Astronomy ಪ್ರಾಚೀನ ಭಾರತದಲ್ಲಿ ಖಗೋಳಶಾಸ್ತ್ರವು ಆರ್ಯಭಟ, ಬ್ರಹ್ಮಗುಪ್ತ, ಭಾಸ್ಕರಚಾರ್ಯರಂತಹ ಶ್ರೇಷ್ಠ ಜ್ಞಾನಿಗಳ ಕೊಡುಗೆಯಿಂದ ಅಗ್ರಮಾನ್ಯತೆ ಪಡೆದಿತ್ತು ಎಂದು ಖಗೋಳ ವೀಕ್ಷಕ ಹರೋನಹಳ್ಳಿ ಸ್ವಾಮಿ ಅಭಿಪ್ರಾಯಪಟ್ಟರು.
ಸ್ವಾಮಿ ವಿವೇಕನಾಂದ ಬಡಾವಣೆಯ ಶ್ರೀನಾಗಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಟೆಲಿಸ್ಕೋಪ್ ಮೂಲಕ ಚಂದ್ರ, ನಕ್ಷತ ಪುಂಜಗಳ ಆಕಾಶ ವೀಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ದೇಶದ ಹೆಮ್ಮಯ ಜ್ಞಾನವನ್ನು ಆಕಾಶ ವೀಕ್ಷಣೆ ಮೂಲಕ, ವಿಶ್ವದ ಜ್ಞಾನ ತಿಳಿಯುವ ಮೂಲಕ ಅರಿತು ನಮ್ಮ ಚಿಂತನೆಗಳನ್ನು ವೃದ್ಧಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಗ್ರಹಗಳು, ಭೂಮಿ, ಸೂರ್ಯ, ಚಂದ್ರರ ಕುರಿತು ವಾಸ್ತವ ಮತ್ತು ವೈಜ್ಞಾನಿಕ ಮಾಹಿತಿಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕ. ಮೂಡನಂಬಿಕೆಗಳಿಂದ ಹೊರಬರಬೇಕು ಎಂದು ಸಲಹೆ ನೀಡಿದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ವಿಜ್ಞಾನದ ಕಾರ್ಯಕ್ರಮ ಜತೆಯಾಗಿಸಿರುವುದು ಉತ್ತಮ ಸಂಗತಿ ಆಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಕಾಶ ವೀಕ್ಷಣೆ ಕಾರ್ಯಕ್ರಮಕ್ಕೆ ಆಗಮಿಸಿರುವುದು ಸಂತಸದ ಸಂಗತಿ. ಧರ್ಮ ಮತ್ತು ವಿಜ್ಞಾನ ಜತೆಗೂಡಿ ವೈಜ್ಞಾನಿಕ ಚಿಂತನೆಯೊಂದಿಗೆ ಜನರು ಜೀವನ ನಡೆಸಿದರೆ ಅನೇಕ ಸಮಸ್ಯೆಗಳಿಂದ ಹೊರಬರಬಹುದು ಎಂದರು.
Astronomy ಆಕಾಶ ವೀಕ್ಷಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಗೌರವಾಧ್ಯಕ್ಷ ಎಸ್.ಜ್ಞಾನೇಶ್ವರ್, ಅಧ್ಯಕ್ಷ ನಾಗರಾಜ್, ಶಾಂತಾ ಶೆಟ್ಟಿ, ಶಶಿಧರ್ ಮತ್ತಿತರರು ಹಾಜರಿದ್ದರು. ಟೆಲಿಸ್ಕೋಪ್ ಮೂಲಕ ಚಂದ್ರ, ಗುರು, ನಕ್ಷತ್ರಗಳನ್ನು ಹರೋನಹಳ್ಳಿ ಸ್ವಾಮಿ ಅವರು ಸಾರ್ವಜನಿಕರಿಗೆ ತೋರಿಸಿದರು. ವೈಜ್ಞಾನಿಕ ವಿವರಣೆಗಳನ್ನು ಸಾರ್ವಜನಿಕರಿಗೆ ನೀಡಿದರು.