Toll Gate ಟೋಲ್ ಸಂಗ್ರಹಣೆ ವಿಚಾರವಾಗಿ ಬಿಜೆಪಿ ತನ್ನ ತಪ್ಪುಗಳನ್ನು ಜನತೆ ಎದುರು ಮರೆಮಾಚಿಸಲು ಸುಳ್ಳು ಹೇಳುವುದರ ಮುಖೇನ ಬೇರೆಯವರ ಕಡೆ ಬೆರಳು ಮಾಡುತ್ತಿದೆ ಎಂದು ಕಾಂಗ್ರಸ್ ಪಕ್ಷದ ಜಿಲ್ಲಾ ಉಪಾದ್ಯಕ್ಷ ಭಂಡಾರಿ ಮಾಲತೇಶ ಹೇಳಿದರು.
ದಾಖಲೆ ಬಿಡುಗಡೆ ಮಾಡುವುದರೊಂದಿಗೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರವಿದ್ದ 6-07-2022 ರಲ್ಲಿ ಶಿವಮೊಗ್ಗ – ಶಿಕಾರಿಪುರ – ಹಾನಗಲ್ ರಸ್ತೆಯಲ್ಲಿ ಟೋಲ್ ಸಂಗ್ರಹಣೆ ಮಾಡಲು ಕೆ ಆರ್ ಡಿ ಸಿ ಎಲ್/ ಐ ಎಸ್ ಬಿ/2022-23/09 ಅಡಿ ಟೆಂಡರ್ ಆಹ್ವಾನಿಸಿ, ವಿನಯ್ ಲಾಡ್ ಎಂಟರ್ಪೈಸ್ ಎಂಬುವವರಿಗೆ ಇದನ್ನು ವಹಿಸಿಕೊಟ್ಟಿತ್ತು. . ಆಗ ಬಸವರಾಜ್ ಬೊಮ್ಮಾಯಿ ಮುಖ್ಮಮಂತ್ರಿಯಾಗಿದ್ದರು. ಲೋಕೋಪಯೋಗಿ ಖಾತೆಯನ್ನು ಸಿ ಸಿ ಪಾಟೀಲ್ ರವರು ನಿಭಾಯಿಸುತ್ತಿದ್ದರು. ಬಿ ಎಸ್ ಯಡಿಯೂರಪ್ಪರವರು ತಾಲ್ಲೂಕಿನ ಶಾಸಕರಾಗಿದ್ದರು ಎಂದರು.
ಈ ವಿಷಯಕ್ಕೆ ಸಂಭಂದಿಸಿದಂತೆ ಸಂಸದ ಬಿ ವೈ ರಾಘವೇಂದ್ರ ಕೆಲವು ತಿಂಗಳ ಹಿಂದೆ ಕಣವಿಮನೆ ಸಮೀಪದ ಟೋಲ್ ಗೇಟ್ ಬಳಿ ಪ್ರತಿಭಟನೆ ಹಾಗೂ ಪತ್ರಿಕಾಗೋಷ್ಠಿಯನ್ನು ನಡೆಸಿದ್ದರು.
Toll Gate ಈ ರೀತಿ ಇವರದ್ದೇ ಸರ್ಕಾರವಿದ್ದಾಗ ಟೋಲ್ ಸಂಗ್ರಹಣೆ ಮಾಡಲು ಅನುಮತಿ ನೀಡಿ ಅದನ್ನು ಸಿದ್ಧರಾಮಯ್ಯ ಸರ್ಕಾರವು ಈ ಟೋಲ್ ಸಂಗ್ರಹಣೆ ಮಾಡುತ್ತಿದೆ ಎಂದು ತಾಲೂಕಿನ ಟೋಲ್ ಸಂಗ್ರಹಣೆ ವಿಚಾರವಾಗಿ ಬಿಜೆಪಿ ತಮ್ಮ ತಪ್ಪುಗಳನ್ನು ಜನತೆ ಎದುರು ಕಾಂಗ್ರೆಸ್ ನದ್ದೆಂಬಂತೆ ಬಿಂಬಿಸಿದೆ ಎಂದರು.
ತಮ್ಮ ಸರ್ಕಾರದ ಅವಧಿಯಲ್ಲಿ ಟೋಲ್ ಸಂಗ್ರಹಣೆಗೆ ಟೆಂಡರ್ ಏಕೆ ಮಾಡಬೇಕಿತ್ತು? ಮತ್ತು ಇದರ ಬಗ್ಗೆ ಪ್ರತಿಭಟನೆಯನ್ನು ನಡೆಸಿದ ಸಂಸದರು ಏಕೆ ವಜಾಪಡಿಸಲು ಅಂದಿನ ಮುಖ್ಯಮಂತ್ರಿ ಗಳಿಗೆ ಏಕೆ ಒತ್ತಡ ಹೇರಲಿಲ್ಲ? ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಸಮಯದಲ್ಲಿ, ಸಿದ್ಧರಾಮಯ್ಯ ವಿರುದ್ಧ ಆರೋಪ ಮಾಡುತ್ತಿದ್ದಾರೆಂದರು.