Shivamogga Child Protection Directorate ಶಿವಮೊಗ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಳಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಮಾ.11 ರಂದು ಬೆಳಗ್ಗೆ 10.00ಕ್ಕೆ ನಗರದ ಪೋಲಿಸ್ ಇಲಾಖೆ ಆವರಣ ಡಿಎಆರ್ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯರು ಮತ್ತು ಓಬಿಜಿ ವಿಭಾಗದ ನರ್ಸ್, ಆಸ್ಪತ್ರೆ ಸಿಬ್ಬಂದಿಗಳಿಗೆ ಜಿಲ್ಲಾ ಮಟ್ಟದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ “ಬಾಲನ್ಯಾಯ ಕಾಯ್ದೆ -2015 ತಿದ್ದುಪಡಿ -2021, ಬಾಲ್ಯ ವಿವಾಹ ನಿಷೇಧ ಕಾಯ್ದೆ -2006, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ-2012, ದತ್ತು ಮಾರ್ಗಸೂಚಿ -2022 ಬಾಲ ಕಾರ್ಮಿಕತೆ, ಬಾಲ ಭಿಕ್ಷಾಟನೆ, ಸಿಗರೇಟ್ ಮತ್ತು ಇನ್ನಿತರ ಮಾದಕ ವ್ಯಸನ ಮತ್ತು ಮಧ್ಯಪಾನ ನಿಷೇಧ, 18 ವರ್ಷದೊಳಗಿನ ಬಾಲಗರ್ಭಿಣಿಯರಿಗೆ ನಿರ್ದೇಶನಾಲಯದಲ್ಲಿ ಇರುವ ಸೌಲಭ್ಯಗಳು, ಮಕ್ಕಳ ಸಹಾಯವಾಣಿ -1098 /122, ಮಮತೆಯ ತೊಟ್ಟಿಲು ಹಾಗೂ ಮಗು ಮಾರಟ ಮತ್ತು ಸಾಗಣೆಯ ವಿರುದ್ಧ ಜಿಲ್ಲೆಯಲ್ಲಿ ಮಕ್ಕಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾಲುದಾರ ಇಲಾಖೆಗಳ ಕುರಿತು ಮಾಹಿತಿ ನೀಡಲಾಗುವುದು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಗಳು ಜಿಲ್ಲಾ ಎಸ್.ಜೆ.ಪಿಯು ಘಟಕದ ನೋಡೆಲ್ ಅಧಿಕಾರಿಗಳು ಜಿಲ್ಲಾ ಪೋಲಿಸ್ ಇಲಾಖೆ ಇವರು ನಡೆಸಲಿದ್ದು ಅಧ್ಯಕ್ಷತೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೃಷ್ಣಪ್ಪ ಬಿ.ಕೆ ವಹಿಸಿಕೊಳ್ಳಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ, ಮಂಜುನಾಥ ಆರ್., ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ರೇಖಾ ಜಿ.ಎಂ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ, ಸಿಮ್ಸ್ ಭೋಧನಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಾದ ಡಾ. ಟಿ.ಡಿ ತಿಮ್ಮಪ್ಪ, ಡಾ. ಸಿದ್ದನಗೌಡ, ಪೋಲಿಸ್ ಉಪಧೀಕ್ಷಕರಾದ ಬಾಬು ಅಂಜನಪ್ಪ ಇವರುಗಳೂ ಭಾಗವಹಿಸುತ್ತಾರೆ.
ಸಂಪನ್ಮೂಲ ವ್ಯಕ್ತಿಗಳಾಗಿ ಪೋಲಿಸ್ ಇಲಾಖೆಯ ಸೋಮಶೇಖರ್ ಜಿ.ಎಸ್ ಮತ್ತು ಗಾಯಿತ್ರಿ ಡಿ.ಎಸ್ ಭಾಗವಹಿಸಲಿದ್ದಾರೆ.