Thursday, December 11, 2025
Thursday, December 11, 2025

ಪ್ರತಿಭಟನೆ ಬಿಗಿ ಮಾಡಿದ ರೈತರು- ಸಚಿವರ ಆಶ್ವಾಸನೆ

Date:

ದೆಹಲಿಯಲ್ಲಿ ರೈತರು ಬೇಡಿಕೆಗಾಗಿ ಪ್ರತಿಭಟನೆಯನ್ನು ನಡೆಸಿದ್ದರು. ಬೇಡಿಕೆಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಆದರೆ, ರಾಜ್ಯ ಸರ್ಕಾರ ಇನ್ನೂ ಕೂಡ ಕಾಯ್ದೆ ಹಿಂಪಡೆದಿಲ್ಲ. ಈ ಮೂರು ಕಾಯ್ದೆಗಳನ್ನು ಹಿಂಪಡೆಯುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ತಿಳಿಸಿದ್ದಾರೆ.

ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ ಮತ್ತು ಜಾನುವಾರು ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಲು ಒತ್ತಾಯಿಸಿದರು. ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಸುವರ್ಣ ವಿಧಾನಸೌಧದ ಕೊಂಡುಸ್ಕೊಪ್ಪ ದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಅವರು, ಮುಖ್ಯಮಂತ್ರಿಗಳು ಪ್ರತಿಭಟನೆ ಸ್ಥಳಕ್ಕೆ ಬಂದು ರೈತರ ಮನವಿ ಆಲಿಸಲು ಬರಬೇಕು ಎಂದು ಕರೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ, ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು, “ರೈತರ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ” ಎಂದು ಭರವಸೆಯನ್ನು ನೀಡಿದರು.

ಸಚಿವ ಭೈರತಿ ಬಸವರಾಜ ಅವರು, ‘ ಅಧಿವೇಶನದ ಮೊದಲ ದಿನ ಸಂತಾಪ ಸೂಚನೆ ಬಳಿಕ ತುರ್ತು ಕಾರ್ಯಕ್ರಮದ ನಿಮಿತ್ತ ಸಿಎಂ ವಾರಣಾಸಿಗೆ ತೆರಳಿದ್ದಾರೆ. ಅಲ್ಲಿಂದ ವಾಪಸಾದ ಬಳಿಕ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Human Rights Commission ಹಕ್ಕು-ಕರ್ತವ್ಯ ಪಾಲನೆಯೊಂದಿಗೆ ಇತರರ ಹಕ್ಕುಗಳನ್ನು ಗೌರವಿಸಿ : ಹೇಮಂತ್ ಎನ್

Human Rights Commission ಎಲ್ಲರನ್ನು ಸಮಾನವಾಗಿ ಕಾಣುವುದು ಕೂಡ ಮಾನವ ಹಕ್ಕಾಗಿದ್ದು,...

ಅಬಕಾರಿ ದಾಳಿ: 51.75 ಲೀ ಗೋವಾ ಮದ್ಯ ಪತ್ತೆ

ಶಿವಮೊಗ್ಗ ತಾಲೂಕು ಗೋವಿಂದಪುರ ಗ್ರಾಮದ ಶಿವಕುಮಾರ್ ಬಿನ್ ವರದರಾಜ್ ಇವರಿಗೆ ಸೇರಿದ...

Sahyadri Narayana Hospital ವೈದ್ಯರ ಚಿಕಿತ್ಸೆಯಿಂದ ತಾಯಿಗೆ ದೃಷ್ಟಿ, ಅವಧಿಪೂರ್ವ ಮಗುವಿಗೆ ಜೀವದಾನ

Sahyadri Narayana Hospital 25 ವರ್ಷದ ಯುವತಿ ಗಂಡನ ಜೊತೆ ಸಂತೋಷವಾಗಿದ್ದಳು....

Akashavani Bhadravati ಆಕಾಶವಾಣಿಯಲ್ಲಿ ಹೆಲ್ತ್ ಹಿಂಟ್ಸ್ ಮತ್ತು ಬದುಕು ಜಟಕಾಬಂಡಿ ವಿಶೇಷ ಕಾರ್ಯಕ್ರಮಗಳ ಪ್ರಸಾರ

Akashavani Bhadravati ಡಿ 15 ರಿಂದ ಆಕಾಶವಾಣಿ ಭದ್ರಾವತಿ ಕೇಂದ್ರದಿಂದ ಪ್ರತಿದಿನ...