Sunday, December 7, 2025
Sunday, December 7, 2025

Communal harmony ಕೋಮು ಸೌಹಾರ್ದ ಕೆಡಿಸುವ ಕಾರ್ಯಕ್ರಮ ತೆಗೆದು ಹಾಕಲು & ದಂಡ ಪಾವತಿ ಮಾಡಲು ಕೆಲವು ಖಾಸಗಿ ಟೀವಿ ಚಾನಲ್ ಗಳಿಗೆ ಕೊರ್ಟ್ ನೋಟೀಸ್

Date:

Communal harmony ದ್ವೇಷ ಹರಡುವ ಮತ್ತು ಕೋಮು ಸೌಹಾರ್ದತೆಯನ್ನು ಕೆಡಿಸುವ ಸುದ್ದಿ ಕಾರ್ಯಕ್ರಮಗಳನ್ನು ತೆಗೆದು ಹಾಕಲು ಮತ್ತು ದಂಡ ಪಾವತಿಸಲು ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ (ಎನ್‌ಬಿಡಿಎಸ್‌ಎ) ಕೆಲ ಟಿವಿ ಚಾನೆಲ್‌ಗಳಿಗೆ ಸೂಚಿಸಿದೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಎ.ಕೆ. ಸಿಕ್ರಿ ಅವರು ಪ್ರಸ್ತುತ ಎನ್‌ಬಿಡಿಎಸ್‌ಎಯ ಅಧ್ಯಕ್ಷರಾಗಿದ್ದಾರೆ.

ಟೈಮ್ಸ್ ನೌ ನವಭಾರತ್‌ಗೆ 1 ಲಕ್ಷ ರೂಪಾಯಿ ಹಾಗೂ ನ್ಯೂಸ್ 18 ಇಂಡಿಯಾಗೆ 50 ಸಾವಿರ ರೂ. ದಂಡ ವಿಧಿಸಲಾಗಿದ್ದು, ಆಜ್ ತಕ್ ಸುದ್ದಿ ವಾಹಿನಿಗೆ ಎನ್‌ಬಿಡಿಎಸ್‌ಎ ಎಚ್ಚರಿಕೆ ನೀಡಿದೆ. ಈ ಮೂರು ಚಾನೆಲ್‌ಗಳು ತಮ್ಮ ಕಾರ್ಯಕ್ರಮಗಳ ಆನ್‌ಲೈನ್ ಆವೃತ್ತಿಗಳನ್ನು ಏಳು ದಿನಗಳಲ್ಲಿ ತೆಗೆದುಹಾಕಲು ಆದೇಶಿಸಿದೆ ಎಂದು ಲೈವ್‌ ಲಾ ವರದಿ ಮಾಡಿದೆ.

ಟಿವಿ ವಾಹಿನಿಗಳು ಕೋಮು ಸೌಹಾರ್ದತೆ ಕೆಡಿಸುವ ಮತ್ತು ಮತೀಯವಾದವನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿವೆ ಎಂದು ಸಾಮಾಜಿಕ ಕಾರ್ಯಕರ್ತ ಇಂದ್ರಜೀತ್ ಘೋರ್ಪಡೆ ದೂರು ದಾಖಲಿಸಿದ್ದರು. ಈ ದೂರು ಆಧರಿಸಿ ಎನ್‌ಬಿಡಿಎಸ್‌ಎ ಕ್ರಮ ಕೈಗೊಂಡಿದೆ.
ಟೈಮ್ಸ್ ನೌ ನವಭಾರತ್, ಮೆಗಾ ಟೈಮ್ಸ್ ಗ್ರೂಪ್‌ನ ಭಾಗವಾಗಿದ್ದು, ಇದರ ನಿರೂಪಕ ಹಿಮಾಂಶು ದೀಕ್ಷಿತ್ ಅವರು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಕೋಮು ದ್ವೇಷ ಹರಡಿದ್ದಾರೆ. ಅಂತರ್-ಧರ್ಮೀಯ ಸಂಬಂಧಗಳನ್ನು “ಲವ್ ಜಿಹಾದ್” ಎಂದು ಕರೆದಿದ್ದಾರೆ ಎಂಬ ಆರೋಪದ ಮೇಲೆ ದಂಡ ವಿಧಿಸಲಾಗಿದೆ.

