ರಾಜ್ಯ ಸರ್ಕಾರದ ಕಾಯಂ ನೌಕರರಿಗೆ ಪ್ರತಿ ಆರ್ಥಿಕ ವರ್ಷದಲ್ಲಿ ಒಂದು ಬಾರಿ ಬಡ್ಡಿರಹಿತವಾಗಿ ನೀಡುವ ಹಬ್ಬದ ಮುಂಗಡವನ್ನು 25000 ಕ್ಕೆ ಹೆಚ್ಚಿಸಿ ಎಂದು ಹಣಕಾಸು ಇಲಾಖೆ ಆದೇಶವನ್ನು ನೀಡಿದೆ.
ಅಖಿಲ ಭಾರತ ಸೇವೆಯ ಅಧಿಕಾರಿಗಳು ಸೇರಿದಂತೆ ರಾಜ್ಯ ಸರ್ಕಾರದ ಎಲ್ಲಾ ಕಾಯಂ ನೌಕರರಿಗೆ ಸೌಲಭ್ಯ ಒಳಗೊಂಡಿದೆ. ಇದುವರೆಗೂ ವರ್ಷಕ್ಕೆ ಒಂದು ಬಾರಿ 10000 ಹಬ್ಬದ ಮುಂಗಡ ನೀಡಲಾಗುತ್ತಿತ್ತು. ಆದರೆ ಈ ಮಿತಿಯನ್ನು 25000 ಕ್ಕೆ ಹೆಚ್ಚಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿಯನ್ನು ನೀಡಿದೆ. ಅದನ್ನು ಪುರಸ್ಕರಿಸಿರುವ ಆರ್ಥಿಕ ಇಲಾಖೆ, ಹಬ್ಬದ ಮುಂಗಡ ಮಿತಿಯನ್ನು ಹೆಚ್ಚಿಸಿದೆ.
ರಾಜ್ಯ ಸರ್ಕಾರದಲ್ಲಿ ಒಟ್ಟು 5.25 ಲಕ್ಷ ಕಾಯಂ ನೌಕರರಿದ್ದಾರೆ. ಮಿತಿಯನ್ನು ಹೆಚ್ಚಿಸಿರುವ ಆದೇಶದಿಂದ ಸಿ ಹಾಗೂ ಡಿ ದರ್ಜೆ ನೌಕರರಿಗೆ ಹೆಚ್ಚು ಸಹಾಯಕವಾಗಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಕ್ಷರಿ ಅವರು ತಿಳಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.