗಳು ಹಲಗೆ ಹಾಕಿ ಬಾವಿಯನ್ನು ಮುಚ್ಚಿದ್ದರು. ಬಳಿಕ ಉತ್ತರ ಕನ್ನಡ ಜಿಲ್ಲಾಧಿಕಾರಿ ಬಾವಿ ತೊಡಲು ಗೌರಿಗೆ ಅನುಮತಿ ನೀಡಿದ್ದರು. ಅದರ ಪ್ರತಿಫಲವಾಗಿ ಇಂದು 45 ಅಡಿ ಆಳದಲ್ಲಿ ನೀರು ಬಂದಿದ್ದು ಇದನ್ನು ಕಂಡು ಗೌರಿ ಭಾವುಕರಾಗಿದ್ದಾರೆ.