Narayana Health: ಶಿವಮೊಗ್ಗದ ನಾರಾಯಣ ಹೆಲ್ತ್ ಕೇರ್ ಆಸ್ಪತ್ರೆಯ ವತಿಯಿಂದ ವಿಶ್ವ ಶ್ರವಣ ದಿನಾಚರಣೆಯ ಅಂಗವಾಗಿ ಮಾರ್ಚ್ 4 ರಿಂದ 30 ರ ವರೆಗೆ ಕಿವಿಯ ಸಂಪೂರ್ಣ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಸುದ್ದಿ ಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಆಸ್ಪತ್ರೆಯ ಇ ಎನ್ ಟಿ ತಜ್ಞೆ ಡಾ. ಸ್ಮಿತಾ, ಕಿವಿ ಸೋರುವಿಕೆ, ಕಿವಿಯಲ್ಲಿ ನೋವು, ಕಿವಿಯಲ್ಲಿ ಶಬ್ದ, ಕಡಿಮೆ ಕೇಳುವುದು, ತಲೆ ತಿರುಗುವುದು ಇತ್ಯಾದಿ ಕಿವಿ ಸಂಬಂಧಿತ ಸಮಸ್ಯೆಗಳಿದ್ದರೆ ಪರಿ ಹರಿಸಿ ಕೊಳ್ಳಬಹುದು. ಹಾಗೂ ವೈದ್ಯರ ಸಲಹೆಯ ಮೇರೆಗೆ ಆಡಿಯೊಮೆಟ್ರಿ ತಪಾಸಣೆಯನ್ನು ಉಚಿತವಾಗಿ ಮಾಡಲಾಗುತ್ತದೆ ಎಂದರು.
ಪ್ರತಿ ವರ್ಷ ಮಾರ್ಚ್ 3ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದರ ಉದ್ದೇಶ ಸಾರ್ವಜನಿಕರಲ್ಲಿ ಕಿವಿಯ ಬಗ್ಗೆ ಅರಿವು ಮೂಡಿಸುವುದೇ ಆಗಿದೆ ಎಂದರು.
ಕಿವಿಯ ಅತೀ ಸೂಕ್ಷ್ಮವಾದ ಅಂಗವಾಗಿದ್ದು ಇದರ ಕಾರ್ಯವು ಮಹತ್ತರವಾಗಿದೆ. ವಾಕ್ಯವು ಬದಲಾಗುತ್ತಿರುವ ಮನಸ್ಥಿತಿಗಳು ಕಿವಿ ಮತ್ತು ಕೇಳುವಿಕೆಯ ಶೇಕಡಾ 80ರಷ್ಟು ಕಿವಿತೊಂದರೆ ಇರುವವರು ಚಿಕಿತ್ಸೆ ಪಡೆಯುತ್ತಿಲ್ಲಾ, ಕಾರಣ ಹಿಂಜರಿಕೆ ಮತ್ತು ತಜ್ಞ ವೈದ್ಯರ ಕೊರತೆ. 1.5 ಬಿಲಿಯನ್ ಜನರು ಶ್ರವಣ ದೋಷವನ್ನು ಹೊಂದಿದ್ದಾರೆ. 430 ಮಿಲಿಯನ್ ಜನರು ಸಂಪೂರ್ಣ ಶ್ರವಣ ದೋಷದ ತೊಂದರೆಯಿಂದ ಬಳಲುತಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ಅತಿಯಾದ ಶಬ್ದ ಮಾಲಿನ್ಯದಿಂದ ಶ್ರವಣ ದೋಷದ ತೊಂದರೆಗಳು ಹೆಚ್ಚಾಗುತ್ತಿದೆ ಎಂದರು.
Narayana Health: 2024ರ ವಿಶ್ವ ಶ್ರವಣ ದಿನದ ಧೈಯ ಆರೈಕೆಯ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸುವುದೇ ಇದರ ಉದ್ದೇಶವಾಗಿದೆ ಎಂದರು.