GH Srinivasa ರಾಜ್ಯ ಸರ್ಕಾರ ವಕ್ಪ್ ಸಂಸ್ಥೆಗಳ ಕಾಂಪೌoಡ್ ನಿರ್ಮಾಣ, ದುರಸ್ಥಿ, ಜೀ ರ್ಣೋದ್ದಾರ, ನವೀಕರಣ ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಜಿಲ್ಲೆಯಾದ್ಯಂತ ಒಟ್ಟಾರೆ 6 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ತರೀಕೆರೆ ಶಾಸಕ ಜಿ.ಹೆಚ್.ಶ್ರೀನಿವಾಸ್ ತಿಳಿಸಿದರು.
ಅಜ್ಜಂಪುರ ಪಟ್ಟಣದ ಜಾಮೀಯಾ ಮಸೀದಿಯಲ್ಲಿ ತಾಲ್ಲೂಕು ಮುಸ್ಲೀಂ ಸಮಾಜ ವತಿಯಿಂದ ಏರ್ಪಡಿಸಿದ್ದ ಅಭಿನಂ ದನಾ ಕಾರ್ಯಕ್ರಮದಲ್ಲಿ ಸೋಮವಾರ ಪಾಲ್ಗೊಂಡು ಅವರು ಮಾತನಾಡಿದರು.
ಜಿಲ್ಲೆಗೆ ಒಟ್ಟು 6 ಕೋಟಿ ವಕ್ಫ್ ಅನುದಾನ ಮಂಜೂರಾಗಿದ್ದು ಅವುಗಳಲ್ಲಿ ತರೀಕೆರೆ ಒಂದೇ ಕ್ಷೇತ್ರಕ್ಕೆ ಬರೋ ಬ್ಬರಿ 3 ಕೋಟಿ ರೂ. ಅನುದಾನ ಒದಗಿಸಿದೆ. ಈ ಅನುದಾನದಲ್ಲಿ ವಕ್ಫ್ ಸಂಸ್ಥೆಗಳು ಹಾಗೂ ಮುಸ್ಲಿಂ ಸಮುದಾ ಯದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಇನ್ನೂ ಹೆಚ್ಚಿನ ಅನುದಾನ ಅವಶ್ಯವಿದ್ದಲ್ಲಿ ಒದಗಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಮೊಹಮ್ಮದ್ ಶಾಹೀದ್ ರಜ್ವಿ ಮಾತನಾಡಿ ಮುಸ್ಲೀಂ ಸಮುದಾಯದ ವಕ್ಫ್ ಸಮಿತಿಗೆ ಅನುದಾನ ಒದಗಿಸಿರುವುದು ಶ್ಲಾಘನೀಯ. ಈ ಅನುದಾನದಿಂದ ಮುಂಬರುವ ದಿನಗಳಲ್ಲಿ ಸಂಸ್ಥೆಗೆ ಅನುಕೂಲವಾಗುವ ಎಲ್ಲಾ ಸವಲತ್ತುಗಳನ್ನು ಒದಗಿಸಲಾಗುವುದು ಎಂದರು.
ಇದೇ ವೇಳೆ ಶಾಸಕ ಜಿ.ಹೆಚ್.ಶ್ರೀನಿವಾಸ್ ಅವರಿಗೆ ಮುಸ್ಲೀಂ ಸಮುದಾಯದಿಂದ ಅಭಿನಂದನೆ ಸಲ್ಲಿಸಲಾಯಿತು.
GH Srinivasa ಈ ಸಂದರ್ಭದಲ್ಲಿ ಜಾಮೀಯಾ ಮಸೀದಿ ಅಧ್ಯಕ್ಷ ಮಸೂದ್ ಅಹ್ಮದ್, ಕೆಪಿಸಿಸಿ ಸದಸ್ಯ ರಿಜ್ವಾನ್, ಅಲ್ತಾ ಫ್, ಪಾಷ, ಜಿ.ನಟರಾಜ್, ಮುಸ್ತಾಕ್ ಅಹಮ್ಮದ್ ಮತ್ತಿತರರಿದ್ದರು.