ನ್ಯೂಸ್ 18 ಇಂಡಿಯಾ ಉದ್ಯಮಿ ಮುಖೇಶ್ ಅಂಬಾನಿಯವರ ರಿಲಾಯನ್ಸ್ ಗ್ರೂಪ್‌ನ ಭಾಗವಾಗಿದೆ. ಈ ಚಾನೆಲ್‌ನ ಮೂರು ಶೋಗಳಿಗೆ ದಂಡ ವಿಧಿಸಲಾಗಿದೆ. ಈ ಪೈಕಿ ಎರಡು ಶೋಗಳನ್ನು ಅಮನ್ ಚೋಪ್ರಾ ಮತ್ತು ಒಂದನ್ನು ಅಮಿಶ್ ದೇವಗನ್ ನಿರೂಪಿಸಿದ್ದಾರೆ. ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು ಲವ್ ಜಿಹಾದ್ ಎಂದು ಆರೋಪಿಸಿ ಒಂದು ಸಮುದಾಯದ ವಿರುದ್ಧ ಕೋಮು ದ್ವೇಷ ಹರಡಿದ್ದಕ್ಕೆ ಈ ಚಾನೆಲ್‌ಗೆ ದಂಡ ವಿಧಿಸಲಾಗಿದೆ.

ಇಂಡಿಯಾ ಟುಡೇ ಗ್ರೂಪ್‌ನ ಆಜ್ ತಕ್ ಚಾನೆಲ್‌ನಲ್ಲಿ ಸುಧೀರ್ ಚೌಧರಿ ನಿರೂಪಣೆ ಮಾಡಿರುವ ಕಾರ್ಯಕ್ರಮವೊಂದಕ್ಕೆ ಎಚ್ಚರಿಕೆ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಮನವಮಿ ಸಮಯದಲ್ಲಿ ನಡೆದ ಹಿಂಸಾಚಾರದ ಸುದ್ದಿ ಹೇಳುವಾಗ ಒಂದು ನಿರ್ದಿಷ್ಟ ಸಮುದಾಯದ ಗುರಿಯಾಗಿಸಲಾಗಿತ್ತು.

Communal harmony ಕಾರ್ಯಕ್ರಮ ಪ್ರಸಾರ ಮಾಡುವಾಗ ನಿಷ್ಪಕ್ಷಪಾತತನ, ತಟಸ್ಥ ನಿಲುವು ಹಾಗು ನಿಖರತೆಯನ್ನು ಕಾಪಾಡಬೇಕೆಂಬ ನೀತಿ ಸಂಹಿತ ಮತ್ತು ಪ್ರಸಾರ ಮಾನದಂಡಗಳನ್ನು ಉಲ್ಲಂಘಿಸಲಾಗಿದೆ ಎಂದು ದೂರುದಾರರು ಆರೋಪಿಸಿದ್ದರು.

‘ಲವ್‌ ಜಿಹಾದ್‌’ ಎಂಬ ಪದವನ್ನು ಗಂಭೀರ ಅವಲೋಕನದ ನಂತರ ಬಳಸಬೇಕು ಇಲ್ಲದೇ ಹೋದಲ್ಲಿ ಅದು ದೇಶದ ಜಾತ್ಯತೀತ ಪರಿಕಲ್ಪನೆಗೆ ಮಾರಕವಾಗಬಹುದು ಎಂದು ಎನ್‌ಬಿಡಿಎಸ್‌ಎ ಹೇಳಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...