Amrit Bharat Station scheme ಕೇಂದ್ರ ಸರ್ಕಾರ ದೇಶದಾದ್ಯಂತ ಸುಮಾರು 554 ರೈಲ್ವೇ ನಿಲ್ದಾಣಗಳನ್ನು ರೂ. 41,000 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಉನ್ನತಿಕರಿಸಲು ಜಾರಿಗೆ ತಂದಿರುವ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ “ಅಮೃತ್ ಭಾರತ್ ಸ್ಟೇಷನ್” ಯೋಜನೆಗೆ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ
ಅವರು ವರ್ಚುವಲ್ ಮುಖಾಂತರ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ರೈಲ್ವೇ ನಿಲ್ದಾಣದಲ್ಲಿ ಉಪಸ್ಥಿತರಿದ್ದು ವರ್ಚುವಲ್ ಮೂಲಕ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅವರು ಭಾಗವಹಿಸಿದ್ದರು.
ನಮ್ಮ ಶಿವಮೊಗ್ಗ ಜಿಲ್ಲೆಯಲ್ಲಿ ಮೂರು ರೈಲ್ವೇ ನಿಲ್ದಾಣಗಳು ಈ ಯೋಜನೆಯಲ್ಲಿ ಸೇರಿದ್ದು, ಕ್ರಮವಾಗಿ ಶಿವಮೊಗ್ಗ ನಗರ 24.37 ಕೋಟಿ, ಸಾಗರ 26.44 ಕೋಟಿ ಮತ್ತು ತಾಳಗುಪ್ಪ 27.86 ಕೋಟಿ ಒಟ್ಟು 78.67 ಕೋಟಿ ಮೊತ್ತದ ಕಾಮಗಾರಿಗೆ ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು ಹಾಗೂ ಅರಸಾಳು ಬಳಿ ರೂ. 2.17 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ರಸ್ತೆ ಮೇಲ್ಸೇತುವೆ ರಾಷ್ಟ್ರಕ್ಕೆ ಸಮರ್ಪಿಸಿದರು.
Amrit Bharat Station scheme ಈ ಸಂದರ್ಭದಲ್ಲಿ ಬಿಜೆಪಿ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಶ್ರೀ ಮೇಘರಾಜ್ ಅವರು, ನಗರ ಅಧ್ಯಕ್ಷರಾದ ಶ್ರೀ ಮೋಹನ್ ರೆಡ್ಡಿ ಅವರು, ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ಜಗದೀಶ್ ಅವರು, ವಿಭಾಗ ಪ್ರಭಾರಿಗಳಾದ ಶ್ರೀ ಗಿರೀಶ್ ಪಟೇಲ್ ಅವರು, ಪ್ರಮುಖರಾದ ಶ್ರೀ ಮಹೇಶ್ ಅವರು, ಶ್ರೀ ನಾಗರಾಜ್ ಅವರು, ಶ್ರೀ ರತ್ನಾಕರ್ ಶೆಣೈ ಅವರು, ಶ್ರೀ ಭರ್ಮಪ್ಪ ಅವರು ಸೇರಿದಂತೆ ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.