Sports News ಭಾರತ vs ಇಂಗ್ಲೆಂಡ್ 3ನೇ ಟೆಸ್ಟ್ 4 ನೇ ದಿನದ ಬಿಗಿಯಾದ ಆಟ.
ರಾಜ್‌ಕೋಟ್ ಕ್ರಿಕೆಟ್ 3 ನೇ ಟೆಸ್ಟ್‌ನಲ್ಲಿ ಭಾರತವು ಪ್ರತಿ ವಿಭಾಗದಲ್ಲೂ ಪ್ರಾಬಲ್ಯ ಸಾಧಿಸಿತು, ಇತಿಹಾಸದಲ್ಲಿ ಭಾರತ ತಂಡವು ಅತಿದೊಡ್ಡ ಗೆಲುವನ್ನು ದಾಖಲೆ ಪುಸ್ತಕದಲ್ಲಿ ಬರೆಯಿತು.
ಜೈಸ್ವಾಲ್ ತಮ್ಮ ಎರಡನೇ ದ್ವಿಶತಕ( ಅಜೇಯ 214) ಪೂರೈಸಿದರು. ಚೊಚ್ಚಲ ಆಟಗಾರರಾದ ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ಈರ್ವರೂ ಪ್ರಬಲ ಸೆಣಸಾಟವಾಡಿ ಗಮನ ಸೆಳೆದರು.. ಇದು ಟೀ ವಿರಾಮದ ನಂತರ ಎಲ್ಲಾ ಸಮಯವು ಜಡೇಜಾ ಬೌಲಿಂಗ್ ( 41 ಕ್ಕೆ 5) ಪ್ರದರ್ಶನಕ್ಕೇ ಮೀಸಲಾಗಿತ್ತು. ಅವರು ತಮ್ಮ ಮೊದಲ ಇನ್ನಿಂಗ್ಸ್ ಶತಕದ ಜೊತೆಗೆ ಐದು ವಿಕೆಟ್ ಗಳಿಕೆಯನ್ನು ಪಡೆದರು, ಕೊನೆಯಲ್ಲಿ ಭಾರತವು 434 ರನ್‌ಗಳಿಂದ ಭಾರೀ ಅಂತರದಿಂದ ಗೆಲುವು ಸಾಧಿಸಿತು.
ಈ ಗೆಲುವಿನಿಂದ ಭಾರತವು ಐದು ಟೆಸ್ಟ್ ಗಳ ಸರಣಿಯಲ್ಲಿ 2-1 ಮುನ್ನಡೆ ಪಡೆಯಿತು.
ಸಂಕ್ಷಿಪ್ತ
ಸ್ಕೋರ್ ಬೋರ್ಡ್
ಭಾರತ
445 & 430 -4 (ಡಿಕ್ಲೇರ್ಡ್)
ಇಂಗ್ಲೆಂಡ್
319 & 122
ಗಮನಾರ್ಹ ದಾಖಲೆ:
1.ಅಶ್ವಿನ್ ಈ ಪಂದ್ಯದಲ್ಲಿ 500 ನೇ ವಿಕೆಟ್ ಪಡೆದರು.
- Sports News ಜೈಸ್ವಾಲ್ ಒಂದೇ ಇನ್ನಿಂಗ್ಸ್ ನಲ್ಲಿ 12 ಸಿಕ್ಸರ್ ಬಾರಿಸಿ ಪಾಕಿಸ್ತಾನದ ವಾಸಿಂ ಅಕ್ರಂ ಅವರ ದಾಖಲೆ ಸರಿಗಟ್ಟಿದರು.