Gopal Krishna Belur ಸ್ವಾತಂತ್ರ್ಯ ಬಂದು 75 ವರ್ಷವಾದರೂ ಉರುಳುಗಲ್ಲಿನಂತಹ ಗ್ರಾಮಕ್ಕೆ ವಿದ್ಯುತ್ ಕೊಡದಿರುವುದು ಪ್ರಜಾಪ್ರಭುತ್ವದ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಬೇಸರ ವ್ಯಕ್ತಪಡಿಸಿದರು.
ಸಾಗರ ತಾಲ್ಲೂಕಿನ ಬಿಳಿಗಾರಿನ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕಂದಾಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿ ಸಿ ಅವರು ಮಾತನಾಡುತ್ತಿದ್ದರು.
ಉರುಳುಗಲ್ಲು ಸೇರಿದಂತೆ ಅಕ್ಕಪಕ್ಕದ ಕೆಲವು ಗ್ರಾಮಗಳಿಗೆ ಈತನಕ ವಿದ್ಯುತ್ ಸೌಲಭ್ಯ ಸಿಕ್ಕಿಲ್ಲ. ಜನರು ಕತ್ತಲಿನಲ್ಲಿ ಬದುಕುತ್ತಿದ್ದಾರೆ. ಯಶಸ್ವಿ ಪ್ರಜಾಪ್ರಭುತ್ವದ ಲಕ್ಷಣ ಇದಲ್ಲ. ಒಂದೊಮ್ಮೆ ಮೇಲ್ಭಾಗ ದಿಂದ ತಂತಿ ಎಳೆದು ವಿದ್ಯುತ್ ಕೊಡಲು ಸಾಧ್ಯವಾಗದೆ ಹೋದಲ್ಲಿ ನೆಲದೊಳಗಿ ನಿಂದ ತಂತಿ ಎಳೆದು ವಿದ್ಯುತ್ ಕೊಡಿ ಎಂದು ಸ್ವತಃ ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. ಅಧಿಕಾರಿಗಳೇಕೆ ಮೀನಾಮೇಷ
ಎಣಿಸುತ್ತಿದ್ದೀರಿ. ಎಷ್ಟು ಹಣ ಖರ್ಚು ಆಗುತ್ತದೆ ಎಂದು ಯೋ ಚನೆ ಮಾಡಬೇಡಿ. ಜನರಿಗೆ ವಿದ್ಯುತ್ ಕೊಡಿ ಎಂದು ಆದೇಶ ಮಾಡಿದರು.
ಅರಣ್ಯ ಇಲಾಖೆ ಅಧಿಕಾರಿಗಳು ಜನರಿಗೆ ತೊಂದರೆ ಕೊಡಬೇಡಿ. ಮಕ್ಕಳಂತೆ ಬೆಳೆಸಿದ ಅಡಿಕೆ ಗಿಡ ಕಡಿದು ಜನರನ್ನು ಒಕ್ಕಲೆಬ್ಬಿಸುವ ಭೀತಿ ಹುಟ್ಟಿಸಬೇಡಿ. ಮೊದಲು ಸರ್ವೇ ಮಾಡಿ. ಯಾವುದೇ ಕಾರಣಕ್ಕೂ ಹೊಸ ಒತ್ತುವರಿ ಮಾಡಬೇಡಿ ಎಂದು ಜನರಿಗೆ ಹೇಳಿದ್ದೇನೆ. ಇಲಾಖೆಯ ಕೆಲವು ಗಾರ್ಡ್‌ಗಳು ತಾವೇ ಮಹಾರಾ ಜರು ಎನ್ನುವಂತೆ ವರ್ತನೆ ಮಾಡುತ್ತಿದ್ದಾರೆ. ಅಂತಹವರನ್ನು ಮೊದಲು ಅಮಾನತ್ತು ಮಾಡಿ ಎಂದು ಹೇಳಿದರು.
Gopal Krishna Belur ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಕೆಲವು ದಿನವಾಗಿದ್ದು ಜನರ ಸಮಸ್ಯೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಹೆಚ್ಚಾಗಿ ಗ್ರಾಮೀಣ ಭಾಗದ ಜನರ ನೋವುಗಳಿಗೆ ಸ್ಪಂದಿಸುವ ಉದ್ದೇಶ ನಮ್ಮದಾಗಿದೆ. ಜನಸಂಪರ್ಕ ಸಭೆ ಮೂಲಕ ಗ್ರಾಮ ಪಂಚಾಯ್ತಿಗಳಿಗೆ ಹೋದರೆ ಸ್ಥಳೀಯ ಸಮಸ್ಯೆಯನ್ನು ಅರಿತು ಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದರು.
ಉಪವಿಭಾಗಾಧಿಕಾರಿ ಯತೀಶ್ ಆರ್., ತಹಶೀಲ್ದಾರ್ ಕಲಿಮುಲ್ಲಾಖಾನ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾ ಹಣಾಧಿಕಾರಿ ನಾಗೇಶ್ ಇದ್ದರು.
