Kempegowda International Airport Bengaluru ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಇಬ್ಬರು ಪ್ರಯಾಣಿಕರಿಂದ 2.63 ಕೋಟಿ ರೂಪಾಯಿ ಮೌಲ್ಯದ 4.249 ಗ್ರಾಂ ಚಿನ್ನವನ್ನು ಬೆಂಗಳೂರಿನ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಫೆಬ್ರವರಿಯಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ವಶಪಡಿಸಿಕೊಂಡ ನಾಲ್ಕನೇ ಪ್ರಕರಣ ಇದಾಗಿದೆ.
ಇಲ್ಲಿಯವರೆಗೆ, ಕೇಂದ್ರ ಸಂಸ್ಥೆ ಎಲ್ಲಾ ನಾಲ್ಕು ಕಾರ್ಯಾಚರಣೆಗಳಲ್ಲಿ 12.44 ಕೋಟಿ ಮೌಲ್ಯದ ಸುಮಾರು 20 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
Kempegowda International Airport Bengaluru ಫೆಬ್ರವರಿ 28 ರಂದು ಡಿಆರ್‌ಐ ಅಧಿಕಾರಿಗಳು ಸಿಂಗಾಪುರದಿಂದ ಏರ್ ಇಂಡಿಯಾ ವಿಮಾನದ ಮೂಲಕ ಬೆಂಗಳೂರಿಗೆ ಬಂದ ಥಾಯ್ ಪ್ರಜೆಯನ್ನು ತಡೆದಿದ್ದು, ತಪಾಸಣೆ ವೇಳೆ ಕಚ್ಚಾ ಆಭರಣಗಳ ರೂಪದಲ್ಲಿದ್ದ 2,751 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.